ವೀಡಿಯೊ ವೀಕ್ಷಿಸಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಉದ್ದನೆಯ ಜೀವಂತ ಹಾವು!

|

Updated on: Oct 09, 2023 | 3:46 PM

ಅಂತಹ ವೀಡಿಯೊ ಒಂದು ನೆಟಿಜನ್‌ಗಳನ್ನು ಹೆಚ್ಚು ಆಕರ್ಚಷಿಸುತ್ತಿದೆ. ಅದೇ ವೇಳೆ ಆತಂಕವೂ ಆಗಿದೆ.ಆ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಆ ಭಯಂಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ವೈದ್ಯರ ತಂಡ ಒಬ್ಬ ಮಹಿಳೆಯ ಬಾಯಿಯಿಂದ ಉದ್ದನೆಯ ಹಾವನ್ನು ಸರಸರನೆ ಎಳೆದುಹಾಕಿದ್ದಾರೆ. ಇನ್ನೂ ಗಾಬರಿಪಡುವಂತಹ ಸಂಗತಿಯೆಂದರೆ ಆ ಹಾವು ಜೀವಂತವಾಗಿತ್ತು!

ವೀಡಿಯೊ ವೀಕ್ಷಿಸಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಉದ್ದನೆಯ ಜೀವಂತ ಹಾವು!
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಜೀವಂತ ಹಾವು!
Follow us on

ಚಿತ್ರ ವಿಚಿತ್ರ ಘಟನಾವಳಿಗಳು ಇಂಟರ್‌ನೆಟ್ ಬಳಕೆಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿರುತ್ತವೆ. ಎಲ್ಲರಿಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟ್ಟರ್, ಯೂ ಟ್ಯೂಬ್ನಂತಹ ಯಾವುದೋ ಒಂದು ಸ್ಥಳ ನಿಗದಿಯಾಗಿರುತ್ತದೆ. ಇನ್ನು ಅದರ ಮೂಲಕ ಅವರು ವೇಗವಾಗಿ ಫೇಮಸ್ ಆಗಬೇಕೆಂದು ಪ್ರಯತ್ನಿಸುತ್ತಾರೆ. ಅಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾಮ್‌ನಲ್ಲಿ ಹಲವಾರು ರೀತಿಯ ವಿಚಿತ್ರ ಘಟನೆಗಳು, ಸಚಿತ್ರ ಫೋಟೋ ಸುದ್ದಿಗಳು, ರೀಲ್​​ಗಳಾಗಿ ಅಪ್‌ಲೋಡ್ ಆಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಮನುಷ್ಯರು ಮಾಡುವ ಚಿತ್ರವಿಚಿತ್ರ ಕೆಲಸಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ವೀಡಿಯೊಗಳು ವೈರಲ್ ಆಗುತ್ತವೆ.

ಅಂತಹ ವೀಡಿಯೊ ಒಂದು ನೆಟಿಜನ್‌ಗಳನ್ನು ಹೆಚ್ಚು ಆಕರ್ಚಷಿಸುತ್ತಿದೆ. ಅದೇ ವೇಳೆ ಆತಂಕವೂ ಆಗಿದೆ.ಆ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಆ ಭಯಂಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ವೈದ್ಯರ ತಂಡ ಒಬ್ಬ ಮಹಿಳೆಯ ಬಾಯಿಯಿಂದ ಉದ್ದನೆಯ ಹಾವನ್ನು ಸರಸರನೆ ಎಳೆದುಹಾಕಿದ್ದಾರೆ. ಇನ್ನೂ ಗಾಬರಿಪಡುವಂತಹ ಸಂಗತಿಯೆಂದರೆ ಆ ಹಾವು ಜೀವಂತವಾಗಿತ್ತು!

ಮಹಿಳೆಯ ಹೊಟ್ಟೆಯೊಳಕ್ಕೆ ಆ ಹಾವು ಹೇಗೆ ಪ್ರವೇಶಿಸಿತು ಎಂಬದು ಇಲ್ಲಿ ಆಶ್ಚರ್ಯವನ್ನುಂಟು ಮಾಡುವ ಅಂಶ. ಅಂತರ್ಜಾಲದಲ್ಲಿ ಬಹಳಷ್ಟು ಜನರು ಇದು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ. ವೈರಲ್ ವೀಡಿಯೋದಲ್ಲಿ ಮಹಿಳೆಯ ಬಾಯಿಯಿಂದ ಡಾಕ್ಟರ್ ಸುಮಾರು ಒಂದು ಮೀಟರ್ ಉದ್ದ ಇರುವ ಹಾವನ್ನು ತೆಗೆಯುವುದು ಗೋಚರವಾಗುತ್ತದೆ.

ಇದನ್ನೂ ಓದಿ:  ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಭೇಟಿ -ನಾಗಪ್ರತಿಷ್ಠೆ, ತುಲಾಭಾರ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ