KFC Agarbathi: ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 30, 2023 | 4:08 PM

Fried Chicken Incense Sticks: ಕೆಎಫ್​ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್​ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ.

KFC Agarbathi: ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?
ಫ್ರೈಡ್ ಚಿಕನ್ ಅಗರಬತ್ತಿ
Follow us on

ನವದೆಹಲಿ: ಜನಪ್ರಿಯ ಚಿಕನ್ ಖಾದ್ಯಗಳ ಸ್ಟೋರ್ ಆಗಿರುವ ಕೆಎಫ್​ಸಿ (KFC- Kentucky Fried Chicken) ಈಗ ಮತ್ತೆ ವಿವಾದಕ್ಕೆ ಸಿಲುಕಿದೆ. ತನ್ನ ಖಾದ್ಯಗಳ ಶೈಲಿಯಲ್ಲಿ ಅಗರಬತ್ತಿಯನ್ನು ಕೆಎಫ್​ಸಿ ತಯಾರಿಸಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಥಾಯ್ಲೆಂಡ್ ವಿಭಾಗದ ಕೆಎಫ್​ಸಿ ಇಂಥದ್ದೊಂದು ಪ್ರಯೋಗ ಮಾಡಿದೆ.

ಅಗರಬತ್ತಿಗೂ ಚಿಕನ್​ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಆದರೆ, ಇಲ್ಲಿ ಕೆಎಫ್​ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್​ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್​ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ. ನೋಡಲೂ ಕೂಡ ಕೆಎಫ್​ಸಿಯ ಡ್ರಮ್​ಸ್ಟಿಕ್ ಚಿಕನ್​ಗಳಂತೆ ಕಂಡರೂ ಈ ಅಗರಬತ್ತಿಯನ್ನು ತಿನ್ನಲು ಬರುವುದಿಲ್ಲ. ಕೇವಲ ನೋಡಲು ಮತ್ತು ಆಘ್ರಾಣಿಸಲು ಮಾತ್ರ ಇದು ಚಿಕನ್​ನಂತೆ ಇರುತ್ತದೆ.

ಕೆಎಫ್​ಸಿಯ ಥಾಯ್ಲೆಂಡ್ ವಿಭಾಗವು ಈ ಫ್ರೈಡ್ ಚಿಕನ್ ಅಗರಬತ್ತಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ ಗುರಿಯಾಗಿದೆ. ಅದಾದ ಬಳಿಕ ಈ ಪೋಸ್ಟ್ ಅನ್ನು ಕೆಎಫ್​ಸಿ ಅಳಿಸಿಹಾಕಿತು.


ಇದರ ತಯಾರಿಕೆ ಹೇಗೆ?

ಕೆಎಫ್​ಸಿ ಸಂಸ್ಥೆಯದ್ದೇ ಆದ ವಿಶೇಷ ರಿಸಿಪಿ ಇದೆ. ಇದರಲ್ಲಿ 11 ಸಸ್ಯ ಮತ್ತು ಮಸಾಲೆಗಳನ್ನೊಳಗೊಂಡ ರಿಸಿಪಿ ಅದು. ಅದೇ ರೀತಿಯ ಫ್ಲೇವರ್ ಬರುವಂತೆ ಅಗರಬತ್ತಿಯನ್ನು ತಯಾರಿಸುವುದು ಕೆಎಫ್​ಸಿಗೆ ಸವಾಲಿನ ಕೆಲಸವಾಗಿತ್ತು. ಅದಕ್ಕಾಗಿ ಕೆಎಫ್​ಸಿ ಸೆಂಟ್ ವಿಭಾಗವು ಕೆಲ ತಜ್ಞ ಸಂಸ್ಥೆಗಳ ಜೊತೆ ಸೇರಿ ಈ ಕಾರ್ಯ ಮಾಡಿದೆ.

ಅಂದಹಾಗೆ ಈ ಕೆಎಫ್​ಸಿ ಫ್ರೈಡ್ ಚಿಕನ್ ಅಗರಬತ್ತಿಯು ಮಾರಾಟಕ್ಕಿಲ್ಲ. ಸೌರಮಾನ ಹೊಸ ವರ್ಷದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೊಡಲು ಮಾತ್ರ ಇದರ ತಯಾರಿಕೆ ಮಾಡಲಾಗಿತ್ತು. ಯಾರಿಗೆ ಗೊತ್ತು, ಈ ಅಗರಬತ್ತಿ ಜನರಿಗೆ ಇಷ್ಟವಾಗಿಬಿಟ್ಟಿದ್ದರೆ ಕೆಎಫ್​ಸಿ ಕೌಂಟರುಗಳಲ್ಲಿ ಇದನ್ನು ಮಾರಾಟಕ್ಕಿಡಲಾಗುತ್ತಿತ್ತೇನೋ

Published On - 4:08 pm, Mon, 30 January 23