
ಉತ್ತರ ಕೊರಿಯಾ(North Korea)ದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ, ಹೆಚ್ಚು ಮಕ್ಕಳನ್ನು ಹೆರುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un) ಮಹಿಳೆಯರಲ್ಲಿ ಮನವಿ ಮಾಡಿ ಕಣ್ಣೀರು ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ದೇಶದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯುವುದು ಮಹಿಳೆಯರ ಕರ್ತವ್ಯವಾಗಿದೆ ಎಂದರು. ನಮ್ಮ ಸರ್ಕಾರವು ಮಹಿಳೆಯರಿಗೆ ಹೆಚ್ಚು ಮಕ್ಕಳು ಹೆರುವ ನಿಟ್ಟಿನಲ್ಲಿ ಮನವಿ ಮಾಡುತ್ತಿದೆ ಎಂದು ಭಾನುವಾರ ನಡೆದ ತಾಯಂದಿರ ರಾಷ್ಟ್ರೀಯ ಸಭೆಯಲ್ಲಿ ಕಿಮ್ ಈ ಮನವಿ ಮಾಡಿದರು.
ಕಳೆದ 10 ವರ್ಷಗಳಿಂದ ಉತ್ತರ ಕೊರಿಯಾದ ಜನನ ಪ್ರಮಾಣವು ಕುಸಿಯುತ್ತಿದೆ ಎಂದು ದಕ್ಷಿಣ ಕೊರಿಯಾದ ಸರ್ಕಾರ ಅಂದಾಜಿಸಿದೆ.
ಎಲ್ಲಾ ರೀತಿಯ ನಿರ್ಬಂಧಗಳಿಂದ ಸುತ್ತುವರಿದ ತನ್ನ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಸಂಘಟಿತ ಕಾರ್ಮಿಕರನ್ನು ಅವಲಂಬಿಸಿರುವ ದೇಶಕ್ಕೆ ಈ ಪರಿಸ್ಥಿತಿಯು ಆತಂಕಕಾರಿಯಾಗಿದೆ.
Kim Jong Un CRIES while telling North Korean women to have more babies.
The dictator shed tears while speaking at the National Mothers Meeting as he urged women to boost the countries birth rate. pic.twitter.com/J354CyVnln
— Oli London (@OliLondonTV) December 5, 2023
ಕಳೆದ 20 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ದಕ್ಷಿಣ ಕೊರಿಯಾದ ಟಿವಿ ನಾಟಕಗಳು ಮತ್ತು ಚಲನಚಿತ್ರಗಳು ಬಹುಶಃ ಉತ್ತರ ಕೊರಿಯಾದ ಮಹಿಳೆಯರಿಗೆ ಹೆಚ್ಚು ಮಕ್ಕಳನ್ನು ಹೊಂದದಂತೆ ಪ್ರೇರೇಪಿಸುತ್ತವೆ ಎಂದು ಹೇಳಿದರು. ಉತ್ತರ ಕೊರಿಯಾ ಜನಸಂಖ್ಯೆಯ ಬೆಳವಣಿಗೆಯನ್ನು ನಿಧಾನಗೊಳಿಸಲು 1970-80 ರ ದಶಕದಲ್ಲಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತಂದಿತು.
ಮತ್ತಷ್ಟು ಓದಿ: ರಷ್ಯಾಗೆ 2 ದಿನ ತೆಗೆದುಕೊಳ್ಳಬಹುದೆಂದು ಗೊತ್ತಿದ್ದರೂ ಕಿಮ್ ಜಾಂಗ್ ಉನ್ ಅದೇ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?
ಸಿಯೋಲ್ ಮೂಲದ ಹ್ಯುಂಡೈ ರಿಸರ್ಚ್ ಇನ್ಸ್ಟಿಟ್ಯೂಟ್ ಆಗಸ್ಟ್ನಲ್ಲಿ ವರದಿಯೊಂದರಲ್ಲಿ 1990 ರ ದಶಕದ ಮಧ್ಯಭಾಗದಲ್ಲಿ ಕ್ಷಾಮದ ನಂತರ ದೇಶದ ಫಲವತ್ತತೆ ದರವು ಕುಸಿದಿದೆ ಎಂದು ಹೇಳಿದೆ. ನೂರಾರು ಸಾವಿರ ಜನರು ಸತ್ತಿದ್ದಾರೆಂದು ಅಂದಾಜಿಸಲಾಗಿದೆ. ನಾಯಕ ಮಾತನಾಡುವಾಗ ಕಿಮ್ ಮಾತ್ರವಲ್ಲ, ಪ್ರೇಕ್ಷಕರಲ್ಲಿ ಅನೇಕ ಮಹಿಳೆಯರು ಅಳುತ್ತಿರುವುದು ಕಂಡುಬಂದಿತು. ಬಳಿಕ ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದರು.
ಉಚಿತ ವಸತಿ, ಸಬ್ಸಿಡಿಗಳು, ಉಚಿತ ಆಹಾರ, ಔಷಧ ಮತ್ತು ಗೃಹಪಯೋಗಿ ವಸ್ತುಗಳು, ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸೇರಿದಂತೆ ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗುತ್ತದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ