Iran: ‘ಮಹಿಳೆಯರು ಫಿಜ್ಜಾ ತಿನ್ನುವ, ಪುರುಷರು ಚಹಾ ನೀಡುವ ದೃಶ್ಯಗಳನ್ನು ಟಿವಿಯಲ್ಲಿ ಇನ್ಮುಂದೆ ತೋರಿಸುವಂತಿಲ್ಲ‘

ಟಿವಿಗಳಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದು, ಕೋಲ್ಡ್​ ಡ್ರಿಂಕ್ಸ್​ ಕುಡಿಯುವ ಜಾಹೀರಾತುಗಳೆಲ್ಲ ಸಹಜ. ಆಯಾ ಬ್ರ್ಯಾಂಡ್​ಗೆ ತಕ್ಕಂತೆ ಆಯಾ ಕಂಪನಿಗಳು ತಮಗೆ ಅನುಕೂಲವಾಗುವಂತ, ಕ್ರಿಯಾಶೀಲ ಜಾಹೀರಾತುಗಳನ್ನು ಮಾಡಿ, ಟಿವಿಗಳಿಗೆ ಪ್ರಸಾರ ಮಾಡಲು ಕೊಡುತ್ತವೆ.

Iran: ‘ಮಹಿಳೆಯರು ಫಿಜ್ಜಾ ತಿನ್ನುವ, ಪುರುಷರು ಚಹಾ ನೀಡುವ ದೃಶ್ಯಗಳನ್ನು ಟಿವಿಯಲ್ಲಿ ಇನ್ಮುಂದೆ ತೋರಿಸುವಂತಿಲ್ಲ‘
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 08, 2021 | 5:35 PM

ಇರಾನ್​​ನಲ್ಲಿ ಹೊಸ ಸೆನ್ಸಾರ್​ ನಿಯಮಗಳು ಜಾರಿಯಾಗಿದ್ದು, ಅದರ ಅನ್ವಯ ಇನ್ನುಮುಂದೆ ಟಿವಿಗಳಿಗೆ ಒಂದೆರಡು ವಿಚಿತ್ರ ನಿರ್ಬಂಧ ವಿಧಿಸಲಾಗಿದೆ. ಇದೀಗ ಜಾರಿಯಾಗಿರುವ ಹೊಸ ಟಿವಿ ಸೆನ್ಸಾರ್​ಶಿಪ್​ ಕಾನೂನಿನ ಅಡಿ ಇನ್ನುಮುಂದೆ ಟಿವಿಯಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದನ್ನು ತೋರಿಸುವಂತಿಲ್ಲ. ಹಾಗೇ, ಪುರುಷರು ಟೀ, ಕಾಫಿಗಳನ್ನು ಮಹಿಳೆಯರಿಗೆ ನೀಡುವ ದೃಶ್ಯವನ್ನೂ ಪ್ರಸಾರ ಮಾಡುವಂತಿಲ್ಲ..!

ಟಿವಿಗಳಲ್ಲಿ ಮಹಿಳೆಯರು ಫಿಜ್ಜಾ ತಿನ್ನುವುದು, ಕೋಲ್ಡ್​ ಡ್ರಿಂಕ್ಸ್​ ಕುಡಿಯುವ ಜಾಹೀರಾತುಗಳೆಲ್ಲ ಸಹಜ. ಆಯಾ ಬ್ರ್ಯಾಂಡ್​ಗೆ ತಕ್ಕಂತೆ ಆಯಾ ಕಂಪನಿಗಳು ತಮಗೆ ಅನುಕೂಲವಾಗುವಂತ, ಕ್ರಿಯಾಶೀಲ ಜಾಹೀರಾತುಗಳನ್ನು ಮಾಡಿ, ಟಿವಿಗಳಿಗೆ ಪ್ರಸಾರ ಮಾಡಲು ಕೊಡುತ್ತವೆ. ಆದರೆ ಇರಾನ್​​ನ ಟಿವಿಗಳು ಇನ್ಮುಂದೆ ಮಹಿಳೆಯರು ಫಿಜ್ಜಾ ತಿಂದು, ತಂಪು ಪಾನೀಯ ಕುಡಿಯುವ ಅಂದರೆ ಕೆಂಪು ಬಣ್ಣದ ಪಾನೀಯಗಳನ್ನು ಕುಡಿಯುವ ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ. ಅಷ್ಟೇ ಅಲ್ಲ, ಮಹಿಳೆಯರು ಚರ್ಮದ ಕೈಗವಸು ಧರಿಸಿರುವ ದೃಶ್ಯಗಳಿಗೂ ನಿಷೇಧ ಹೇರಲಾಗಿದೆ. ಪುರುಷರಿಗೂ ಅನ್ವಯ ಆಗುವ ಒಂದು ನಿರ್ಬಂಧ ಹೇರಲಾಗಿದೆ. ಅದರ ಅನ್ವಯ ಇನ್ನು ಮುಂದೆ ಇರಾನ್​ ಟಿವಿಗಳಲ್ಲಿ, ಪುರುಷರು ಮಹಿಳೆಯರಿಗೆ ಚಹಾ ಸರ್ವ್​ ಮಾಡುವ ದೃಶ್ಯ ತೋರಿಸುವಂತಿಲ್ಲ.

ಹೊಸ ಸೆನ್ಸಾರ್​ಶಿಪ್​​​ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಟಿವಿ ನಿರ್ಮಾಪಕರಿಗೆ ಸೆನ್ಸಾರ್​ ಮಂಡಳಿ ಸೂಚನೆ ನೀಡಿದೆ.  ಈ ನಿಯಮ ಜಾರಿಯಾಗುತ್ತಿದ್ದಂತೆ ಇರಾನ್​ನಲ್ಲಿಯೇ ಸಣ್ಣ ಮಟ್ಟದ ವಿರೋಧ ವ್ಯಕ್ತವಾಗಿದೆ. ಆದರೆ ಪಾಲಿಸದೆ ಇದ್ದ ಟಿವಿ ಚಾನಲ್​​ಗಳಿಗೆ ದಂಡ ಕಟ್ಟಿಟ್ಟ ಬುತ್ತಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಐಟಿ ದಾಳಿಗಳು ಲಖಿಂಪುರ್ ಖೇರಿ ಘಟನೆಯನ್ನು ಟೀಕಿಸಿದ್ದರ ಪರಿಣಾಮವಾಗಿರಬಹುದು: ಶರದ್ ಪವಾರ್

‘ನಿನ್ನ ಸನಿಹಕೆ’ ಸಿನಿಮಾ ರೆಸ್ಪಾನ್ಸ್​ ನೋಡಿ ಅತ್ತ ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​