4 ವರ್ಷದ ಮಗಳನ್ನು ಕೊಂದು ಏನೂ ಗೊತ್ತೇ ಇಲ್ಲವೆಂಬಂತೆ ನಾಟಕವಾಡಿದ ಭಾರತ ಮೂಲದ ವೈದ್ಯೆ

ಭಾರತೀಯ ಮೂಲದ ವೈದ್ಯರೊಬ್ಬರು ತಮ್ಮ 4 ವರ್ಷದ ಮಗಳನ್ನು ಕೊಂದು ಆಕೆಯನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ನಂತರ ಆಕೆಯದ್ದು ಆಕಸ್ಮಿಕ ಸಾವು ಎಂದು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಮಗಳು ಸಾವನ್ನಪ್ಪಿದ ಬಳಿಕ ತಾವೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಆ ಪುಟ್ಟ ಮಗುವನ್ನು ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಕೊಲೆಗೆ ಕಾರಣವೇನೆಂಬುದು ಮಾತ್ರ ದೃಢಪಟ್ಟಿಲ್ಲ.

4 ವರ್ಷದ ಮಗಳನ್ನು ಕೊಂದು ಏನೂ ಗೊತ್ತೇ ಇಲ್ಲವೆಂಬಂತೆ ನಾಟಕವಾಡಿದ ಭಾರತ ಮೂಲದ ವೈದ್ಯೆ
Dr Neha Gupta

Updated on: Feb 26, 2026 | 9:09 PM

ವಾಷಿಂಗ್ಟನ್, ಫೆಬ್ರವರಿ 26: ಅಮೆರಿಕದ ವೈದ್ಯರೊಬ್ಬರು ಫ್ಲೋರಿಡಾದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅವರು ತನ್ನ 4 ವರ್ಷದ ಮಗಳನ್ನು ಈಜುಕೊಳದಲ್ಲಿ ಮುಳುಗಿಸಿ ಕೊಂದಿದ್ದರು. ಆರೋಪ ಹೊರಿಸಿ ಹಲವು ತಿಂಗಳುಗಳ ನಂತರ ಜೂನ್ 2025ರಲ್ಲಿ ನಡೆದ ಘಟನೆಯನ್ನು ತಿಳಿಸಲು ಭಾರತೀಯ ಮೂಲದ ವೈದ್ಯರೊಬ್ಬರು 911ಗೆ ಕರೆ ಮಾಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಒಕ್ಲಹೋಮ ಮೂಲದ ಮಕ್ಕಳ ತಜ್ಞೆ ಡಾ. ನೇಹಾ ಗುಪ್ತಾ ತಮ್ಮ ಪುಟ್ಟ ಮಗಳ ಸಾವನ್ನು ಮುಚ್ಚಿಹಾಕಲು ಫೋನ್ ಮಾಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

37 ವರ್ಷದ ನೇಹಾ ಗುಪ್ತಾ ಪೊಲೀಸರಿಗೆ ಫೋನ್ ಮಾಡಿ ತನ್ನ ಮಗಳು ಆರಿಯಾ ತಲಥಿ ಬಾಡಿಗೆ ಮನೆಯಿಂದ ಹೊರಬಂದು ಮಧ್ಯರಾತ್ರಿ ಈಜುಕೊಳಕ್ಕೆ ಬಿದ್ದಿದ್ದಾಳೆ. ಅವಳು ಈಜುಕೊಳದ ಆಳಕ್ಕೆ ಬಿದ್ದಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಘಟನೆ ನಡೆದಾಗ ಮಕ್ಕಳ ವೈದ್ಯೆ ಮತ್ತು ಅವರ ಮಗಳು ಒಕ್ಲಹೋಮದಿಂದ ಫ್ಲೋರಿಡಾದ ಮಿಯಾಮಿಗೆ ಭೇಟಿ ನೀಡಿದ್ದರು.


ಇದನ್ನೂ ಓದಿ: ದೆಹಲಿ: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ, ಮೂವರು ಹೆಣ್ಣುಮಕ್ಕಳ ಶವ ಪತ್ತೆ

ಪೊಲೀಸರು ಬಂದ ನಂತರ ಗೋಳಾಡಿದ ಡಾ. ನೇಹಾ ಗುಪ್ತಾ, ನಾನು ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ ನನಗೆ ಈಜುವುದು ಹೇಗೆಂದು ತಿಳಿದಿಲ್ಲದ ಕಾರಣದಿಂದ ಆಕೆಯನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. “ನಾವು ಮಲಗಿದ್ದೆವು, ನನಗೆ ಏನೋ ಶಬ್ದ ಕೇಳಿಸಿತು. ಅವಳು ಈಜುಕೊಳದಲ್ಲಿ ಬಿದ್ದಿದ್ದಳು. ನಾನು ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ ನನಗೆ ಈಜುವುದು ಹೇಗೆಂದು ತಿಳಿದಿಲ್ಲ. ಹಾಗಾಗಿ ಅವಳನ್ನು ಹೊರಗೆ ತರಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮನೆಕೆಲಸದಾಕೆಯೇ ವಿಲನ್; ಮಾಲೀಕರ ಮನೆಯಲ್ಲಿ ನಕಲಿ ಇಡಿ ದಾಳಿ ನಡೆಸಿ ಲಕ್ಷಗಟ್ಟಲೆ ಹಣ ದೋಚಿದ ಮಹಿಳೆ!

ಆದರೆ, ಶವಪರೀಕ್ಷೆಯ ಸಮಯದಲ್ಲಿ ಆ ಹುಡುಗಿಯ ಶ್ವಾಸಕೋಶ ಅಥವಾ ಹೊಟ್ಟೆಯಲ್ಲಿ ನೀರು ಕಂಡುಬಂದಿಲ್ಲ. ಅವಳನ್ನು ಕೊಳದಲ್ಲಿ ಹಾಕುವ ಮೊದಲೇ ಅವಳು ಸತ್ತಿದ್ದಾಳೆಂದು ಬಯಲಾಯಿತು. ತನಿಖಾಧಿಕಾರಿಗಳು ಅವಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದಾದ ನಂತರ ನೇಹಾ ಗುಪ್ತಾ ಅವರನ್ನು ಬಂಧಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us