AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯ ಮೃತದೇಹವನ್ನು ಮರೆಮಾಚಿ, ಪಿಂಚಣಿ ಹಣ ಪಡೆಯಲು ಆಕೆಯಂತೆ ವೇಷ ತೊಟ್ಟು ಹೋಗಿದ್ದ ಮಗ

ದುಡ್ಡಿಗಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಪಿಂಚಣಿ ಹಣ ಪಡೆಯಲು ಆಕೆಯಂತೆಯೇ ವೇಷ ತೊಟ್ಟು ಹೋಗಿದ್ದ ಘಟನೆ ಉತ್ತರ ಇಟಲಿಯಲ್ಲಿ ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ ತನ್ನ ತಾಯಿಯ ಸಾವಿರಾರು ಯುರೋಗಳಷ್ಟು ಮೌಲ್ಯದ ಪಿಂಚಣಿ ಹಣವನ್ನು ಪ್ಲ್ಯಾನ್ ಮಾಡಿದ್ದ.

ತಾಯಿಯ ಮೃತದೇಹವನ್ನು ಮರೆಮಾಚಿ, ಪಿಂಚಣಿ ಹಣ ಪಡೆಯಲು ಆಕೆಯಂತೆ ವೇಷ ತೊಟ್ಟು ಹೋಗಿದ್ದ ಮಗ
ತಾಯಿಯಂತೆ ವೇಷ ಹಾಕಿದ ಮಗImage Credit source: NDTV
ನಯನಾ ರಾಜೀವ್
|

Updated on: Nov 26, 2025 | 3:06 PM

Share

ಇಟಲಿ, ನವೆಂಬರ್ 26: ದುಡ್ಡಿಗಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಪಿಂಚಣಿ(Pension) ಹಣ ಪಡೆಯಲು ಆಕೆಯಂತೆಯೇ ವೇಷ ತೊಟ್ಟು ಹೋಗಿದ್ದ ಘಟನೆ ಉತ್ತರ ಇಟಲಿ(Italy)ಯಲ್ಲಿ ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ ತನ್ನ ತಾಯಿಯ ಸಾವಿರಾರು ಯುರೋಗಳಷ್ಟು ಮೌಲ್ಯದ ಪಿಂಚಣಿ ಹಣವನ್ನು ಪ್ಲ್ಯಾನ್ ಮಾಡಿದ್ದ.

ದಿ ಗಾರ್ಡಿಯನ್ ಪ್ರಕಾರ, 2022ರಲ್ಲೇ ಆತನ ತಾಯಿ ಮೃತಪಟ್ಟಿದ್ದರು ಆದರೆ ಎಲ್ಲರಿಂದ ಅದನ್ನು ಆತ ಮರೆಮಾಚಿದ್ದ. ಮಾಂಟುವಾ ಬಳಿಯ ಬೊರ್ಗೊ ವರ್ಜಿಲಿಯೊ ನಿವಾಸಿಯಾದ ಆ ವ್ಯಕ್ತಿ ತಾಯಿಯ ಶವವನ್ನು ಮನೆಯಲ್ಲಿ ಅಡಗಿಸಿಟ್ಟು, ವಾರ್ಷಿಕ ಪಿಂಚಣಿ ಹಣವನ್ನು ಆತ ಪಡೆಯುತ್ತಾ ಬಂದಿದ್ದಾನೆ.

ಈ ತಿಂಗಳ ಆರಂಭದಲ್ಲಿ ಆಕೆಯ ಗುರುತಿನ ಚೀಟಿಯ ಅವಧಿ ಮುಗಿದಾಗ ಆತ ಸರ್ಕಾರಿ ಕಚೇರಿಗೆ ತನ್ನ ತಾಯಿಯಂತೆ ಮೇಕಪ್ ಮಾಡಿಕೊಂಡು, ವಿಗ್ ಹಾಕಿ, ಮಹಿಳೆಯರ ಬಟ್ಟೆಗಳನ್ನು ಧರಿಸಿ ಬಂದಿದ್ದ. ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅಧಿಕಾರಿಗಳು ನಿಜವಾದ ಮಹಿಳೆಯ ಫೋಟೋ ಮತ್ತು ಆತನಿಗೆ ಹೋಲಿಕೆ ಮಾಡಿ ನೋಡಿದ್ದಾರೆ. ಅವಳಂತೆ ನಟಿಸಿ ಬಂದ ಪುರುಷನೊಂದಿಗೆ ಹೋಲಿಸಿದರು. ನಂತರ ಪೊಲೀಸರು ಆತನ ಮನೆಗೆ ಹೋಗಿ ನೋಡಿದ್ದಾರೆ. ತಾಯಿಯ ಶವವನ್ನು ಲಾಂಡ್ರಿ ಕೋಣೆಯಲ್ಲಿ ಮರೆಮಾಡಲಾಗಿದ್ದನ್ನು ಕಂಡುಕೊಂಡಿದ್ದಾರೆ.

ಮತ್ತಷ್ಟು ಓದಿ: EPFO: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್

ಬೊರ್ಗೊ ವರ್ಜಿಲಿಯೊದ ಮೇಯರ್ ಫ್ರಾನ್ಸೆಸ್ಕೊ ಅಪೋರ್ಟಿ ಮಾತನಾಡಿ, ಆ ವ್ಯಕ್ತಿ ವೃದ್ಧ ಮಹಿಳೆಯಂತೆ ಉಡುಗೆ ತೊಟ್ಟು ಕೌನ್ಸಿಲ್ ಕಚೇರಿಗೆ ಹೋಗಿದ್ದ. ಆತ ಲಿಪ್ಸ್ಟಿಕ್, ಉಗುರು ಬಣ್ಣ, ಆಭರಣಗಳು ಮತ್ತು ಹಳೆಯ ಶೈಲಿಯ ಕಿವಿಯೋಲೆಗಳನ್ನು ಧರಿಸಿದ್ದ ಮತ್ತು ಗಾಢ ಕಂದು ಬಣ್ಣದ ವಿಗ್ ಹಾಕಿದ್ದ ಎಂದು ಅವರು ಹೇಳಿದರು.

ಆತ ತಾಯಿಯಂತೆ ಎಷ್ಟೇ ನಟಿಸಲು ಪ್ರಯತ್ನಿಸಿದರೂ ಮಧ್ಯೆ ಮಧ್ಯೆ ಆತನ ಸ್ವರವೂ ಕೇಳುತ್ತಿತ್ತು ಇದು ಸಿಬ್ಬಂದಿಯಲ್ಲಿ ಅನುಮಾನ ಹುಟ್ಟುಹಾಕಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.  ಆಕೆಯದ್ದು ಸಹಜ ಸಾವು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಆ ವ್ಯಕ್ತಿ ನಿರುದ್ಯೋಗಿಯಾಗಿದ್ದ, ತನ್ನ ತಾಯಿಯ ಪಿಂಚಣಿ ಮತ್ತು ಮೂರು ಆಸ್ತಿಗಳಿಂದ ಬರುವ ಆದಾಯವನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು 50 ಲಕ್ಷ ರೂ. ಗಳಿಸುತ್ತಿದ್ದ.ತನ್ನ ತಾಯಿಯ ದೇಹ ಕೊಳೆಯದಂತೆ ತಡೆಯಲು ಸಿರಿಂಜ್ ಬಳಸಿ ದೇಹದಿಂದ ದ್ರವಗಳನ್ನು ಹೊರತೆಗೆದ ಆರೋಪವೂ ಆತನ ಮೇಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ