ಶಾಂತಿ ಒಪ್ಪಂದದ ಸನಿಹದಲ್ಲಿ ಇರಾನ್-ಅಮೆರಿಕ: ಇರಾನ್ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ಪ್ರಕಟ

ಇರಾನ್ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದವು ಅಂತಿಮ ಹಂತ ತಲುಪಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಈ ಒಪ್ಪಂದದಿಂದ ಹಾರ್ಮುಜ್ ಜಲಸಂಧಿಯು ಮುಕ್ತವಾಗಿ, ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಮತ್ತು ಆರ್ಥಿಕ ಸ್ಥಿರತೆಗೆ ಬುನಾದಿ ಹಾಕಲಿದೆ. ಪಾಕಿಸ್ತಾನದಂತಹ ದೇಶಗಳ ಮಧ್ಯಸ್ಥಿಕೆಯಿಂದ ಈ ಒಪ್ಪಂದ ಯಶಸ್ವಿಯಾಗುತ್ತಿದೆ.

ಶಾಂತಿ ಒಪ್ಪಂದದ ಸನಿಹದಲ್ಲಿ ಇರಾನ್-ಅಮೆರಿಕ:  ಇರಾನ್ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ಪ್ರಕಟ
ಆಯತೊಲ್ಲಾ
Image Credit source: Anadolu Ajansi

Updated on: Jun 14, 2026 | 7:55 AM

ಟೆಹ್ರಾನ್, ಜೂನ್ 14: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿದ್ದ ಸಂಘಷಘ ಕೊನೆಗೊಂಡು ಶಾಶ್ವತ ಶಾಂತಿ ನೆಲೆಸಯವ ಅತ್ಯಂತ ಆಶಾದಾಯಕ ಬೆಳವಣಿಗೆಗಗಳು ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿವೆ. ಇರಾನ್​ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತಂದೆ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯ ಅಧಿಕೃತ ದಿನಾಂಕಗಳನ್ನು ಇರಾನ್ ಪ್ರಕಟಿಸಿದ್ದು. ಮತ್ತೊಂದೆಡೆ ಅಮೆರಿಕದೊಂದಿಗಿನ ಐತಿಹಾಸಿಕ ಶಾಂತಿ ಒಪ್ಪಂದವು ಅಂತಿಮ ಘಟ್ಟಕ್ಕೆ ತಲುಪಿದೆ.

ಅಲಿ ಖಮೇನಿ ಅಂತ್ಯಕ್ರಿಯೆ ವಿಳಂಬಕ್ಕೆ ಕಾರಣವೇನು?
ಫೆಬ್ರವರಿ 28ರಂದು 86 ವರ್ಷದ ಅಯತೊಲ್ಲಾ ಅಲಿ ಖಮೇನಿ ನಿಧನರಾಗಿದ್ದರು, ಆರು ದಿನಗಳ ಅಂತ್ಯಕ್ರಿಯೆ ಕಾರ್ಯಕ್ರಮ ಜಯಲೈನಲ್ಲಿ ನಡೆಯಲಿವೆ ಎಂದು ಇರಾನ್ ಫಾರ್ಸ್​ ಸುದ್ದಿ ಸಂಸ್ಥೆ ತಿಳಿಸಿದೆ.
ಅಂತ್ಯಕ್ರಿಯೆಯನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಮೊಹರಂ ಆರಂಭದಲ್ಲಿ ನಡೆಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನ್‌ಗಾಗಿ ಕರ್ಬಲಾ ಕದನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾರ್ವಜನಿಕರು ನಡೆಸುವ ವಾರ್ಷಿಕ ಶೋಕಾಚರಣೆಗೆ ಮೊದಲ ಆದ್ಯತೆ ನೀಡಲು ಇರಾನ್ ಸರ್ಕಾರವು ಈ ನಿರ್ಧಾರವನ್ನು ಜುಲೈಗೆ ಮುಂದೂಡಿದೆ.

ಜುಲೈ 4 ಮತ್ತು 5, ಟೆಹ್ರಾನ್‌ನ ಇಮಾಮ್ ಖೊಮೇನಿ ಪ್ರಾರ್ಥನಾ ಮೈದಾನದಲ್ಲಿ ಸಾರ್ವಜನಿಕ ಬೀಳ್ಕೊಡುಗೆ

ಜುಲೈ 6: ಮುಖ್ಯ ಶ್ರದ್ಧಾಂಜಲಿ ಮೆರವಣಿಗೆ

ಜುಲೈ 7 ಮತ್ತು 9: ಕ್ರಮವಾಗಿ ಕೋಮ್ ಮತ್ತು ಅವರ ತವರು ಮಶಾದ್ ನಗರಗಳಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

ಮತ್ತಷ್ಟು ಓದಿ: ಇರಾನ್ ಸರ್ವೋಚ್ಚ ನಾಯಕನೇ ನಮ್ಮ ಟಾರ್ಗೆಟ್ ಎಂದ ಇಸ್ರೇಲ್; ಯಾರು ಈ ಖಮೇನಿ?

ಇತಿಹಾಸ ಸೃಷ್ಟಿಸಲಿರುವ ಶಾಂತಿ ಒಪ್ಪಂದ ಮತ್ತು ಮುಕ್ತ ಜಲಮಾರ್ಗ
ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಅಮೆರಿಕ-ಇರಾನ್ ನಡುವಿನ ಸಂಘರ್ಷವು ಈಗ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಉಭಯ ದೇಶಗಳು ಜಾಗತಿಕ ಇಂಧನ ಮತ್ತು ಆರ್ಥಿಕ ಸ್ಥಿರತೆಗೆ ಪೂರಕವಾದ ಒಪ್ಪಂದಕ್ಕೆ ಸಹಿ ಹಾಕಲು ದಿನಗಣನೆ ಆರಂಭಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒಪ್ಪಂದವು ಅತ್ಯಂತ ಸನಿಹದಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆಯೇ, ಜಾಗತಿಕ ತೈಲ ಸಾಗಣೆಯ ಪ್ರಮುಖ ನರನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯು ಜಗತ್ತಿನ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಮಧ್ಯಸ್ಥಿಕೆ ಮತ್ತು ಡಿಜಿಟಲ್ ಮುನ್ನಡೆ
ಈ ಐತಿಹಾಸಿಕ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ನೆರೆಯ ರಾಷ್ಟ್ರಗಳು ಮಹತ್ವದ ರಾಜತಾಂತ್ರಿಕ ಪಾತ್ರ ವಹಿಸಿವೆ. ಪ್ರಮುಖ ಸಂಧಾನಕಾರ ದೇಶಗಳಲ್ಲಿ ಒಂದಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶವು ಎಲೆಕ್ಟ್ರಾನಿಕ್ ಸಹಿಗೆ (Electronic Signature) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಮುಂದಿನ 24 ಗಂಟೆಗಳ ಒಳಗೆ ಈ ಒಪ್ಪಂದವು ಅಧಿಕೃತಗೊಳ್ಳುವ ಸಾಧ್ಯತೆಗಳಿದ್ದು, ಇದು ಇಡೀ ಮಧ್ಯಪ್ರಾಚ್ಯದಲ್ಲಿ ಅಭಿವೃದ್ಧಿ ಮತ್ತು ದೀರ್ಘಕಾಲೀನ ಶಾಂತಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us