Malaysia Landslide: ಮಲೇಷ್ಯಾದಲ್ಲಿ ಭೂಕುಸಿತಕ್ಕೆ 8 ಮಂದಿ ಬಲಿ, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಮಲೇಷ್ಯಾ(Malaysia) ದಲ್ಲಿ ಭೂಕುಸಿತ(Landslide) ಸಂಭವಿಸಿದ್ದು, 8ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ

Malaysia Landslide: ಮಲೇಷ್ಯಾದಲ್ಲಿ ಭೂಕುಸಿತಕ್ಕೆ 8 ಮಂದಿ ಬಲಿ, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ
Landslide
Edited By:

Updated on: Dec 16, 2022 | 9:18 AM

ಮಲೇಷ್ಯಾ(Malaysia) ದಲ್ಲಿ ಭೂಕುಸಿತ(Landslide) ಸಂಭವಿಸಿದ್ದು, 8ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ, ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಭೂಕುಸಿತದಿಂದ ಮೂವರು ಗಾಯಗೊಂಡಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಯುದ್ಧಾಧಾರಿತವಾಗಿ ಆರಂಭಿಸಲಾಗಿದೆ. ಶೀಘ್ರ ಜನರನ್ನು ಹೊರತರುವ ಕೆಲಸವೂ ನಡೆಯುತ್ತಿದೆ.

ಇದುವರೆಗೆ 31 ಮಂದಿಯನ್ನು ಶಿಬಿರ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ನೊರಾಜಮ್ ಖಮೀಸ್ ತಿಳಿಸಿದ್ದಾರೆ. ಕ್ಯಾಂಪ್‌ಸೈಟ್‌ನಿಂದ ಸುಮಾರು 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಸುಮಾರು ಒಂದು ಎಕರೆ ಪ್ರದೇಶ ಹಾನಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:16 am, Fri, 16 December 22