Sign In

By signing in or creating an account, you agree with Associated Broadcasting Company's Terms & Conditions and Privacy Policy.

Imran Khan: ಇಮ್ರಾನ್ ಬಂಧನಕ್ಕೆ ಕ್ಷಣಗಣನೆ? ಪಾಕ್ ಮಾಜಿ ಪ್ರಧಾನಿಯ ಕೊರಳು ಸುತ್ತಿರುವ ತೋಶಾಖಾನಾ ಪ್ರಕರಣವೇನಿದು?

What is Toshakhana Case Against Imran Khan? ತೋಶಾಖಾನಾ ಪ್ರಕರಣ ಸಂಬಂಧ ಇಮ್ರಾನ್ ಖಾನ್ ನಿವಾಸಕ್ಕೆ ಹೋದ ಇಸ್ಲಾಮಾಬಾದ್ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಆದರೆ, ತಾವು ಇಮ್ರಾನ್ ನಿವಾಸಕ್ಕೆ ಹೋಗಿದ್ದು ಅವರ ಬಂಧನದ ಉದ್ದೇಶಕ್ಕಲ್ಲ, ನೋಟೀಸ್ ಸರ್ವ್ ಮಾಡಲೆಂದು ಹೋಗಿದ್ದವು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

Imran Khan: ಇಮ್ರಾನ್ ಬಂಧನಕ್ಕೆ ಕ್ಷಣಗಣನೆ? ಪಾಕ್ ಮಾಜಿ ಪ್ರಧಾನಿಯ ಕೊರಳು ಸುತ್ತಿರುವ ತೋಶಾಖಾನಾ ಪ್ರಕರಣವೇನಿದು?
ಇಮ್ರಾನ್ ಖಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 05, 2023 | 4:58 PM

ಲಾಹೋರ್: ಕಳದ ವರ್ಷ ಗುಂಡಿನ ಏಟು ಬಿದ್ದು ಸಾವಿನಂಚಿಗೆ ಹೋಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಈಗ ಬಂಧನದ ಭೀತಿ (Arrest Fear For Imran Khan) ಎದುರಾಗಿದೆ. ತೋಶಾಖಾನಾ ಪ್ರಕರಣದಲ್ಲಿ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ (Non-bailable Arrest Warrant) ಅನ್ನು ನ್ಯಾಯಾಲಯವೊಂದು ನೀಡಿದೆ. ವಾರಂಟ್ ಹಿಡಿದ ಇಸ್ಲಾಮಾಬಾದ್ ಪೊಲೀಸರು ಲಾಹೋರ್​ನಲ್ಲಿರುವ ಇಮ್ರಾನ್ ಖಾನ್ ನಿವಾಸಕ್ಕೆ ಹೋಗಿದ್ದಾರೆ. ಆದರೆ, ಮಾಜಿ ಪ್ರಧಾನಿಗಳು ಮನೆಯಲ್ಲಿರಲಿಲ್ಲ. ಹೀಗಾಗಿ ಅವರ ಬಂಧನ ವಿಳಂಬವಾಗಿದೆ ಎಂದು ಕೆಲ ವರದಿಗಳು ಪಾಕಿಸ್ತಾನದಿಂದ ಬಂದಿವೆ. ತೋಶಾಖಾನಾ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಲು ಸತತವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸೆಷೆನ್ಸ್ ಕೋರ್ಟ್​ವೊಂದು ಖಾನ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಇಮ್ರಾನ್ ಖಾನ್ ನಿವಾಸಕ್ಕೆ ಹೋದ ಇಸ್ಲಾಮಾಬಾದ್ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಆದರೆ, ತಾವು ಇಮ್ರಾನ್ ಖಾನ್ ನಿವಾಸಕ್ಕೆ ಹೋಗಿದ್ದು ಅವರ ಬಂಧನದ ಉದ್ದೇಶಕ್ಕಲ್ಲ, ಕೋರ್ಟ್​ನ ನೋಟೀಸ್ ಸರ್ವ್ ಮಾಡಲೆಂದು ಹೋಗಿದ್ದವು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಲಾಹೋರ್​ನಲ್ಲಿರುವ ಇಮ್ರಾನ್ ಖಾನ್ ನಿವಾಸಕ್ಕೆ ಹೋಗಿದ್ದೆವು. ಅವರು ಅಲ್ಲಿ ಇರಲಿಲ್ಲ ಎಂದು ಎಸ್​ಪಿ ಹೇಳಿದ್ದಾರೆ.

ಇದಕ್ಕೂ ಮುನ್ನ ಕೆಲ ಮಾಧ್ಯಮಗಳಲ್ಲಿ ವರದಿಯಾದಂತೆ ಇಸ್ಲಾಮಾಬಾದ್ ಪೊಲೀಸರು ಇಮ್ರಾನ್ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಮನೆಯಲ್ಲಿ ಇಮ್ರಾನ್ ಖಾನ್ ಇರುವುದನ್ನು ಖಾತ್ರಿಪಡಿಸಿಕೊಂಡೇ ಪೊಲೀಸರು ಅಲ್ಲಿಗೆ ಹೋಗಿದ್ದರು. ಆದರೆ, ಪೊಲೀಸರು ಬರುವಷ್ಟರಲ್ಲಿ ಇಮ್ರಾನ್ ಖಾನ್ ಅಲ್ಲಿಂದ ಹೊರಹೋಗಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿChina Loan: ಚೀನೀ ಬ್ಯಾಂಕ್​ನಿಂದ ಪಾಕಿಸ್ತಾನಕ್ಕೆ ಕೊನೆಗೂ ಸಿಕ್ತು ಸಾಲ; ಆಪತ್ಕಾಲಕ್ಕೆ ಬಂತು ನೆರವು

ಇದೇ ವೇಳೆ, ಇಮ್ರಾನ್ ಖಾನ್ ಸೋಷಿಯಲ್ ಮೀಡಿಯಾ ಮೂಲಕ ಸಾರ್ವಜನಿಕ ಸಂಪರ್ಕ ಮಾಡಿದ್ದಾರೆ. ಸರ್ಕಾರ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ವಿರುದ್ಧ ಇಮ್ರಾನ್ ಖಾನ್ ಸಿಡಿಗುಟ್ಟಿ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಕಳ್ಳಕಾಕರ ಕೈಗೆ ಆಡಳಿತ ಕೊಟ್ಟರೆ ದೇಶದ ಭವಿಷ್ಯ ಏನಾದೀತು ಎಂದು ಕೇಳಿರುವ ಅವರು ಪ್ರಧಾನಿ ಶಾಹಬಾಜ್ ಷರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಪ್ರಸ್ತಾಪಿಸಿ ಕುಟುಕಿದ್ದಾರೆ.

ಏನಿದು ತೋಶಾಖಾನ ಪ್ರಕರಣ?

ತೋಶಾಖಾನಾ ಎಂದರೆ ಖಜಾನೆ ಎಂದರ್ಥ. ಪಾಕಿಸ್ತಾನದ ಅಧಿಕಾರಿಗಳಿಗೆ ಸಿಗುವ ಉಡುಗೊರೆಗಳನ್ನು ಖಜಾನೆಯಲ್ಲಿ ಇರಿಸಲಾಗುತ್ತದೆ. ಪಾಕಿಸ್ತಾನದ ಪ್ರಧಾನಿ ಮತ್ತು ಅಧ್ಯಕ್ಷರು 30 ಸಾವಿರ ರೂಗಿಂತ ಕಡಿಮೆ ಮೌಲ್ಯದ ಗಿಫ್ಟ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅನುಮತಿ ಇರುತ್ತದೆ. ದುಬಾರಿ ಉಡುಗೊರೆಗಳು ಖಜಾನೆ ಸೇರಬೇಕಾದ್ದು ಕಡ್ಡಾಯ. ಒಂದು ವೇಳೆ ಈ ಉಡುಗೊರೆಯನ್ನು ತಾನೇ ಇಟ್ಟುಕೊಳ್ಳಬಯಸುವ ಅಧಿಕಾರಿ, ತೋಶಾಖಾನಾ ಮೌಲ್ಯಮಾಪನ ಸಮಿತಿಯಿಂದ ನಿರ್ಧಾರಿತವಾಗುವ ಬೆಲೆ ತೆತ್ತು ಅದನ್ನು ಇರಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು ಮೂಲ ಉಡುಗೊರೆಯ ಮೌಲ್ಯದ ಶೇ. 20ರಷ್ಟು ಹಣವಾಗಿರುತ್ತದೆ.

2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಉಡುಗೊರೆ ಖರೀದಿಯ ಬೆಲೆಯನ್ನು ಶೇ. 50ಕ್ಕೆ ಹೆಚ್ಚಿಸಿದ್ದರು. 2020ರಲ್ಲಿ ಪತ್ರಕರ್ತರೊಬ್ಬರು ಪ್ರಧಾನಿಗೆ ಬಂದಿರುವ ಉಡುಗೊರೆಯ ಸ್ಥಿತಿಗತಿ ತಿಳಿಯಲು ಮಾಹಿತಿ ಹಕ್ಕು ಕಾನೂನಿನಡಿ ವಿಚಾರಿಸಿದ್ದರು. ಇದು ಪಾಕಿಸ್ತಾನದ ವಿದೇಶೀ ಸಂಬಂಧಗಳಿಗೆ ಧಕ್ಕೆಯಾಗಬಹುದೆಂದು ಸರ್ಕಾರ ಮಾಹಿತಿ ಕೊಡಲು ನಿರಾಕರಿಸಿತ್ತು. ಈ ಪತ್ರಕರ್ತ ಸಂಬಂಧಿತ ಪ್ರಾಧಿಕಾರದ ಮೊರೆ ಹೋದರೂ ಏನೂ ಆಗಲಿಲ್ಲ. ಕೊನೆಗೆ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು. ಗಿಫ್ಟ್​ಗಳ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತು. ಅದಾಗಿ ಕೆಲವೇ ದಿನಗಳಲ್ಲಿ, 2022 ಏಪ್ರಿಲ್​ನಲ್ಲಿ ಇಮ್ರಾನ್ ಖಾನ್ ಪ್ರಧಾನಿಪಟ್ಟದಿಂದ ಕೆಳಗಿಳಿಯಬೇಕಾಯಿತು.

ಇದನ್ನೂ ಓದಿKenya: ಕಗ್ಗತ್ತಲೆಯಲ್ಲಿ ಮುಳುಗಿದ ಕೀನ್ಯಾ ದೇಶ: ವಿದ್ಯುತ್ ಪೂರೈಕೆ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ ಜನ

2022ರ ಆಗಸ್ಟ್​ನಲ್ಲಿ ಪಾಕಿಸ್ತಾನದ ಆಡಳಿತ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಅರ್ಜಿ ಹಾಕಿತು. ಇಮ್ರಾನ್ ಖಾನ್ ತಮ್ಮ ಆಸ್ತಿ ಘೋಷಣೆಯಲ್ಲಿ ತೋಶಾಖಾನಾದಿಂದ ಪಡೆಯಲಾದ ಉಡುಗೊರೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಅವರನ್ನು ಅಜೀವಪರ್ಯಂತ ಅನರ್ಹಗೊಳಿಸಬೇಕು ಎಂದು ಪೆಟಿಶನ್ ಹಾಕಲಾಯಿತು. ಗಲ್ಫ್ ರಾಷ್ಟ್ರಗಳಿಂದ ಬಂದಿದ್ದ ಅತಿಥಿಗಳಿಂದ ಉಡುಗೊರೆಯಾಗಿ ಸಿಕ್ಕಿದ್ದ 3 ದುಬಾರಿ ವಾಚುಗಳ ಮಾರಾಟದಿಂದ ಇಮ್ರಾನ್ ಖಾನ್ 3.6 ಕೋಟಿ ರೂ ಹಣ ಗಳಸಿದರೆಂಬ ಆರೋಪ ಮಾಧ್ಯಮಗಳಲ್ಲಿ ವರದಿಯಾಯಿತು.

ಪಾಕಿಸ್ತಾನದ ಚುನಾವಣಾ ಆಯೋಗದ ಐವರು ಸದಸ್ಯರ ನ್ಯಾಯಪೀಠವು 2022 ಅಕ್ಟೋಬರ್​ನಲ್ಲಿ ಮಹತ್ವದ ತೀರ್ಪು ನೀಡಿ, ಇಮ್ರಾನ್ ಖಾನ್ ಅವರನ್ನು 5 ವರ್ಷ ಕಾಲ ಸಾರ್ವಜನಿಕ ಹುದ್ದೆ ಅಲಂಕರಿಸದಂತೆ ನಿಷೇಧ ಹಾಕಿತು.

ಇಮ್ರಾನ್ ಖಾನ್ ವಿರುದ್ಧ ಇರುವುದು ತೋಶಾಖಾನಾ ಪ್ರಕರಣವೊಂದೇ ಅಲ್ಲ, ಭಯೋತ್ಪಾದನೆ, ಕೊಲೆ ಯತ್ನ, ಹಣಕಾಸು ಅಕ್ರಮ ಇತ್ಯಾದಿ ವಿವಿಧ ಪ್ರಕರಣಗಳಿವೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sun, 5 March 23

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ