ಅಬುಧಾಬಿ ಫೆಬ್ರುವರಿ13: ಮಹಿಳೆಯೊಬ್ಬರು ಗಾಲಿಕುರ್ಚಿಯಲ್ಲಿ ಕುಳಿತು ಅಲ್ಲಿಂದಲೇ ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ. ಅಬುಧಾಬಿಯಲ್ಲಿ (Abu Dhabi) ನಡೆದ ‘ಅಹ್ಲಾನ್ ಮೋದಿ’ (ಹಲೋ, ಮೋದಿ) ಕಾರ್ಯಕ್ರಮದ ಭಾಗವಾಗಲು ಈ ಹಿರಿಯ ಮಹಿಳೆ ದುಬೈನಿಂದ ಪ್ರಯಾಣಿಸಿದ್ದಾರೆ.ಇಂದು (ಮಂಗಳವಾರ) ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್(Mohammed bin Zayed Al Nahyan) ಅವರು ಪ್ರಧಾನಿಯನ್ನು ಸ್ವಾಗತಿಸಿದರು. ಉಭಯ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ಅಪ್ಪಿಕೊಂಡರು.
ನಿಮಗೆ ಪ್ರೇರಣೆ ಏನು ಎಂದು ಎನ್ ಡಿಟಿವಿ ಕೇಳಿದಾಗ, “ನನ್ನ ಪ್ರೇರಣೆ ನನ್ನ ದೇಶದ ಮೇಲಿನ ಪ್ರೀತಿ. ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ. 48 ವರ್ಷಗಳಿಂದ ನಾನು ಇಲ್ಲಿದ್ದೇನೆ, ದಿಲ್ ಹಿಂದೂಸ್ತಾನಿ (ಹೃದಯ ಹಿಂದೂಸ್ತಾನಿ). ಆದ್ದರಿಂದ ಮೊಣಕಾಲು ಶಸ್ತ್ರಚಿಕಿತ್ಸೆ ಮತ್ತು ಈ ಜಂಜಾಟ ಮುಖ್ಯವಲ್ಲ. ನಾನು ಇದನ್ನೆಲ್ಲ ಲೆಕ್ಕಿಸುವುದಿಲ್ಲ ಎಂದು ಎಂದು ಗಾಲಿಕುರ್ಚಿಯಲ್ಲಿದ್ದ ಮಹಿಳೆ ಹೇಳಿದ್ದಾರೆ.
#WATCH | Cultural procession underway by Indian diaspora at Zayed Sports stadium, as a part of ‘Ahlan Modi’ event in Abu Dhabi pic.twitter.com/P87V9zJq3n
— ANI (@ANI) February 13, 2024
“ಎರಡು ದಿನದಿಂದ ನಾನು ಏನು ಧರಿಸಬೇಕೆಂದು ಯೋಚಿಸುತ್ತಿದ್ದೆ … ನನ್ನ ಉಗುರುಗಳು, ನನ್ನ ಉಂಗುರಗಳು, ನನ್ನ ಬಿಂದಿ, ನನ್ನ ಸ್ಕಾರ್ಫ್, ಎಲ್ಲವನ್ನೂ ನೋಡಿ, ಪೂರ್ತಿ ಹಿಂದೂಸ್ತಾನಿ ಎಂದು ಮಹಿಳೆ ಖುಷಿಯಿಂದ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು “ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಬುಧಾಬಿಯಲ್ಲಿ ಭಾರತೀಯ ಸಮುದಾಯದಿಂದ ಆಯೋಜಿಸಲಾದ ಕಾರ್ಯಕ್ರಮಕ್ಕೆ, 65,000 ಕ್ಕೂ ಹೆಚ್ಚು ಜನರು ನೋಂದಣಿ ಮಾಡಿದ್ದು, ಭಾರತೀಯ ವಲಸಿಗ ಸಮುದಾಯದಿಂದ ಅಗಾಧ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ.
“ನಾನು ಆನಂದಿಸುತ್ತೇನೆ. ನಾನು ಗಾಲಿಕುರ್ಚಿಯಲ್ಲಿ ನೃತ್ಯ ಮಾಡುತ್ತೇನೆ, ತೊಂದರೆ ಇಲ್ಲ” ಎಂದು ಮಹಿಳೆ ನಗುತ್ತಾ ಹೇಳಿದ್ದಾರೆ.
ಸರಿಸುಮಾರು 3.5 ಮಿಲಿಯನ್ ಭಾರತೀಯ ವಲಸಿಗ ಸಮುದಾಯವು ಯುಎಇಯಲ್ಲಿ ಅತಿದೊಡ್ಡ ಜನಾಂಗೀಯ ಸಮುದಾಯವಾಗಿದೆ, ಇದು ದೇಶದ ಜನಸಂಖ್ಯೆಯ ಸರಿಸುಮಾರು 35 ಪ್ರತಿಶತವನ್ನು ಹೊಂದಿದೆ.
ಇದನ್ನೂ ಓದಿ: ಯುಎಇಗೆ ಆಗಮಿಸಿದ ಪ್ರಧಾನಿ ಮೋದಿಗೆ ರಾಯಲ್ ಅಪ್ಪುಗೆ : ಉಭಯ ನಾಯಕರ ನಡುವೆ ಮಹತ್ವದ ಒಪ್ಪಂದ
ಇಂಡಿಯನ್ ಪೀಪಲ್ ಫೋರಮ್‌ನ ಅಧ್ಯಕ್ಷ ಮತ್ತು ‘ಅಹ್ಲಾನ್ ಮೋದಿ’ ಉಪಕ್ರಮದ ನಾಯಕ ಜಿತೇಂದ್ರ ವೈದ್ಯ, ಈ ಅಭೂತಪೂರ್ವ ಕಾರ್ಯಕ್ರಮಕ್ಕಾಗಿ ತಮ್ಮ ಸಂತೋಷ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದರು. “ನಮ್ಮ ಗೇಟ್‌ಗಳು ಇನ್ನೂ ತೆರೆದಿಲ್ಲ, ಆದರೆ ಜನರು ಈಗಾಗಲೇ ಈ ಕ್ರೀಡಾಂಗಣದ ಪ್ರತಿ ಗೇಟ್‌ನಲ್ಲಿ ನಿಂತಿದ್ದಾರೆ. ದೇಶದ ಹೊರಗೆ ಪ್ರಧಾನಿ ಮೋದಿಯವರ ಸಾರ್ವಜನಿಕ ಕಾರ್ಯಕ್ರಮವನ್ನು ಜನರು ನೆನಪಿಸಿಕೊಂಡಾಗಲೆಲ್ಲಾ ‘ಅಹ್ಲಾನ್ ಮೋದಿ’ ನೆನಪಿಸಿಕೊಳ್ಳುತ್ತಾರೆ ಎಂದು ನಾನು ಗ್ಯಾರಂಟಿಯಾಗಿ ಹೇಳಬಲ್ಲೆ. ಎಂದು ಎಎನ್ಐ ಜತೆ ಮಾತನಾಡಿದ ವೈದ್ಯ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Tue, 13 February 24