AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿಯಲ್ಲಿ ಮಾಸ್ಕ್ ಧರಿಸು ಅಂತ ಸ್ಟೋರೊಂದರ ಕ್ಯಾಶಿಯರ್ ಹೇಳಿದ್ದಕ್ಕೆ ಅವನನ್ನು ಗುಂಡಿಟ್ಟು ಕೊಂದ ವ್ಯಕ್ತಿಗೆ ಜೀವಾವಧಿ ಸೆರೆವಾಸದ ಶಿಕ್ಷೆ

ಬೀಯರ್ ಕೊಳ್ಳಲು ಸ್ಟೋರ್ ನೊಳಗೆ ಮಾಸ್ಕ್ ಧರಿಸದೆ ಬಂದ ವ್ಯಕ್ತಿಗೆ ಅದನ್ನು ಧರಿಸುವಂತೆ 20-ವರ್ಷದ ವಿದ್ಯಾರ್ಥಿ-ಉದ್ಯೋಗಿ ಅಲೆಕ್ಸ್ ಡಬ್ಲ್ಯೂ ಹೇಳಿದಾಗ ಗಲಾಟೆ ಆರಂಭವಾಗಿತ್ತು. ಆ ಸಮಯದಲ್ಲಿ ಜರ್ಮನ್ನರು ಯಾವುದೇ ಸ್ಟೋರ್ ಗೆ ಹೋಗಬೇಕಾದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.

ಜರ್ಮನಿಯಲ್ಲಿ ಮಾಸ್ಕ್ ಧರಿಸು ಅಂತ ಸ್ಟೋರೊಂದರ ಕ್ಯಾಶಿಯರ್ ಹೇಳಿದ್ದಕ್ಕೆ ಅವನನ್ನು ಗುಂಡಿಟ್ಟು ಕೊಂದ ವ್ಯಕ್ತಿಗೆ ಜೀವಾವಧಿ ಸೆರೆವಾಸದ ಶಿಕ್ಷೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 14, 2022 | 7:54 AM

Share

ಬ್ಯಾಡ್ ಕ್ರ್ಯುಜ್ನಾ (ಜರ್ಮನಿ): ಪೆಟ್ರೋಲ್ ಸ್ಟೇಶನ್ ಒಂದರಲ್ಲಿ ಬೀಯರ್ ಖರೀದಿಸಲು ಮಾಸ್ಕ್ (Mask) ಧರಿಸದೆ ಹೋಗಿದ್ದನ್ನು ಅಲ್ಲಿನ ಕ್ಯಾಶಿಯರ್ ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಗುಂಡು ಹಾರಿಸಿ ಕೊಂದಿದಕ್ಕೆ 50-ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನಿಗೆ ಜೀವಾವಧಿ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ. ಜರ್ಮನಿಯ ಪಶ್ಚಿಮ ಭಾಗಕ್ಕಿರುವ ಇದರ್-ಒಬರ್ಸ್ಟೀನ್ (Idar-Oberstien) ಹೆಸರಿನ ಪಟ್ಟಣದಲ್ಲಿ ಸೆಪ್ಪೆಂಬರ್ 2021ರಲ್ಲಿ ನಡೆದ ಈ ಹತ್ಯೆ ನಾಗರಿಕರನ್ನು ಯಾವಮಟ್ಟಿಗೆ ರೊಚ್ಚಿಗೆಬ್ಬಿಸಿತೆಂದರೆ ಅವರು ಸರ್ಕಾರದ ಕೊರೊನಾವೈರಸ್ (Coronavirus) ನಿಬಂಧನೆಗಳಿಗೆ ಪ್ರತಿಯಾಗಿ ಮಾಸ್ಕ್ ಮತ್ತು ಲಸಿಕೆ ವಿರುದ್ಧ ತೀವ್ರಸ್ವರೂಪದ ಆಂದೋಲನವನ್ನು ಆರಂಭಿಸಿದ್ದರು.

ಬೀಯರ್ ಕೊಳ್ಳಲು ಸ್ಟೋರ್ ನೊಳಗೆ ಮಾಸ್ಕ್ ಧರಿಸದೆ ಬಂದ ವ್ಯಕ್ತಿಗೆ ಅದನ್ನು ಧರಿಸುವಂತೆ 20-ವರ್ಷದ ವಿದ್ಯಾರ್ಥಿ-ಉದ್ಯೋಗಿ ಅಲೆಕ್ಸ್ ಡಬ್ಲ್ಯೂ ಹೇಳಿದಾಗ ಗಲಾಟೆ ಆರಂಭವಾಗಿತ್ತು. ಆ ಸಮಯದಲ್ಲಿ ಜರ್ಮನ್ನರು ಯಾವುದೇ ಸ್ಟೋರ್ ಗೆ ಹೋಗಬೇಕಾದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಅಲೆಕ್ಸ್ ನೊಂದಿಗೆಸ್ವಲ್ಪ ಹೊತ್ತು ವಾಗ್ವಾದ ನಡೆಸಿದ ಬಳಿಕ ಆ ವ್ಯಕ್ತಿ ಅಲ್ಲಿಂದ ಹೊರಟುಹೋಗಿದ್ದ.

ಮಾರಿಯಾ ಎನ್ ಎಂದು ಗುರುತಿಸಲಾಗಿರುವ ಆ ವ್ಯಕ್ತಿ (ಹಂತಕ) ಅರ್ಧಗಂಟೆಯ ನಂತರ ಮಾಸ್ಕ್ ಧರಿಸಿಕೊಂಡೇ ಸ್ಟೋರ್ ಗೆ ವಾಪಸ್ಸು ಬಂದಿದ್ದ. ಅವನು ಬೀಯರ್ ನ 6 ಪ್ಯಾಕ್ ಗಳನ್ನು ತೆಗೆದುಕೊಂಡು ಬಿಲ್ಲಿಂಗ್ ಕೌಂಟರ್ ಬಳಿ ಬಂದಾಗ ಮಾಸ್ಕ್ ತೆಗೆದುಬಿಟ್ಟಿದ್ದರಿಂದ ಮತ್ತೊಮ್ಮೆ ಜಗಳ ಶುರುವಾಗಿತ್ತು.

ತನ್ನ ತಾಳ್ಮೆಯನ್ನು ಸಂಪೂರ್ಣವಾಗಿ ಕಳೆದುಕೊಂಡ ಮಾರಿಯೋ ಜೇಬಿನಿಂದ ರಿವಾಲ್ವರ್ ಹೊರಗೆಳೆದು ತೀರ ಹತ್ತಿರದಿಂದ ಅಲೆಕ್ಸ್ (ಕ್ಯಾಶಿಯರ್) ತಲೆಗೆ ಗುಂಡು ಹಾರಿಸಿದ್ದ.

ಮಂಗಳವಾರ ಬ್ಯಾಡ್ ಕ್ರ್ಯುಜ್ನಾದಲ್ಲಿರುವ ಜಿಲ್ಲಾ ನ್ಯಾಯಲಯ ಮಾರಿಯೋ ಎನ್ ಹತ್ಯೆ ಮತ್ತು ಕಾನೂನುಬಾಹಿರವಾಗಿ ಪಿಸ್ತೂಲೊಂದನ್ನು ಹೊಂದಿದ್ದ ಅಪರಾಧದಲ್ಲಿ ಜೀವಾವಧಿ ಸೆರೆವಾಸದ ಶಿಕ್ಷೆ ಪ್ರಕಟಿಸಿತು.

ಜರ್ಮನಿಯಲ್ಲಿ ಜಾರಿಯಲ್ಲಿರರುವ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಗೊಳಗಾಗುವ ಕೈದಿಗಳು 15 ವರ್ಷಗಳ ಶಿಕ್ಷೆಯ ನಂತರ ಪರೋಲ್ ಕೇಳಬಹುದಾಗಿದೆ. ಅವನ ಪರ ವಾದಿಸಿದ ವಕೀಲರು ತನ್ನ ಕಕ್ಷಿದಾರನಿಗೆ ಕೊಲೆಗಿಂತ ನರಹತ್ಯೆ ಮಾಡಿದ ಅಪರಾಧದ ಅಡಿ ಶಿಕ್ಷೆ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದರು.

ಪ್ರಕರಣದ ವಿಚಾರಣೆ ಆರಂಭವಾದಾಗ ಸರ್ಕಾರೀ ವಕೀಲ ನಿಕೋಲ್ ಫ್ರೋಹ್ನ್ ಅವರು ಕೋವಿಡ್ ಪಿಡುಗನ್ನು ಹತ್ತಿಕ್ಕಲು ಜಾರಿಗೊಳಿಸಲಾಗಿದ್ದ ನಿಬಂಧನೆಗಳ ಬಗ್ಗೆ ಮಾರಿಯೋನಲ್ಲಿ ವಿಪರೀತ ಕೋಪ ಮನೆಮಾಡಿತ್ತು, ಅದು ತನ್ನ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಅವನು ಭಾವಿಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

‘ಆ ಸ್ಥಿತಿಯ ನಿರ್ಮಾಣಕ್ಕೆ ಕಾರಣರಾದ ರಾಜಕಾರಣಿಗಳನ್ನು ತಾನೇನೂ ಮಾಡಲಾರೆ ಅನ್ನೊದನ್ನು ಅರಿತಿದ್ದ ಮಾರಿಯೋ, ಅಲೆಕ್ಸ್ ನನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡ,’ ಎಂದು ಅವರು ನ್ಯಾಯಾಲಯದಲ್ಲಿ ಹೇಳಿದರು.

ಅಲೆಕ್ಸ್ ನನ್ನು ಕೊಂದ ಬಳಿಕ ಮಾರಿಯೋ ಪೊಲೀಸರಿಗೆ ಶರಣಾಗಿದ್ದ.

ಪ್ರಸ್ತುತವಾಗಿ, ಜರ್ಮನಿಯಲ್ಲಿ ಕೊರೊನಾವೈರಸ್ ಗೆ ಸಂಬಂಧಿಸಿದ ಬಹಳಷ್ಟು ನಿಬಂಧನೆಗಳನ್ನು ಸಡಲಿಸಿಸಲಾಗಿದೆ. ಆದಾಗ್ಯೂ, ಸಾರ್ವಜನಿಕ ಸಾರಿಗೆ ಸೇರಿದಂತೆ ಕೆಲ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ.