ಚಾರ್ಲ್ಸ್ ಪಟ್ಟಾಭಿಷೇಕ ವಿರೋಧಿಸಿ ಅಭಿಯಾನಗಳು ಶುರುವಾಗುತ್ತಿದಂತೆಯೇ ಡಯಾನಾ ತಮ್ಮ ಸಾವಿನ ಭವಿಷ್ಯ ಬಗ್ಗೆ ನುಡಿದಿದ್ದು ಮುನ್ನೆಲೆಗೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 14, 2022 | 1:58 PM

ಡಯಾನಾ ಅವರಿಗೆ ಜೀವ ಬೆದರಿಕೆ ಇದ್ದಿದ್ದು ಕೇವಲ ಬಾಣಸಿಗನಿಗೆ ಮಾತ್ರ ಗೊತ್ತಿತ್ತು ಅಂತೇನೂ ಇಲ್ಲ, ರಾಜಮನೆತನದ ಆಪ್ತ ಮತ್ತು ಮೆಜೆಸ್ಟಿ ಪತ್ರಿಕೆಯ ಮುಖ್ಯ ಸಂಪಾದಕ ಇಂಗ್ರಿಡ್ ಸಿವರ್ಡ್ ಅವರಿಗೂ ರಾಜಕುಮಾರಿ ಡಯಾನಾ ತನ್ನ ಸಾವಿನ ಬಗ್ಗೆ ಮುಂತಿಳಿಸಿದ್ದು ಗೊತ್ತಿತ್ತು.

ಚಾರ್ಲ್ಸ್ ಪಟ್ಟಾಭಿಷೇಕ ವಿರೋಧಿಸಿ ಅಭಿಯಾನಗಳು ಶುರುವಾಗುತ್ತಿದಂತೆಯೇ ಡಯಾನಾ ತಮ್ಮ ಸಾವಿನ ಭವಿಷ್ಯ ಬಗ್ಗೆ ನುಡಿದಿದ್ದು ಮುನ್ನೆಲೆಗೆ!
ದೊರೆ ಚಾರ್ಲ್ಸ್ lll ಮತ್ತು ದಿವಂಗತ ಡಯಾನಾ
Follow us on

ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth) ಸೆಪ್ಟೆಂಬರ್ 8 ರಂದು ಬಾಲ್ಮೋರಲ್ ಕ್ಯಾಸಲ್ ನಲ್ಲಿ (Balmoral Castle) ಕುಟುಂಬದ ಸದಸ್ಯರು ತಮ್ಮ ಪಕ್ಕದಲ್ಲಿ ನೆರೆದಿರುವಾಗ ಕೊನೆಯುಸಿರೆಳೆದರು. ಅವರ ಮರಣದ ಬಳಿಕ ಅರಸೊತ್ತಿಗೆಯ ಮುಂದಿನ ದೊರೆಯಾಗಿ ರಾಜಮನೆತದ ಯೋಜನೆಯಂತೆ ರಾಣಿಯ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸ್ (Prince Charles) ಸಿಂಹಾಸನವನ್ನೇರಿದರು. ಆದರೆ ಚಾರ್ಲ್ಸ್ ಯುನೈಟೆಡ್ ಕಿಂಗ್ಡಮ್ ದೊರೆಯೆಂದು ಅಧಿಕೃತ ಘೋಷಣೆ ಹೊರಬಿದ್ದ ಬಳಿಕ ಟ್ವಟರ್ ನಲ್ಲಿ #NotMyKing ಹ್ಯಾಷ್ ಟ್ಯಾಗ್ ಜೋರಾಗಿ ಹರಿದಾಡುತ್ತಿರುವುದು ಡಯಾನಾ ಅವರು ತಮ್ಮ ಸಾವಿನ ಬಗ್ಗೆ ನುಡಿದಿದ್ದ ಭವಿಷ್ಯವನ್ನು ಮುನ್ನೆಲೆಗೆ ಬರುವಂತೆ ಮಾಡಿದೆ.

ಡಯಾನಾ ತಮ್ಮ ಸಾವಿನ ಬಗ್ಗೆಯೇ ಭವಿಷ್ಯ ನುಡಿದಿದ್ದರು!

ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಹಳಷ್ಟು ಜನರಿಗೆ ಚಾರ್ಲ್ಸ್ ದೊರೆಯಾಗಿರುವುದು ಇಷ್ಟವಾಗಿಲ್ಲ. ಜಾಲತಾಣಗಳಲ್ಲಿ ಅವರ ವಿರುದ್ದ ವ್ಯಕ್ತಪಡಿಸಿರುವ ಭಾವನೆಗಳು, ಸ್ಲೋಗನ್​ಗಳು, ಮತ್ತು ವಿಡಿಯೋಗಳು #NotMyKing ಹ್ಯಾಷ್ ಟ್ಯಾಗ್ ನೊಂದಿಗೆ ಹರಿದಾಡುತ್ತಿವೆ.

ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ, ರಾಜಕುಮಾರಿ ಡಯಾನಾ ಅವರ ಬಾಣಸಿಗ ಆಕೆ ತನ್ನ ಸಾವಿನ ಬಗ್ಗೆ ಭವಿಷ್ಯ ನುಡಿದುಕೊಂಡಿದ್ದರು ಅಂತ ತಾನು ಬರೆದಿರುವ ಪುಸ್ತಕವೊಂದರಲ್ಲಿ ಉಲ್ಲೇಖಿಸಿದ್ದಾರೆ. ಪೌಲ್ ಬುರೆಲ್ ಹೆಸರಿನ ಬಾಣಸಿಗ ಬರೆದಿರುವ ‘ದಿ ರಾಯಲ್ ಡ್ಯೂಟಿ’ ಪುಸ್ತಕದಲ್ಲಿ ರಾಜಕುಮಾರಿ ತನಗೊಂದು ಪತ್ರ ಬರೆದು ಅದರಲ್ಲಿ ಅವರು ತನಗೆ ಜೀವ ಬೆದರಿಕೆಯಿದೆ ಮತ್ತು ತನ್ನ ಸಾವನ್ನು ಅಪಘಾತದ ಹಾಗೆ ಬಿಂಬಿಸುವ ಯೋಜನೆ ತಯಾರಾಗಿದೆ ಅಂತ ಆತಂಕ ವ್ಯಕ್ತಪಡಿಸಿದ್ದರು ಎಂದು ಬರೆದಿದ್ದಾರೆ.

ತನ್ನ ಮಾಜಿ ಪತಿ ಪುನರ್ ವಿವಾಹ ಮಾಡಿಕೊಳ್ಳಲು ಅನುಕೂಲವಾಗುವಂತೆ ಇದನ್ನೆಲ್ಲ ಮಾಡಲಾಗುವುದು ಅಂತ ಪತ್ರದಲ್ಲಿ ಬರೆದಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಏತನ್ಮಧ್ಯೆ, #NotMyKing ಟ್ವಿಟರ್ ನಲ್ಲಿ ನಾನಾ ಕಾರಣಗಳಿಗೆ ಮತ್ತು ಭಯಂಕಾರವಾಗಿ ಟ್ರೆಂಡ್ ಆಗುತ್ತಿದೆ. ಕಿಂಗ್ ಚಾರ್ಲ್ಸ್ lll ಬ್ರಿಟನ್ನಿನ ದೊರೆಯಾಗಿ ವಿದ್ಯುಕ್ತ ಘೋಷಣೆ ಹೊರಬಿದ್ದ ಮೇಲೆ ಅವರು ‘ಜನರ ವಿನಮ್ರ ಸೇವಕ’ನೆಂದು ಹೇಳಿಕೊಂಡ ವಿಡಿಯೋಗಳು ವೈರಲ್ ಆಗಿವೆ. ಜನ ಬೀದಿಗಿಳಿದು ದೊರೆಯ ವಿರುದ್ಧ ಪ್ರತಿಭಟಿಸಲಾರಂಭಿಸಿದ್ದಾರೆ.

ಸಾವಿನ ಬಗ್ಗೆ ಡಯಾನಾ ಹೇಳಿಕೊಂಡಿದ್ದ ಭವಿಷ್ಯ ರಹಸ್ಯವಾಗೇನೂ ಉಳಿದಿರಿಲಿಲ್ಲ

ಡಯಾನಾ ಅವರಿಗೆ ಜೀವ ಬೆದರಿಕೆ ಇದ್ದಿದ್ದು ಕೇವಲ ಬಾಣಸಿಗನಿಗೆ ಮಾತ್ರ ಗೊತ್ತಿತ್ತು ಅಂತೇನೂ ಇಲ್ಲ, ರಾಜಮನೆತನದ ಆಪ್ತ ಮತ್ತು ಮೆಜೆಸ್ಟಿ ಪತ್ರಿಕೆಯ ಮುಖ್ಯ ಸಂಪಾದಕ ಇಂಗ್ರಿಡ್ ಸಿವರ್ಡ್ ಅವರಿಗೂ ರಾಜಕುಮಾರಿ ಡಯಾನಾ ತನ್ನ ಸಾವಿನ ಬಗ್ಗೆ ಮುಂತಿಳಿಸಿದ್ದು ಗೊತ್ತಿತ್ತು. ಈ ಸಂಗತಿಯನ್ನು ಸಿವರ್ಡ್ ಅವರು ರೆನಿ ಸೈಲರ್ ಸಹ-ನಿರೂಪಕಿಯಾಗಿದ್ದ ದಿ ಅರ್ಲಿ ಶೋನಲ್ಲಿ ಬಹಿರಂಗಗೊಳಿಸಿದ್ದರು.

ಇದನ್ನು ನಾನು ಹೇಳುತ್ತಿರುವುದು ನಿಮಗೆ ವಿಚಿತ್ರ ಅನಿಸಬಹುದು, ಆದರೆ, ನನ್ನ ಹತ್ಯೆಗೆ ಪಿತೂರಿ ನಡೆದಿತ್ತು ಅಂತ ನಾನು ಖಚಿತವಾಗಿ ಹೇಳಬಲ್ಲೆ. ನಾನು ಅಂದುಕೊಳ್ಳುವ ಹಾಗೆ ನನ್ನ ಕಾರಿನ ಬ್ರೇಕ್ ಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ನಡೆದಿದೆ ಮತ್ತು ನನ್ನ ಅಪಾರ್ಟ್ ಮೆಂಟ್ ನಲ್ಲಿ ಶೋಧನೆ ನಡೆಸಿ ಮೈಕ್ರೋಫೋನ್ ಗಳನ್ನು ಬಚ್ಚಿಡಲಾಗಿದೆ, ಅಂತ ಡಯಾನಾ ಹೇಳಿದ್ದರು, ಅಂತ ಸಿವರ್ಡ್ ಕಾರ್ಯಕ್ರಮದಲ್ಲಿ ಹೇಳಿದ್ದರು.

ಹುಡುಕಾಟ ನಡೆಸಿದವರಿಗೆ ಏನೂ ಸಿಕ್ಕಿರಲಿಲ್ಲ ಅದು ಬೇರೆ ವಿಷಯ, ಎಂದಿದ್ದ ಸಿವರ್ಡ್, ‘ಇದೆಲ್ಲ ಬಾಲಿಷ ಅನಿಸುವುದಿಲ್ಲವೇ?’ ಅಂತ ಡಯಾನಾ ಕೇಳಿದ್ದರು, ಅಂತ ತಿಳಿಸಿದ್ದರು. ಪ್ರಿನ್ಸ್ ಚಾರ್ಲ್ಸ್ ಗೆ ವಿಚ್ಛೇದನ ನೀಡಿದ ವರ್ಷ ಅದೆಲ್ಲ ಸಂಭವಿಸಲಿದೆ ಎಂದು ಡಯಾನಾ ಭಾವಿಸಿದ್ದರು, ಎಂದು ಸಿವರ್ಡ್ ಹೇಳಿದ್ದರು.

ಅದು ತನ್ನ ಬದುಕಿನ ಅತ್ಯಂತ ಕೆಟ್ಟ ವರ್ಷ ಎಂದು ಡಯಾನಾ ಹೇಳಿದ್ದರು. ತಮ್ಮ ಮನೆಯನ್ನು ಜಾಲಾಡಿದ್ದು ಮತ್ತು ಮೈಕ್ರೋಫೋನ್ ಗಳನ್ನು ಅಳವಡಿಸಿದ್ದು ಮೊದಲಾದ ಸಂಗತಿಗಳು ಅವರಿಗೆ ತಮ್ಮ ಪ್ರಾಣಕ್ಕೆ ಅಪಾಯವಿರುವ ಭೀತಿಯನ್ನು ಮೂಡಿಸಿದ್ದವು ಎಂದು ಸಿವರ್ಡ್ ಹೇಳಿದ್ದರು.