Twitter New Rule: ಟ್ವಿಟ್ಟರ್ನಲ್ಲಿ ಇನ್ನುಮುಂದೆ ಯಾರೂ ಕೂಡ ಲೈವ್ ಲೊಕೇಷನ್ ಹಂಚಿಕೊಳ್ಳುವಂತಿಲ್ಲ
ಟ್ವಿಟ್ಟರ್ (Twitter)ನಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಖಾತೆಯಲ್ಲಿ ಲೈವ್ ಲೊಕೇಷನ್ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್(Elon Musk) ಸ್ಪಷ್ಟಪಡಿಸಿದ್ದಾರೆ.
ಟ್ವಿಟ್ಟರ್ (Twitter)ನಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಖಾತೆಯಲ್ಲಿ ಲೈವ್ ಲೊಕೇಷನ್ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್(Elon Musk) ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಲೈವ್ ಲೊಕೇಷನ್ (Live Location)ಮಾಹಿತಿಯನ್ನು ಡಾಕ್ಸಿಂಗ್ ಮಾಡಿದರೆ ಅವರ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ, ಏಕೆಂದರೆ ಇದು ಭೌತಿಕ ಸುರಕ್ಷತೆಯ ಉಲ್ಲಂಘನೆಯಾಗುತ್ತದೆ. ಈ ಕುರಿತು ಟ್ವಿಟ್ಟರ್ ಸ್ಪಷ್ಟನೆ ನೀಡಿದ್ದು, ಜನರು ತಮ್ಮ ಲೈವ್ ಲೋಕೇಶನ್ಅನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡಬಹುದು.
ಅಲ್ಲದೇ ಮ್ಯೂಸಿಕ್ ಕಾರ್ಯಕ್ರಮಗಳು, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಈವೆಂಟ್ಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ, ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ ಕೊಟ್ಟು ಖರೀದಿ ಮಾಡಿದ್ದ ಸಂದರ್ಭದಲ್ಲಿ ಎಲಾನ್ ಮಸ್ಕ್, ಟ್ವಿಟರ್ ಖಾತೆಗಳನ್ನು ರದ್ದು ಮಾಡುವುದಿಲ್ಲ ಎಂದು ತಿಳಿಸಿದ್ದರು.
Any account doxxing real-time location info of anyone will be suspended, as it is a physical safety violation. This includes posting links to sites with real-time location info.
Posting locations someone traveled to on a slightly delayed basis isn’t a safety problem, so is ok.
— Elon Musk (@elonmusk) December 15, 2022
ಎಲಾನ್ ಜೆಟ್ ಟ್ವಿಟರ್ ಖಾತೆಯನ್ನು ರದ್ದು ಪಡಿಸಿದ ಬಳಿಕ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರೋ ಜ್ಯಾಕ್, ನನ್ನ ಟ್ವಿಟರ್ ಖಾತೆಯನ್ನು ರದ್ದುಪಡಿಸಿದ ಬಳಿಕ ಮಸ್ಕ್ ಅವರ ಜೆಟ್ ಕಳೆದ ರಾತ್ರಿ ಲಾಸ್ಎಂಜಲೀಸ್ನಿಂದ ಆಸ್ಟಿನ್ಗೆ ಹಾರಾಟ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ:Twitter Layoffs: ಸ್ತ್ರೀಯರನ್ನೇ ಗುರಿ ಮಾಡುತ್ತಾರೆ; ಎಲಾನ್ ಮಸ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆಯರು
ಎಲಾನ್ ಮಸ್ಕ್ ಅವರ ಖಾಸಗಿ ಜೆಟ್ಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಲಾನ್ಜೆಟ್ ಖಾತೆಯನ್ನು ಟ್ವಿಟರ್ ರದ್ದುಪಡಿಸಿದೆ. ಎಲಾನ್ ಮಸ್ಕ್ರ ಫ್ರೀ ಸ್ಪಿಚ್ ಬಹಿರಂಗ ಹೇಳಿಕೆ ಬಳಿಕವೂ ಎಲಾನ್ಜೆಟ್ ಟ್ವಿಟರ್ ಖಾತೆಯನ್ನು ರದ್ದು ಪಡಿಸಲಾಗಿದೆ.
ಈ ಟ್ವಿಟ್ಟರ್ ಖಾತೆಯಲ್ಲಿ ಎಲಾನ್ ಮಸ್ಕ್ರ ಖಾಸಗಿ ಜೆಟ್ಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಟ್ವಿಟರ್ ಖಾತೆಯನ್ನು 19 ವರ್ಷದ ಜ್ಯಾಕ್ ಎಂಬಾತ ತೆರದು ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ