AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಪಡೆಗಳು ಮಾಲ್ಡೀವ್ಸ್ ತೊರೆಯಲಿ: ಚುನಾಯಿತ ಅಧ್ಯಕ್ಷ ಮೊಹಮದ್ ಮುಯಿಜ್ಜು

ಹಿಂದೂ ಮಹಾಸಾಗರದ ದ್ವೀಪಸಮೂಹದ ಹೊಸದಾಗಿ ಚುನಾಯಿತರಾದ ಮುಯಿಜ್ಜು ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ "ಇದು ಭಾರತೀಯ ವಿದೇಶಿ ಮಿಲಿಟರಿ ಉಪಸ್ಥಿತಿಯಾಗಿದೆ" ಎಂದು ಹೇಳಿದ್ದು, ಪಡೆಗಳು ಬೇರೆ ಯಾವುದೇ ದೇಶದವರಾಗಿದ್ದರೂ ಅವರ ಪ್ರತಿಕ್ರಿಯೆ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು

ಭಾರತೀಯ ಪಡೆಗಳು ಮಾಲ್ಡೀವ್ಸ್ ತೊರೆಯಲಿ: ಚುನಾಯಿತ ಅಧ್ಯಕ್ಷ ಮೊಹಮದ್ ಮುಯಿಜ್ಜು
ಮಾಲ್ಡೀವ್ಸ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 27, 2023 | 3:43 PM

ಮಾಲೆ ಅಕ್ಟೋಬರ್ 27: ಮಾಲ್ಡೀವ್ಸ್ ( Maldives) “ಸಂಪೂರ್ಣ ಸ್ವತಂತ್ರ” ವನ್ನು ಹೊಂದಲು ಉದ್ದೇಶಿಸಿದ್ದು, ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯ ಪಡೆಗಳು (Indian troops) ವಾಪಸ್ ಹೋಗಬೇಕು ಎಂದು ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮದ್ ಮುಯಿಜ್ಜು (Mohamed Muizzu) ಹೇಳಿದ್ದಾರೆ. ಭಾರತ ಮತ್ತು ಚೀನಾ ಈ ಪ್ರದೇಶದಲ್ಲಿ ಪ್ರಭಾವಕ್ಕಾಗಿ ಸ್ಪರ್ಧಿಸುತ್ತಿದೆ. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮುಯಿಜ್ಜು ಅವರು ದ್ವೀಪ ರಾಷ್ಟ್ರದ ವ್ಯವಹಾರಗಳ ಮೇಲೆ ಭಾರತವನ್ನು ಅನಿಯಂತ್ರಿತವಾಗಿ ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಾರತೀಯ ಸೈನಿಕರನ್ನು ಅಲ್ಲಿ ನೆಲೆಸಲು ಅವಕಾಶ ನೀಡುವ ಮೂಲಕ ದೇಶದ ಸಾರ್ವಭೌಮತ್ವವನ್ನು ಒಪ್ಪಿಸಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಮೇಲೆ ಆರೋಪ ಮಾಡಿದ್ದಾರೆ.

ಹಿಂದೂ ಮಹಾಸಾಗರದ ದ್ವೀಪಸಮೂಹದ ಹೊಸದಾಗಿ ಚುನಾಯಿತರಾದ ಮುಯಿಜ್ಜು ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ “ಇದು ಭಾರತೀಯ ವಿದೇಶಿ ಮಿಲಿಟರಿ ಉಪಸ್ಥಿತಿಯಾಗಿದೆ” ಎಂದು ಹೇಳಿದ್ದು, ಪಡೆಗಳು ಬೇರೆ ಯಾವುದೇ ದೇಶದವರಾಗಿದ್ದರೂ ಅವರ ಪ್ರತಿಕ್ರಿಯೆ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು.

ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ಭಾರತ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ. ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಕುರಿತು ತಾನು ಈಗಾಗಲೇ ಭಾರತ ಸರ್ಕಾರದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇನೆ ಎಂದು ಮುಯಿಜ್ಜು ಹೇಳಿದರು, ಆ ಮಾತುಕತೆಗಳು “ಈಗಾಗಲೇ ಬಹಳ ಯಶಸ್ವಿಯಾಗಿದೆ” ಎಂದಿದ್ದಾರೆ.

“ನಾವು ಪರಸ್ಪರ ಪ್ರಯೋಜನಕಾರಿಯಾದ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತೇವೆ. ಭಾರತೀಯ ಸೈನಿಕರನ್ನು ಇತರ ದೇಶಗಳ ಪಡೆಗಳಿಂದ ಬದಲಾಯಿಸಲಾಗುವುದಿಲ್ಲ. ಮಿಲಿಟರಿ ಸಿಬ್ಬಂದಿಯನ್ನು ತೆಗೆದುಹಾಕಲು ಭಾರತವನ್ನು ಕೇಳಿಕೊಳ್ಳುವುದು ಎಂದರೆ “ಚೀನಾ ಅಥವಾ ಇತರ ಯಾವುದೇ ದೇಶಗಳಿಗೆ ತಮ್ಮ ಮಿಲಿಟರಿ ಪಡೆಗಳನ್ನು ಇಲ್ಲಿಗೆ ಕರೆತರಲು ನಾನು ಅವಕಾಶ ನೀಡಲಿದ್ದೇನೆ ಎಂದರ್ಥವಲ್ಲ ಎಂದಿದ್ದಾರೆ.

ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾಗಳು ಹೆಚ್ಚುತ್ತಿರುವ ದೃಢವಾದ ಮತ್ತು ಖಚಿತವಾದ ಬೀಜಿಂಗ್ ಅನ್ನು ಪ್ರತ್ಯೇಕಿಸಲು ನೋಡುತ್ತಿವೆ ಮತ್ತು ಏಷ್ಯಾದಲ್ಲಿ ಪ್ರಾದೇಶಿಕ ಕೌಂಟರ್ ವೇಟ್ ಮತ್ತು ಪ್ರಮುಖ ಪಾಲುದಾರರಾಗಿ ಭಾರತವನ್ನು ಬೆಂಬಲಿಸಲು ಹೆಚ್ಚು ಹೂಡಿಕೆ ಮಾಡಿದೆ.

ಇದನ್ನೂ ಓದಿ: ಉತ್ತಮ ಭವಿಷ್ಯ ಬೇಕಾದರೆ ನಾವು ಹೇಳಿದಂತೆ ಮಾಡಿ; ಗಾಜಾದಲ್ಲಿ ಕರಪತ್ರ ನೀಡಿದ ಇಸ್ರೇಲ್

ಮುಯಿಜ್ಜು ಈಗ ಭಾರತದ ಪಡೆಗಳನ್ನು ತೆಗೆದುಹಾಕುವ ಮೂಲಕ ಮತ್ತು ದಕ್ಷಿಣ ಏಷ್ಯಾದ ನೆರೆಹೊರೆಯವರೊಂದಿಗೆ ಪ್ರತಿಕೂಲ ವ್ಯಾಪಾರ ಸಮತೋಲನವನ್ನು ಪರಿಹರಿಸುವ ಮೂಲಕ ತಂತ್ರವನ್ನು ಬದಲಾಯಿಸಲು ಭರವಸೆ ನೀಡಿದ್ದಾರೆ. “ನಾವು ಎಲ್ಲಾ ದೇಶಗಳೊಂದಿಗೆ ನೆರವು, ಸಹಕಾರವನ್ನು ಬಯಸುತ್ತೇವೆ” ಎಂದು ಮುಯಿಜ್ಜು ಹೇಳಿದ್ದು, ಚುನಾವಣೆಗಳು ಚೀನಾ ಅಥವಾ ಭಾರತದೊಂದಿಗೆ ನಿಕಟ ಸಂಬಂಧಗಳ ಜನಾಭಿಪ್ರಾಯ ಸಂಗ್ರಹವಾಗಿದೆ ಎಂಬ ಕಲ್ಪನೆಯನ್ನು ತಳ್ಳಿಹಾಕಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ