ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 19ಕ್ಕೂ ಅಧಿಕ ಮಂದಿ ಸಾವು

ಇಸ್ರೇಲ್​ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೇಂದ್ರ ಗಾಜಾದ ಅಲ್​-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿರುವ ಕ್ಲಿನಿಕ್​ನ ಹೊರಭಾಗಕ್ಕೆ 4 ಶೆಲ್​ಗಳು ಬಂದು ಅಪ್ಪಳಿಸಿವೆ.

ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 19ಕ್ಕೂ ಅಧಿಕ ಮಂದಿ ಸಾವು
ಗಾಜಾ

Updated on: Jun 06, 2024 | 8:34 AM

ಇಸ್ರೇಲ್​ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೇಂದ್ರ ಗಾಜಾದ ಅಲ್​-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿರುವ ಕ್ಲಿನಿಕ್​ನ ಹೊರಭಾಗಕ್ಕೆ 4 ಶೆಲ್​ಗಳು ಬಂದು ಅಪ್ಪಳಿಸಿವೆ.

ಹಮಾಸ್​ ಉಗ್ರರು ಅಕ್ಟೋಬರ್​ 7ರಂದು ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ಸಾಳಿ ನಡೆಸಿ 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಜತೆಗೆ 250ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದ್ದರು.

ಮೇ 29ರಂದು ದಾಳಿ ನಡೆಸಿತ್ತು
ಇಸ್ರೇಲ್ ವಾಯು ದಾಳಿಗೆ ಗಾಜಾದ ರಫಾದಲ್ಲಿನ ನಿರಾಶ್ರಿತರ ಶಿಬಿರದಲ್ಲಿದ್ದ ಕನಿಷ್ಠ 45 ಮಂದಿ ಮೃತಪಟ್ಟಿದ್ದರು, ಕಳೆದ ತಿಂಗಳು ಈ ಘಟನೆ ವರದಿಯಾಗಿತ್ತು.  ಇದರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ರಫಾದಲ್ಲಿ ನಡೆಸುತ್ತಿರುವ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್‌ಗೆ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿರುವುದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ.

ಮತ್ತಷ್ಟು ಓದಿ: Israel Iran War: ಇಸ್ರೇಲ್​ ಮೇಲೆ ಇರಾನ್​ನಿಂದ ಕ್ಷಿಪಣಿ ದಾಳಿ

ಗಾಜಾ ಭಾಗದಲ್ಲಿನ ಗಡಿಯಲ್ಲಿ ಕಳೆದ ತಿಂಗಳ ಆರಂಭದಲ್ಲಿ ಭೂ ಕಾರ್ಯಾಚರಣೆ ನಡೆಸಿದ ಇಸ್ರೇಲ್, ಗಡಿಯಲ್ಲಿ ದಾಟುವ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದೆ. ಅದಕ್ಕೂ ಮುನ್ನ ಮಾನವೀಯ ನೆರವು ಹರಿಸಲು ರಫಾ ಪ್ರಮುಖ ಪ್ರವೇಶ ಕೇಂದ್ರವಾಗಿತ್ತು.

ಟೆಲ್ ಅವಿವ್ ಪ್ರದೇಶದ ಮೇಲೆ ಹಮಾಸ್ ಉಗ್ರರು ರಾಕೆಟ್‌ಗಳ ದಾಳಿ ನಡೆಸಿದ ಬೆನ್ನಲ್ಲೇ ಭಾನುವಾರ ತಡರಾತ್ರಿ ರಫಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿತ್ತು. ಗಡಿ ಪಟ್ಟಣವಾದ ರಫಾದಲ್ಲಿ ಅಧಿಕ ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಅವರಿಗೆ ಮೂಲ ಸೌಕರ್ಯಗಳು, ಮಾನವೀಯ ನೆರವುಗಳನ್ನು ಒದಗಿಸುವ ಸಲುವಾಗಿ ಅಲ್ಲಿನ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಸೂಚಿಸಿತ್ತು. ಆದರೆ ಇಸ್ರೇಲಿ ಪಡೆಗಳು ಇಲ್ಲಿನ ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us