AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾ: ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನಿಂದ ಉದ್ಯಮಿ ದರ್ಶನ್ ಹತ್ಯೆ, ಪಂಜಾಬಿ ಗಾಯಕನ ಮನೆ ಮೇಲೂ ಗುಂಡಿನ ದಾಳಿ

ಕೆನಡಾ(Canada)ದಲ್ಲಿ ಗ್ಯಾಂಗ್​ವಾರ್​ಗಳು ಹೆಚ್ಚುತ್ತಿವೆ. ವಿಶೇಷವಾಗಿ ಭಾರತದ ಗ್ಯಾಂಗ್​ಸ್ಟರ್​ಗಳು ಅಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಕೆನಡಾದ ಉದ್ಯಮಿ ದರ್ಶನ್ ಸಿಂಗ್ ಅವರನ್ನು ಹತ್ಯೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಬಳಿಕ ಕೆಲವೇ ಹೊತ್ತಲ್ಲಿ ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದಾರೆ. ಗ್ಯಾಂಗ್ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿತ್ತು ಬಳಿಕ ಬಿಷ್ಣೋಯ್ ಗ್ಯಾಂಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಘಟನೆಯ ಹೊಣೆಯನ್ನು ಹೊತ್ತುಕೊಂಡಿತ್ತು.

ಕೆನಡಾ: ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನಿಂದ ಉದ್ಯಮಿ ದರ್ಶನ್ ಹತ್ಯೆ, ಪಂಜಾಬಿ ಗಾಯಕನ ಮನೆ ಮೇಲೂ ಗುಂಡಿನ ದಾಳಿ
ಬಿಷ್ಣೋಯ್Image Credit source: Times Of India
ನಯನಾ ರಾಜೀವ್
|

Updated on: Oct 29, 2025 | 11:13 AM

Share

ಕೆನಡಾ, ಅಕ್ಟೋಬರ್ 29: ಕೆನಡಾ(Canada)ದಲ್ಲಿ ಗ್ಯಾಂಗ್ವಾರ್ಗಳು ಹೆಚ್ಚುತ್ತಿವೆ. ವಿಶೇಷವಾಗಿ ಭಾರತದ ಗ್ಯಾಂಗ್ಸ್ಟರ್ಗಳು ಅಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಕೆನಡಾದ ಉದ್ಯಮಿ ದರ್ಶನ್ ಸಿಂಗ್ ಅವರನ್ನು ಹತ್ಯೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆ ಬಳಿಕ ಕೆಲವೇ ಹೊತ್ತಲ್ಲಿ ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದಾರೆ. ಗ್ಯಾಂಗ್ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿತ್ತು ಬಳಿಕ ಬಿಷ್ಣೋಯ್ ಗ್ಯಾಂಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಘಟನೆಯ ಹೊಣೆಯನ್ನು ಹೊತ್ತುಕೊಂಡಿತ್ತು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಗೋಲ್ಡಿ ಧಿಲ್ಲನ್ ಎರಡೂ ಘಟನೆಗಳ ಹೊಣೆಯನ್ನು ಹೊತ್ತುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಉದ್ಯಮಿ ದರ್ಶನ್ ಸಿಂಗ್ ದೊಡ್ಡ ಮಾದಕವಸ್ತು ವ್ಯಾಪಾರದಲ್ಲಿ ಭಾಗಿಯಾಗಿದ್ದರಿಂದ ಅವರ ಗ್ಯಾಂಗ್ ಅವರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಬಿಷ್ಣೋಯ್ ಗ್ಯಾಂಗ್ ಕೇಳಿದಾಗ ಹಣ ನೀಡಲು ನಿರಾಕರಿಸಿದಾಗ ಮತ್ತು ನಮ್ಮ ನಂಬರ್ ಅನ್ನು ಬ್ಲಾಕ್ ಮಾಡಿದ್ದಕ್ಕಾಗಿ ತಮ್ಮ ಗ್ಯಾಂಗ್ ಅವರನ್ನು ಹತ್ಯೆ ಮಾಡಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

1991 ರಲ್ಲಿ ದರ್ಶನ್ ಕೆನಡಾಕ್ಕೆ ತೆರಳಿದ್ದರು

ಉದ್ಯಮಿ ದರ್ಶನ್ ಕೆನಮ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರಾಗಿದ್ದರು, ಇದು ಪ್ರಸಿದ್ಧ ಜವಳಿ ಮರುಬಳಕೆ ಕಂಪನಿಯಾಗಿದೆ.ಅವರು 1991 ರಲ್ಲಿ ಕೆನಡಾಕ್ಕೆ ವಲಸೆ ಬಂದರು ಮತ್ತು ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು.ಷ್ಟದಲ್ಲಿ ಸಿಲುಕಿದ್ದ ಜವಳಿ ಮರುಬಳಕೆ ಘಟಕದಲ್ಲಿ ಪಾಲನ್ನು ಪಡೆದುಕೊಂಡರು ಮತ್ತು ಅದನ್ನು ಜಾಗತಿಕ ಕಂಪನಿಯಾಗಿ ಪರಿವರ್ತಿಸಿದರು.

ಒಬ್ಬ ಯಶಸ್ವಿ ಕೈಗಾರಿಕೋದ್ಯಮಿ ಮಾತ್ರವಲ್ಲದೆ ಲೋಕೋಪಕಾರಿ ವ್ಯಕ್ತಿಯೂ ಆಗಿದ್ದರು. ಅವರ ಸಾವು ಅಬಾಟ್ಸ್‌ಫೋರ್ಡ್ ಮತ್ತು ಕೆನಡಾದ ಪಂಜಾಬಿ ಸಮುದಾಯದಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ:  Explained: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?

ಈ ಘಟನೆಯನ್ನು ಕೆನಡಾದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದು ಅನೇಕ ಸಮುದಾಯದ ಮುಖಂಡರು ಬಣ್ಣಿಸಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಗಾಯಕನ ಮನೆ ಮೇಲೆ ಗ್ಯಾಂಗ್ ಗುಂಡಿನ ದಾಳಿ ನಡೆದಿದೆ. ನಟ್ಟನ್ ಜೊತೆ ತಮ್ಮ ಗ್ಯಾಂಗ್‌ಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಧಿಲ್ಲೋನ್ ಹೇಳಿದ್ದಾರೆ.ಆದರೆ ಖೇರಾ ಅವರೊಂದಿಗೆ ಕೆಲಸ ಮಾಡುವ ಯಾವುದೇ ಗಾಯಕ ತಮ್ಮ ನಷ್ಟಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಿದರು.

ಕೆನಡಾ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಲಾಗಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ 700 ಕ್ಕೂ ಹೆಚ್ಚು ಶೂಟರ್‌ಗಳೊಂದಿಗೆ ಸಂಬಂಧ ಹೊಂದಿದೆ ಎಂದು ವರದಿಯಾಗಿದೆ.

ಸಿಧು ಮೂಸೆವಾಲಾ ಹತ್ಯೆ, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕುವುದು ಮತ್ತು ಖಲಿಸ್ತಾನ್ ಪರ ಚಳವಳಿಯೊಂದಿಗೆ ಸಂಪರ್ಕ ಹೊಂದಿದೆ ಎಂಬ ಆರೋಪ ಸೇರಿದಂತೆ ಹಲವಾರು ಉನ್ನತ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ