Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲಿ ಒತ್ತೆಯಾಳುಗಳನ್ನು ಕರೆತರಲು ನಮಗೆ $10,000 ನಗದು, ಅಪಾರ್ಟ್‌ಮೆಂಟ್​​​ ಭರವಸೆ ನೀಡಲಾಗಿತ್ತು: ಬಂಧಿತ ಹಮಾಸ್ ಉಗ್ರರು

ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ತಮ್ಮ ಕಮಾಂಡರ್‌ಗಳಿಂದ ಸ್ಪಷ್ಟ ಸೂಚನೆಗಳನ್ನು ಹೊಂದಿದ್ದರು ಎಂದು ಇನ್ನೊಬ್ಬ ಭಯೋತ್ಪಾದಕ ಬಹಿರಂಗಪಡಿಸಿದ್ದಾನೆ. “ಒಬ್ಬ ಮಹಿಳೆಯ ದೇಹ ನೆಲದ ಮೇಲೆ ಬಿದ್ದಿತ್ತು. ನಾನು ಅವಳನ್ನು ಗುಂಡು ಹಾರಿಸಿದೆ ಆದರೆ ನನ್ನ ಕಮಾಂಡರ್ ಗುಂಡುಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ನನ್ನ ಮೇಲೆ ಕೂಗಾಡಿದ. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ನಡುವೆ ವ್ಯತ್ಯಾಸ ಮಾಡಬೇಡಿ ಎಂದು ನಮಗೆ ತಿಳಿಸಲಾಯಿತು

ಇಸ್ರೇಲಿ ಒತ್ತೆಯಾಳುಗಳನ್ನು ಕರೆತರಲು ನಮಗೆ $10,000 ನಗದು, ಅಪಾರ್ಟ್‌ಮೆಂಟ್​​​ ಭರವಸೆ ನೀಡಲಾಗಿತ್ತು: ಬಂಧಿತ ಹಮಾಸ್ ಉಗ್ರರು
ಹಮಾಸ್ ಉಗ್ರರು
Follow us
ರಶ್ಮಿ ಕಲ್ಲಕಟ್ಟ
|

Updated on:Oct 25, 2023 | 3:00 PM

ಟೆಲ್ ಅವೀವ್ ಅಕ್ಟೋಬರ್ 25: ನಡೆಯುತ್ತಿರುವ ಯುದ್ಧದ ಮಧ್ಯೆ, ಬಂಧಿತ ಹಮಾಸ್ ಭಯೋತ್ಪಾದಕರ (Hamas terrorists) ವಿಚಾರಣೆಯ ವಿಡಿಯೊವನ್ನು ಇಸ್ರೇಲಿ ಭದ್ರತಾ ಪಡೆಗಳು ಸಾಮಾಜಿಕ ಮಾಧ್ಯಮದಲ್ಲಿ (social media) ಬಿಡುಗಡೆ ಮಾಡಿದ್ದು, ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ (Gaza) ಕರೆತಂದವರಿಗೆ ಅವರಿಗೆ $ 10,000 ನಗದು ಮತ್ತು ಅಪಾರ್ಟ್‌ಮೆಂಟ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು ಎಂದು ಈ ಉಗ್ರರು ಹೇಳಿದ್ದಾರೆ. ಅಕ್ಟೋಬರ್ 7 ರಿಂದ ಹಮಾಸ್ ಭಯೋತ್ಪಾದಕರು ಹಲವಾರು ವಿದೇಶಿ ಪ್ರಜೆಗಳು ಸೇರಿದಂತೆ 222 ನಾಗರಿಕರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿದ್ದಾರೆ.

ಹಮಾಸ್ ತನ್ನ ಹೋರಾಟಗಾರರಿಗೆ ಏನು ಸೂಚನೆ ನೀಡಿತ್ತು?

ಇಸ್ರೇಲಿ ಪಡೆಗಳು ಇತ್ತೀಚೆಗೆ ಆರು ಹಮಾಸ್ ಭಯೋತ್ಪಾದಕರ ವಿಚಾರಣೆಯ ಹಲವಾರು ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದೆ. ಅವರನ್ನು ಅಕ್ಟೋಬರ್ 7 ರಂದು ವಿನಾಶ ಮತ್ತು ಸಾಮೂಹಿಕ ಹತ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲಾಯಿತು. ಮಹಿಳೆಯರು ಮತ್ತು ಮಕ್ಕಳೊಂದಿಗೆ ವೃದ್ಧರು ಸೇರಿದಂತೆ ಅನೇಕ ನಾಗರಿಕರನ್ನು ಕೊಲ್ಲಲು ಮತ್ತು ಅಪಹರಿಸಲು ಅವರಿಗೆ ಸೂಚಿಸಲಾಗಿದೆ ಎಂದು ಹಮಾಸ್ ಭಯೋತ್ಪಾದಕರು ಹೇಳುತ್ತಿರುವುದು ವಿಡಿಯೊದಲ್ಲಿದೆ. ನಮ್ಮ ಕಮಾಂಡರ್‌ಗಳು ಗಾಜಾದಲ್ಲಿ ಉಳಿದುಕೊಂಡಿರುವಾಗ ಜನರನ್ನು ಕೊಲ್ಲಲು ಮತ್ತು ಅಪಹರಿಸಲು ನಮ್ಮನ್ನು ಕಳುಹಿಸಲಾಗಿದೆ ಎಂದು ಅವರಲ್ಲೊಬ್ಬ ಹೇಳಿದ್ದಾನೆ.

ನಾಗರಿಕರನ್ನು ಅಪಹರಿಸಿದವರಿಗೆ ಬಹುಮಾನ

“ಯಾರು ನಾಗರಿಕನನ್ನು ಅಪಹರಿಸಿ ಅವರನ್ನು ಗಾಜಾಕ್ಕೆ ಮರಳಿ ಕರೆತರುತ್ತಾರೋ ಅವರಿಗೆ $10,000 ಮತ್ತು ಅಪಾರ್ಟ್ಮೆಂಟ್ ಬಹುಮಾನವಾಗಿ ಸಿಗುತ್ತದೆ” ಎಂದು ಮತ್ತೊಬ್ಬ ಭಯೋತ್ಪಾದಕ ಬಹಿರಂಗಪಡಿಸಿದ್ದಾನೆ. “ನಾವು ದಾಳಿ ಮಾಡಿದ ಪಟ್ಟಣಗಳ ಮೇಲೆ ಹಿಡಿತ ಸಾಧಿಸಲು ಯೋಜಿಸಿದ್ದೇವೆ. ನಿವಾಸಿಗಳನ್ನು ಕೊಂದು ಅಪಹರಣ ಮಾಡಿದ ನಂತರ ಪಟ್ಟಣದ ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಥಾನಗಳನ್ನು ಪಡೆದುಕೊಳ್ಳಲು ನಮಗೆ ತಿಳಿಸಲಾಯಿತು, ”ಎಂದು ಅವರು ಹೇಳಿದರು.

‘ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ’

ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ತಮ್ಮ ಕಮಾಂಡರ್‌ಗಳಿಂದ ಸ್ಪಷ್ಟ ಸೂಚನೆಗಳನ್ನು ಹೊಂದಿದ್ದರು ಎಂದು ಇನ್ನೊಬ್ಬ ಭಯೋತ್ಪಾದಕ ಬಹಿರಂಗಪಡಿಸಿದ್ದಾನೆ. “ಒಬ್ಬ ಮಹಿಳೆಯ ದೇಹ ನೆಲದ ಮೇಲೆ ಬಿದ್ದಿತ್ತು. ನಾನು ಅವಳನ್ನು ಗುಂಡು ಹಾರಿಸಿದೆ ಆದರೆ ನನ್ನ ಕಮಾಂಡರ್ ಗುಂಡುಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ನನ್ನ ಮೇಲೆ ಕೂಗಾಡಿದ. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ನಡುವೆ ವ್ಯತ್ಯಾಸ ಮಾಡಬೇಡಿ ಎಂದು ನಮಗೆ ತಿಳಿಸಲಾಯಿತು. ನಿವಾಸಿಗಳನ್ನು ಕೊಂದ ನಂತರ ನಾವು ಕನಿಷ್ಠ ಎರಡು ಮನೆಗಳನ್ನು ಸುಟ್ಟು ಹಾಕಿದ್ದೇವೆ” ಎಂದು ಉಗ್ರ ಹೇಳಿದ್ದಾನೆ.

ಇದನ್ನೂ ಓದಿ:  ಇಸ್ರೇಲ್​-ಹಮಾಸ್​ ಯುದ್ಧದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​​ ಮಾಡಿದ್ದಕ್ಕೆ ನಟಿಯ ಬಂಧನ

ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಇಸ್ಲಾಂ ಅನುಮತಿ ನೀಡುವುದಿಲ್ಲ

ಇಸ್ಲಾಂನಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಕೊಲ್ಲಲು ಅನುಮತಿಸಲಾಗಿದೆಯೇ ಎಂದು ಕೇಳಿದಾಗ, , “ಇಲ್ಲ, ಇಸ್ಲಾಂ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಅನುಮತಿಸುವುದಿಲ್ಲ” ಎಂದು ಉಗ್ರ ಉತ್ತರಿಸಿದ್ದಾನೆ. ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ತಾನು ಹಲವಾರು ಸಾಕುಪ್ರಾಣಿಗಳನ್ನು ಕೊಂದಿರುವುದಾಗಿಯೂ ಆ ಉಗ್ರ ಬಹಿರಂಗಪಡಿಸಿದ್ದಾನೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Wed, 25 October 23

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು