AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಇರಾನ್‌ನಿಂದ ‘ಸರ್ಪ್ರೈಸ್ ಅಟ್ಯಾಕ್’ ಎಚ್ಚರಿಕೆ: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ

Iran warning against US: ತನ್ನ ತೈಲ ಟ್ಯಾಂಕರ್​ಗಳ ಮೇಲೆ ದಾಳಿಯಾದರೆ ಅಮೆರಿಕಕ್ಕೆ ಅಚ್ಚರಿಯ ಪ್ರಹಾರ ಕಾದಿದೆ ಎಂದು ಇರಾನ್​ನ ಇಸ್ಲಾಮಿಕ್ ರೆವಲ್ಯೂಶನರಿ ಸೇನೆ (ಐಆರ್​ಜಿಸಿ) ಎಚ್ಚರಿಕೆ ನೀಡಿದೆ. ಈ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳು ಹಾಗೂ ಶತ್ರುಗಳ ಹಡಗುಗಳ ಮೇಲೆ ದಾಳಿ ಮಾಡಲಾಗುತ್ತದೆ ಎಂದು ಈ ಸೇನೆ ತಿಳಿಸಿದೆ.

ಅಮೆರಿಕಕ್ಕೆ ಇರಾನ್‌ನಿಂದ 'ಸರ್ಪ್ರೈಸ್ ಅಟ್ಯಾಕ್' ಎಚ್ಚರಿಕೆ: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ
ಹಾರ್ಮುಜ್ ಜಲಸಂಧಿImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2026 | 9:13 PM

Share

ಟೆಹ್ರಾನ್, ಮೇ 10: ಅಮೆರಿಕವು ತನ್ನ ಮೇಲೆ ಯಾವುದೇ ರೀತಿಯ ಆಕ್ರಮಣಕಾರಿ ಧೋರಣೆ ತೋರಿದರೆ “ಸರ್ಪ್ರೈಸ್ ಅಟ್ಯಾಕ್” (ದಿಢೀರ್ ದಾಳಿ) ನಡೆಸಲಾಗುವುದು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಮೆರಿಕದ ಪಡೆಗಳು ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅಥವಾ ಇರಾನ್‌ನ ಹಿತಾಸಕ್ತಿಗಳಿಗೆ ಧಕ್ಕೆ ತರಲು ಪ್ರಯತ್ನಿಸಿದರೆ, ಇರಾನ್ ತನ್ನಲ್ಲಿರುವ ಹೊಸ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಬಳಸಿ ಅನಿರೀಕ್ಷಿತ ದಾಳಿ ನಡೆಸಲಿದೆ ಎಂದು ಇರಾನ್ ಸೇನೆ ಹೇಳಿದೆ. ಹೊಸ ಶಸ್ತ್ರಾಸ್ತ್ರಗಳ ಬಳಕೆ ಮಾತ್ರವಲ್ಲ, ಹೊಸ ತಂತ್ರಗಾರಿಕೆಯನ್ನೂ ಈ ಪ್ರತಿದಾಳಿಯಲ್ಲಿ ಅಳವಡಿಸಲಾಗುವುದು ಎಂದು ಐಆರ್​ಜಿಸಿ ಹೇಳಿದೆ.

ಇದನ್ನೂ ಓದಿ: ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್

‘ಇರಾನ್​ನ ತೈಲ ಹಡಗುಗಳು ಮತ್ತು ಕಮರ್ಷಿಯಲ್ ಹಡಗುಗಳ ಮೇಲೆ ಯಾವುದೇ ಆಕ್ರಮಣವಾದಲ್ಲಿ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕನ್ ಕೇಂದ್ರಗಳು ಹಾಗೂ ಶತ್ರು ಹಡಗುಗಳ ಮೇಲೆ ಭಾರೀ ಪ್ರಹಾರ ಮಾಡುತ್ತೇವೆ’ ಎಂದು ಐಆರ್​ಜಿಸಿಯ ನೇವಿ ಕಮಾಂಡ್ ಎಚ್ಚರಿಕೆ ಕೊಟ್ಟಿದೆ.

‘ಈ ಪ್ರದೇಶದಲ್ಲಿ ಅಮೆರಿಕದ ಗುರಿಗಳ ಮೇಲೆ ಲಾಕ್ ಮಾಡಿದ್ದೇವೆ. ಹೊಡೆಯುವ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಐಆರ್​ಜಿಸಿಯ ವಾಯು ವಿಭಾಗವು ಹೇಳಿದೆ.

ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ತನಗೆ ಸಂಪೂರ್ಣ ಹಕ್ಕಿದೆ ಎಂದು ಇರಾನ್ ಪ್ರತಿಪಾದಿಸಿದೆ. ಅಮೆರಿಕ ಬೆಂಬಲದ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ತಡೆಯಲು ಇರಾನ್ ಸಮುದ್ರದಲ್ಲಿ ಮೈನ್‌ಗಳನ್ನು (Mines) ಅಳವಡಿಸಿದೆ ಎಂಬ ವರದಿಗಳಿವೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಅಮೆರಿಕದ ‘ಪ್ರಾಜೆಕ್ಟ್ ಫ್ರೀಡಂ’

ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಪ್ರಾಜೆಕ್ಟ್ ಫ್ರೀಡಂ’ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ಆರಂಭವಾಗಿರುವ ಈ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಿವೆ. ಯುದ್ಧ ಅಂತ್ಯಗೊಳಿಸಲು ಎರಡೂ ದೇಶಗಳು ಇಚ್ಛಿಸಿವೆಯಾದರೂ, ಅನುಮಾನ ಮತ್ತು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಿವೆ. ಹೀಗಾಗಿ, ಶಾಂತಿ ಒಪ್ಪಂದ ಏರ್ಪಡುವುದು ವಿಳಂಬವಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!