ಟೊಕಿಯೊ: ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ (Shinjo Abe Shot) ಅವರ ಮೇಲೆ ಅಶ್ಚಿಮ ಜಪಾನ್ನ ನಾರಾ ಎಂಬಲ್ಲಿ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಎನ್ಎಚ್ಕೆ ಮಾಧ್ಯಮ ವರದಿ ಮಾಡಿದೆ. ಭಾಷಣ ಮಾಡುತ್ತಿದ್ದಾಗ ಶಿಂಜೊ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶಂಕಿತ ಹಂತಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎದೆಯ ಭಾಗಕ್ಕೆ ಗುಂಡು ತಾಗಿದ್ದು, ಅಬೆ ಅವರು ಪ್ರಜ್ಞೆ ತಪ್ಪಿದರು. ಅವರಿಗೆ ಹೃದಯಘಾತವಾಗಿರಬಹುದು ಎಂದು ‘ಕ್ಯೋಡೊ ನ್ಯೂಸ್’ ಜಾಲತಾಣ ವರದಿ ಮಾಡಿದೆ. ಜಪಾನ್ನ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಿಗ್ಗೆ 11:30ಕ್ಕೆ (ಭಾರತೀಯ ಕಾಲಮಾನ ಜುಲೈ 8:29) ಈ ಘಟನೆ ನಡೆದಿದೆ. ನಾರಾ ನಗರದ ಬೀದಿಯಲ್ಲಿ ಅಬೆ ಅವರು ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ.
Shinzo Abe shot in the chest in Nara. Attacker caught. pic.twitter.com/WfkUDH9lfo
— Gordon Knight (@GordonlKnight) July 8, 2022
ಗುಂಡೇಟಿನಿಂದ ಅವರ ದೇಹಸ್ಥಿತಿ ಕ್ಷೀಣಿಸುತ್ತಿದ್ದು, ಚಿಂತಾಜನಕವಾಗಿದೆ. ಶಿಂಜೋ ಆರೋಗ್ಯ ಬಗ್ಗೆ ಜಪಾನ್ ಪ್ರಧಾನಿ ಕಿಶಿಡಾ ಮಾಹಿತಿ ನೀಡಿದ್ದು, ಶಿಂಜೋ ಅಬೆ ಉಳಿಸಿಕೊಳ್ಳಲು ವೈದ್ಯರು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಶಿಂಜೋ ಅಬೆ ಗುಣಮುಖರಾಗಬೇಕೆಂದು ಎಲ್ಲರೂ ಪ್ರಾರ್ಥಿಸಬೇಕೆಂದು ಮನವಿ ಮಾಡಿದ್ದಾರೆ.
Published On - 8:44 am, Fri, 8 July 22