AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್-ಹಮಾಸ್ ಯುದ್ಧ; ಇಸ್ಮಾಯಿಲ್ ಹನಿಯೆಹ್ ಹತ್ಯೆ ಬಳಿಕ ಹಮಾಸ್ ಹೊಸ ನಾಯಕನಾಗಿ ಯಾಹ್ಯಾ ಸಿನ್ವಾರ್ ಆಯ್ಕೆ

ಇರಾನ್​ನ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಹಮಾಸ್​ನ ಹೊಸ ನಾಯಕನಾಗಿ ಯಾಹ್ಯಾ ಸಿನ್ವಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಡೆಡ್ ಮ್ಯಾನ್ ವಾಕಿಂಗ್ ಎಂದು ಕೂಡ ಕರೆಯುತ್ತಾರೆ. ಇಲ್ಲಿಯವರೆಗೆ ಗಾಜಾ ಮುಖ್ಯಸ್ಥರಾಗಿದ್ದ ಸಿನ್ವಾರ್ ಇನ್ನುಮುಂದೆ ಹಮಾಸ್ ಮುಖ್ಯಸ್ಥರಾಗಲಿದ್ದಾರೆ. ಕಳೆದ ವಾರ ಟೆಹ್ರಾನ್‌ನಲ್ಲಿ ನಡೆದ ಹತ್ಯೆಯು ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿತು. ಇದು ಇಸ್ರೇಲ್ ಮತ್ತು ಇರಾನ್ ನಡುವಿನ ಮಹಾಯುದ್ಧಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಇಸ್ರೇಲ್-ಹಮಾಸ್ ಯುದ್ಧ; ಇಸ್ಮಾಯಿಲ್ ಹನಿಯೆಹ್ ಹತ್ಯೆ ಬಳಿಕ ಹಮಾಸ್ ಹೊಸ ನಾಯಕನಾಗಿ ಯಾಹ್ಯಾ ಸಿನ್ವಾರ್ ಆಯ್ಕೆ
ಯಾಹ್ಯಾ ಸಿನ್ವಾರ್
ಸುಷ್ಮಾ ಚಕ್ರೆ
|

Updated on: Aug 07, 2024 | 3:17 PM

Share

ಪ್ಯಾಲೆಸ್ತೀನ್: ಯಾಹ್ಯಾ ಸಿನ್ವಾರ್ ಅವರನ್ನು ಹಮಾಸ್‌ನ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವ ಮೂಲಕ ಹಮಾಸ್ ತನ್ನ ಪ್ರತಿರೋಧದ ಹಾದಿಯನ್ನು ಮುಂದುವರೆಸುತ್ತಿದೆ ಎಂದು ಹಮಾಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಪ್ರಾಚ್ಯದ ಪ್ರಕ್ಷುಬ್ಧ ಸಂದರ್ಭದಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇದೀಗ ಹೊಸ ನಾಯಕನನ್ನು ಘೋಷಿಸಿದೆ.

ಇಸ್ಮಾಯಿಲ್ ಹನಿಯೆಹ್ ಸಾವಿನ ನಂತರ ಹಮಾಸ್ ಯಾಹ್ಯಾ ಸಿನ್ವಾರ್ ಅವರನ್ನು ಹೊಸ ನಾಯಕ ಎಂದು ಘೋಷಿಸಲಾಗಿದೆ. ಯಾಹ್ಯಾ ಸಿನ್ವಾರ್ ಯಾರು? ಹಮಾಸ್‌ಗೆ ಅವರ ನೇಮಕಾತಿಗೆ ಕಾರಣವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರ; ಇಸ್ರೇಲ್ ಮೇಲೆ ಯುದ್ಧಕ್ಕೆ ಇರಾನ್​ನ ಖಮೇನಿ ಆದೇಶ

1962ರಲ್ಲಿ ಗಾಜಾದಲ್ಲಿ ಜನಿಸಿದ ಯಾಹ್ಯಾ ಸಿನ್ವಾರ್ ಹಮಾಸ್‌ನಲ್ಲಿ ಪ್ರಮುಖ ನಾಯಕರಾಗಿದ್ದಾರೆ. ಅವರು ಹಮಾಸ್‌ನ ಮಿಲಿಟರಿ ವಿಭಾಗವಾದ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳನ್ನು ಪ್ರಾರಂಭಿಸಲು ಸಹಾಯ ಮಾಡಿದರು. ಅವರು ಇಸ್ರೇಲ್ ವಿರುದ್ಧದ ಅನೇಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಇಸ್ರೇಲಿ ಜೈಲುಗಳಲ್ಲಿ 20 ವರ್ಷಗಳನ್ನು ಕಳೆದಿದ್ದರು. ಅವರ ಬಿಡುಗಡೆಯ ನಂತರ, ಅವರು ಹಮಾಸ್‌ಗೆ ತೆರಳಿದರು ಮತ್ತು 2017ರಲ್ಲಿ ಗಾಜಾದಲ್ಲಿ ಅದರ ನಾಯಕರಾದರು. ಅವರ ನಾಯಕತ್ವದಲ್ಲಿ, ಹಮಾಸ್ ಗಾಜಾದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ಪ್ರಭಾವವನ್ನು ಸುಧಾರಿಸುವತ್ತ ಗಮನಹರಿಸಿದೆ.

ಹಮಾಸ್ ನಾಯಕನಾಗಿ ಅವರನ್ನು ಆಯ್ಕೆ ಮಾಡಿರುವುದರಿಂದ ಇದು ಇಸ್ರೇಲ್ ಮತ್ತು ಇರಾನ್ ನಡುವೆ ಇನ್ನಷ್ಟು ಉದ್ವಿಗ್ನತೆ ಸೃಷ್ಟಿಸಬಹುದು. ಅವರ ಆಕ್ರಮಣಕಾರಿ ನಿರ್ಧಾರಗಳಿಂದ ಸಂಘರ್ಷಗಳು ಉಲ್ಬಣವಾಗಬಹುದು. ಇದು ಗಾಜಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?