ಕಲ್ಲಂಗಡಿ ಚಿತ್ರವಿರುವ ಛತ್ರಿ ಹಿಡಿದ ಭಾರತದ ಮಹಿಳೆ ವಿರುದ್ಧ ಸಿಂಗಾಪುರದಲ್ಲಿ ಕೇಸ್; ಕಾರಣ ಇಲ್ಲಿದೆ

ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ಯಾಲೆಸ್ತೀನಿಯನ್ ಉದ್ದೇಶವನ್ನು ಬೆಂಬಲಿಸಲು ಕೆಲವು ಜನ ಕಲ್ಲಂಗಡಿ ಚಿತ್ರಗಳಿರುವ ಛತ್ರಿಗಳನ್ನು ಹಿಡಿದುಕೊಂಡರು. ಕಲ್ಲಂಗಡಿ ಹಣ್ಣಿನ ಬಣ್ಣಗಳು ಪ್ಯಾಲೇಸ್ಟಿನಿಯನ್ ಧ್ವಜದಲ್ಲಿರುವಂತೆಯೇ ಇರುತ್ತವೆ. ಈ ಹಣ್ಣುಗಳು ಪ್ಯಾಲೇಸ್ಟಿನಿಯನ್ ಒಗ್ಗಟ್ಟಿನ ಸಂಕೇತವಾಗಿವೆ.

ಕಲ್ಲಂಗಡಿ ಚಿತ್ರವಿರುವ ಛತ್ರಿ ಹಿಡಿದ ಭಾರತದ ಮಹಿಳೆ ವಿರುದ್ಧ ಸಿಂಗಾಪುರದಲ್ಲಿ ಕೇಸ್; ಕಾರಣ ಇಲ್ಲಿದೆ
ಕಲ್ಲಂಗಡಿ ಚಿತ್ರವಿರುವ ಛತ್ರಿ
Follow us
| Updated By: ಸುಷ್ಮಾ ಚಕ್ರೆ

Updated on: Sep 18, 2024 | 7:24 PM

ಸಿಂಗಾಪುರ: ಸಿಂಗಾಪುರದ ಅಧ್ಯಕ್ಷರ ಭವನವಾದ ಇಸ್ತಾನಕ್ಕೆ ಪ್ಯಾಲೆಸ್ತೀನ್ ಪರ ಮೆರವಣಿಗೆ ನಡೆಸಿದ ಆರೋಪದ ಮೇಲೆ ಭಾರತೀಯ ಮೂಲದ ಒಬ್ಬ ಮಹಿಳೆ ಸೇರಿದಂತೆ ಮೂವರು ಸಿಂಗಾಪುರದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ. ಫೆಬ್ರವರಿ 2ರಂದು ಲೈಸೆನ್ಸ್ ಇಲ್ಲದೆ ಮೆರವಣಿಗೆಯನ್ನು ಆಯೋಜಿಸಿದ್ದಕ್ಕಾಗಿ ಸಾರ್ವಜನಿಕ ಸುವ್ಯವಸ್ಥೆ ಕಾಯಿದೆಯಡಿ ಜೂನ್‌ನಲ್ಲಿ ಮೂವರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಭಾರತ ಮೂಲದ ಅಣ್ಣಾಮಲೈ ಕೋಕಿಲಾ ಪಾರ್ವತಿ ಎಂಬ ಮಹಿಳೆ ಮೆರವಣಿಗೆಯನ್ನು ಆಯೋಜಿಸಲು ಇತರ ಇಬ್ಬರು ಮಹಿಳೆಯರು ಮತ್ತು ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಸಂಚಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 36 ವರ್ಷದ ಕೋಕಿಲಾ ಪಾರ್ವತಿ ಅವರ ವಿರುದ್ಧ ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕ ಮೆರವಣಿಗೆಯನ್ನು ಆಯೋಜಿಸಲು ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿದ್ದು, ಮಧ್ಯಾಹ್ನ 2ರಿಂದ 3 ಗಂಟೆಯ ನಡುವೆ ನಡೆದ ಮೆರವಣಿಗೆಯನ್ನು ಆಯೋಜಿಸಿದ ಆರೋಪದಲ್ಲಿ ಸಿತಿ ಅಮೀರಾ ಮೊಹಮ್ಮದ್ ಅಸ್ರೋರಿ (29) ಮತ್ತು ಮೊಸಮ್ಮದ್ ಸೊಬಿಕುನ್ ನಹರ್ (25) ಅವರ ವಿರುದ್ಧ ಕೂಡ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ: ಸಾಮೂಹಿಕ ಹತ್ಯೆ; ಲೆಬನಾನ್‌ನಲ್ಲಿ ಪೇಜರ್ ಸ್ಫೋಟದ ಬಳಿಕ ಇಸ್ರೇಲ್ ವಿರುದ್ಧ ಇರಾನ್ ಆಕ್ರೋಶ

ಫೆಬ್ರವರಿ 2ರಂದು ಮಧ್ಯಾಹ್ನ 2 ಗಂಟೆಗೆ ಮಾಲ್‌ನ ಹೊರಗೆ ಆರ್ಚರ್ಡ್ ರಸ್ತೆಯಲ್ಲಿ ಸುಮಾರು 70 ಜನರು ಜಮಾಯಿಸಿ ಇಸ್ತಾನಾ ಕಡೆಗೆ ಮೆರವಣಿಗೆ ಸಾಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ