Sign In

By signing in or creating an account, you agree with Associated Broadcasting Company's Terms & Conditions and Privacy Policy.

India Is World’s Most Populous Country: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ಭಾರತ(India)ವು ಚೀನಾ(China)ವನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತಿ ಹೆಚ್ಚು ಜನಸಂಖ್ಯೆ(Population) ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ ಈ ಕುರಿತು ವಿಶ್ವಸಂಸ್ಥೆ ವರದಿ ನೀಡಿದೆ.

India Is World's Most Populous Country: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಭಾರತದ ಜನಸಂಖ್ಯೆImage Credit source: Telegraph
Follow us
ನಯನಾ ರಾಜೀವ್
|

Updated on:Apr 19, 2023 | 11:38 AM

ಭಾರತ(India)ವು ಚೀನಾ(China)ವನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತಿ ಹೆಚ್ಚು ಜನಸಂಖ್ಯೆ(Population) ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ ಈ ಕುರಿತು ವಿಶ್ವಸಂಸ್ಥೆ ವರದಿ ನೀಡಿದೆ. ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತವು ಈಗ ಚೀನಾಗಿಂತ 2.9 ಮಿಲಿಯನ್ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಕಳೆದ ಆರು ದಶಕಗಳಲ್ಲಿ ಚೀನಾದ ಒಟ್ಟಾರೆ ಜನಸಂಖ್ಯೆಯು ಮೊದಲ ಬಾರಿಗೆ ಕುಸಿತವನ್ನು ದಾಖಲಿಸಿದೆ. 2022 ರ ಕೊನೆಯಲ್ಲಿ ಚೀನಾದಲ್ಲಿ ಹಿಂದಿನ ವರ್ಷಕ್ಕಿಂತ 850,000 ಕಡಿಮೆ ಜನರಿದ್ದಾರೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿ ಮಾಡಿತ್ತು.

ಜನಸಂಖ್ಯೆಯ ಕುಸಿತಕ್ಕೆ ಮುಖ್ಯ ಅಂಶಗಳು ವೃದ್ಧರ ಸಂಖ್ಯೆ ಹೆಚ್ಚಾಗುವುದು ಮತ್ತು ಜನನ ದರದಲ್ಲಿನ ಇಳಿಕೆ. ಸಾಮೂಹಿಕ ಕೃಷಿ ಮತ್ತು ಕೈಗಾರಿಕೀಕರಣಕ್ಕಾಗಿ ಮಾವೋ ಝೆಡಾಂಗ್‌ನ ವಿನಾಶಕಾರಿ ಅಭಿಯಾನವು ಪ್ರಾರಂಭವಾದಾಗ 1950 ರ ದಶಕದ ಉತ್ತರಾರ್ಧದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಸಮಯದಲ್ಲಿ ಚೀನಾ ಕೊನೆಯದಾಗಿ ಜನಸಂಖ್ಯೆಯ ಕುಸಿತವನ್ನು ದಾಖಲಿಸಿತ್ತು ಎಂದು ನಂಬಲಾಗಿದೆ. ಈ ಅಭಿಯಾನದಿಂದಾಗಿ, ಚೀನಾದಲ್ಲಿ ದೊಡ್ಡ ಪ್ರಮಾಣದ ಕ್ಷಾಮ ಉಂಟಾಗಿತ್ತು, ಇದರಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದರು.

ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ ಇದೀಗ ಭಾರತದ ಜನಸಂಖ್ಯೆ 1,428.6 ಮಿಲಿಯನ್ ಆಗಿದ್ದರೆ, ಚೀನಾದ ಜನಸಂಖ್ಯೆ 1,425.7 ಮಿಲಿಯನ್ ಆಗಿದ್ದು, 2.9 ಮಿಲಿಯನ್ ವ್ಯತ್ಯಾಸವಾಗಿದೆ. ವಿಶ್ವಸಂಸ್ಥೆಯ ವರದಿ-2020 ರ ಪ್ರಕಾರ, ಭಾರತವು ಈ ವರ್ಷ ಚೀನಾವನ್ನು ಬಿಟ್ಟು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು, ವರದಿಯ ಪ್ರಕಾರ, ಚೀನಾದ 1.426 ಶತಕೋಟಿಗೆ ಹೋಲಿಸಿದರೆ 2022 ರಲ್ಲಿ ಭಾರತದ ಜನಸಂಖ್ಯೆಯು 1.412 ಬಿಲಿಯನ್ ಆಗಿತ್ತು. 2050 ರಲ್ಲಿ ಭಾರತದ ಜನಸಂಖ್ಯೆಯು 1.668 ಶತಕೋಟಿ ಎಂದು ಅಂದಾಜಿಸಲಾಗಿದೆ, ಅದು ಆ ಸಮಯದಲ್ಲಿ ಚೀನಾದ ಪ್ರಸ್ತುತ ಜನಸಂಖ್ಯೆಗಿಂತ 1.317 ಶತಕೋಟಿ ಹೆಚ್ಚಾಗಿರುತ್ತದೆ.

ಮತ್ತಷ್ಟು ಓದಿ: 800 ಕೋಟಿ ದಾಟಿದ ವಿಶ್ವ ಜನಸಂಖ್ಯೆ, ಜಾಗತಿಕ ಜನಸಂಖ್ಯೆಗೆ ಭಾರತದ ಕೊಡುಗೆ 17.7 ಕೋಟಿ

1950 ರಲ್ಲಿ ಯುಎನ್ ಜನಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಮತ್ತು ಬಿಡುಗಡೆ ಮಾಡಲು ಪ್ರಾರಂಭಿಸಿದ ನಂತರ ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಿರುವುದು ಇದೇ ಮೊದಲು. ಜೀವಿತಾವಧಿಯಲ್ಲಿ ಚೀನಾವು ಭಾರತಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಇದು ಮಹಿಳೆಯರ ಸರಾಸರಿ ಜೀವಿತಾವಧಿ 82 ಹಾಗೂ ಪುರುಷರ ಜೀವಿತಾವಧಿ 76 ಆಗಿದೆ, ವರದಿಯ ಪ್ರಕಾರ ಭಾರತದ ಅಂಕಿಅಂಶಗಳು 74 ಮತ್ತು 71 ಆಗಿದೆ.

ಕಳೆದ ವರ್ಷದಲ್ಲಿ ಭಾರತದ ಜನಸಂಖ್ಯೆಯು 1.56 ಪ್ರತಿಶತದಷ್ಟು ಬೆಳೆದಿದೆ ಮತ್ತು 1,428,600,000 ಮಿಲಿಯನ್ (142.86 ಕೋಟಿ) ಎಂದು ಅಂದಾಜಿಸಲಾಗಿದೆ ಮತ್ತು ಅದರ ಜನಸಂಖ್ಯೆಯ ಮೂರನೇ ಎರಡರಷ್ಟು ಅಥವಾ 68 ಪ್ರತಿಶತದಷ್ಟು ಜನರು 15 ರಿಂದ 64 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದ್ದಾರೆ. ಇತ್ತೀಚಿನ ವರದಿಯು ಭಾರತದ ಒಟ್ಟು ಫಲವತ್ತತೆ ದರವನ್ನು 2.0 ಎಂದು ಅಂದಾಜಿಸಲಾಗಿದೆ.

UNFPA ತನ್ನ ವರದಿಯಲ್ಲಿ 2030 ರವರೆಗೆ, ಭಾರತವು ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಉಳಿಯುತ್ತದೆ ಎಂದು ಹೇಳಿದೆ. ವರದಿಯ ಪ್ರಕಾರ, 2025 ರವರೆಗೆ ಭಾರತವು ಯುವ ಜನಸಂಖ್ಯೆಯಲ್ಲಿ ಏರಿಕೆ / ಹೆಚ್ಚಳವನ್ನು ಅನುಭವಿಸುತ್ತದೆ ಆದರೆ ನಂತರ ಅದು ಕುಸಿಯುತ್ತದೆ.

ಬೀಜಿಂಗ್ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿದ ನಂತರ ಮತ್ತು ಮೂರು ಮಕ್ಕಳಿಗೆ ಅವಕಾಶ ನೀಡಿದ ನಂತರ ಚೀನಾದಲ್ಲಿ ಜನನಗಳ ಸಂಖ್ಯೆಯು ನಿರೀಕ್ಷೆಯಂತೆ ಹೆಚ್ಚಾಗಲಿಲ್ಲ. ಪ್ರಾಥಮಿಕ ಕಾರಣಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚಗಳು, ಮಕ್ಕಳ ಆರೈಕೆ ಮತ್ತು ಶಿಕ್ಷಣ ಕೂಡ ಸೇರಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 19 April 23

ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!