Girl’s Education: ಇರಾನ್​ನಲ್ಲಿ ಶಾಲೆಗೆ ಹೋಗುವುದನ್ನು ತಡೆಯಲು ಹೆಣ್ಣುಮಕ್ಕಳಿಗೆ ವಿಷಪ್ರಾಶನ

ಇರಾನ್​ನಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ತೀರಾ ಕಡೆಗಣಿಸಲಾಗುತ್ತಿದೆ, ಶಾಲೆಗೆ ಹೋಗದಂತೆ ತಡೆಯಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ ಇರಾನ್​ನ ಖೋಂ ನಗರದಲ್ಲಿ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗದಂತೆ ತಡೆಯಲು ವಿಷವುಣಿಸಿದ ಘಟನೆ ವರದಿಯಾಗಿದೆ.

Girl's Education: ಇರಾನ್​ನಲ್ಲಿ ಶಾಲೆಗೆ ಹೋಗುವುದನ್ನು ತಡೆಯಲು ಹೆಣ್ಣುಮಕ್ಕಳಿಗೆ ವಿಷಪ್ರಾಶನ
ವಿದ್ಯಾರ್ಥಿನಿಯರುImage Credit source: NDTV
Follow us
ನಯನಾ ರಾಜೀವ್
|

Updated on:Feb 27, 2023 | 9:11 AM

ಇರಾನ್​ನಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ತೀರಾ ಕಡೆಗಣಿಸಲಾಗುತ್ತಿದೆ, ಶಾಲೆಗೆ ಹೋಗದಂತೆ ತಡೆಯಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ ಇರಾನ್​ನ ಖೋಂ ನಗರದಲ್ಲಿ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗದಂತೆ ತಡೆಯಲು ವಿಷವುಣಿಸಿದ ಘಟನೆ ವರದಿಯಾಗಿದೆ. ಕಳೆದ ನವೆಂಬರ್​ನಿಂದ ಉಸಿರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ತೆಹ್ರಾನ್​ನ ಖೋಂ ನಗರದಲ್ಲಿ ವರದಿಯಾಗುತ್ತಿವೆ. ಈ ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ವಿಷವುಣಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾನುವಾರ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ, ವಿಷವನ್ನು ಉದ್ದೇಶಪೂರ್ವಕವಾಗಿ ಕೊಡಲಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಖೋಂ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನದ ನಂತರ, ಹಲವು ಮಂದಿ ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಪೋಷಕರು ಫೆ.14ರಂದು ನಗರದ ಗವರ್ನರೇಟ್ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಫ್ಘಾನಿಸ್ತಾನದಲ್ಲಿ ಕಾಲೇಜುಗಳ ತರಗತಿ ಆರಂಭ; ಗಂಡು- ಹೆಣ್ಣು ಮಕ್ಕಳ ನಡುವೆ ಪರದೆ ಹಾಕಿ ಪಾಠ

ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದರು. ಮಹಿಳೆಯರಿಗಾಗಿ ದೇಶದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಇರಾನಿನ ಕುರ್ದ್ ಮಹ್ಸಾ ಅಮಿನಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ, ಡಿಸೆಂಬರ್ 16 ರಿಂದ ಇರಾನ್ ಪ್ರತಿಭಟನೆಗಳಿಂದ ತತ್ತರಿಸಿ ಹೋಗಿದೆ, ಇನ್ನೊಂದೆಡೆ ಈ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಘಟನೆಯು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಾಗಿನಿಂದ, ವಿಶ್ವವಿದ್ಯಾಲಯಗಳ ಶಿಕ್ಷಣದಿಂದ ಹೆಣ್ಣುಮಕ್ಕಳನ್ನು ನಿರ್ಬಂಧಿಸಿದೆ. ತಾಲಿಬಾನ್ ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಬಳಿಕ ಮೂಲಭೂತ ಹಕ್ಕುಗಳನ್ನು ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ಜಾರಿಗೆ ತಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:11 am, Mon, 27 February 23