Kenya: ಕಗ್ಗತ್ತಲೆಯಲ್ಲಿ ಮುಳುಗಿದ ಕೀನ್ಯಾ ದೇಶ: ವಿದ್ಯುತ್ ಪೂರೈಕೆ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ ಜನ
Kenya power outage: ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿ ನಿನ್ನೆ (ಮಾ.4) ಕೀನ್ಯಾ ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ನೈರೋಬಿ: ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿ ಶನಿವಾರ (ಮಾ.4) ಕೀನ್ಯಾ (Kenya power outage) ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಶೀಘ್ರದಲ್ಲೆ ಸಮಸ್ಯೆ ಬಗೆಹರಿಸಿ ಮತ್ತೆ ವಿದ್ಯುತ್ ಸರಬರಾಜನ್ನು ಸುಗಮಗೊಳಿಸುತ್ತೇವೆ ಎಂದು ಕಿನ್ಯಾ ವಿದ್ಯುತ್ ಸರಬರಾಜು ಇಲಾಖೆ (KPCL.co.ke) ಹೇಳಿದೆ. ಅನಾನುಕೂಲತೆಗಾಗಿ ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಎಂದಿದೆ. ಸಂಜೆ 6:00 ಗಂಟೆಯಿಂದಲೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.
— Kenya Power (@KenyaPower_Care) March 4, 2023
ವರದಿಗಳ ಪ್ರಕಾರ ವಿದ್ಯುತ್ ಸರಬರಾಜು ಸದ್ಯಕ್ಕೆ ರಾಜಧಾನಿ ನೈರೋಬಿಯದ ಕನಿಷ್ಠ ಒಂದು ಭಾಗಕ್ಕೆ ಮಾತ್ರ ಮರಳಿದೆ. ಇನ್ನು 2022ರ ಜನವರಿಯಲ್ಲಿ ಕೀನ್ಯಾದ ಜಲವಿದ್ಯುತ್ ಉತ್ಪಾದನಾ ಘಟಕದ ಹೈ-ವೋಲ್ಟೇಜ್ ಪ್ರಸರಣ ಮಾರ್ಗಕ್ಕೆ ಹಾನಿಯುಂಟಾಗಿದ್ದಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Sun, 5 March 23