ಪ್ರವಾಸಿಗರಿಲ್ಲದೆ ಕಂಗೆಟ್ಟ ಮಾಲ್ಡೀವ್ಸ್​, ಜನರ ಸೆಳೆಯಲು ಭಾರತದಲ್ಲಿ ರೋಡ್​ ಶೋಗೆ ಸಜ್ಜು

ಪ್ರಧಾನಿ ನರೇಂದ್ರ ಮೋದಿ ಹಾಗೂ ಲಕ್ಷದ್ವೀಪದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್​ ಇದೀಗ ಭಾರತೀಯರನ್ನು ಸೆಳೆಯಲು ಭಾರತದಲ್ಲಿ ರೋಡ್​ ಶೋ ನಡೆಸಲು ಸಿದ್ಧತೆ ನಡೆಸಿದೆ. ಲಕ್ಷದ್ವೀಪವನ್ನು ಅಭಿವೃದ್ಧಿ ಮಾಡಿದಾಕ್ಷಣ ಅದು ಮಾಲ್ಡೀವ್ಸ್​ ಆಗುವುದಿಲ್ಲ ಎಂದು ಮಾಲ್ಡೀವ್ಸ್​ನ ಸಚಿವರು ಹೇಳಿಕೆ ನೀಡಿದ್ದರು. ಇದಾದ ಬಳಿಕ ಭಾರತದ ಹಲವು ಮಂದಿ ಮಾಲ್ಡೀವ್ಸ್​ಗೆ ಹೋಗಬೇಕೆಂದುಕೊಂಡವರು ಕೂಡ ತಮ್ಮ ಪ್ರವಾಸ ರದ್ದುಗೊಳಿಸಿ ಲಕ್ಷದ್ವೀಪಕ್ಕೆ ತೆರಳಿದ್ದರು

ಪ್ರವಾಸಿಗರಿಲ್ಲದೆ ಕಂಗೆಟ್ಟ ಮಾಲ್ಡೀವ್ಸ್​, ಜನರ ಸೆಳೆಯಲು ಭಾರತದಲ್ಲಿ ರೋಡ್​ ಶೋಗೆ ಸಜ್ಜು
ಮಲ್ಡೀವ್ಸ್​

Updated on: Apr 12, 2024 | 2:53 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಲಕ್ಷದ್ವೀಪ( Lakshadweep)ದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್(Maldives)​ ಇದೀಗ ಭಾರತೀಯರನ್ನು ಸೆಳೆಯಲು ಭಾರತದಲ್ಲಿ ರೋಡ್​ ಶೋ ನಡೆಸಲು ಸಿದ್ಧತೆ ನಡೆಸಿದೆ. ಲಕ್ಷದ್ವೀಪವನ್ನು ಅಭಿವೃದ್ಧಿ ಮಾಡಿದಾಕ್ಷಣ ಅದು ಮಾಲ್ಡೀವ್ಸ್​ ಆಗುವುದಿಲ್ಲ ಎಂದು ಮಾಲ್ಡೀವ್ಸ್​ನ ಸಚಿವರು ಹೇಳಿಕೆ ನೀಡಿದ್ದರು. ಇದಾದ ಬಳಿಕ ಭಾರತದ ಹಲವು ಮಂದಿ ಮಾಲ್ಡೀವ್ಸ್​ಗೆ ಹೋಗಬೇಕೆಂದುಕೊಂಡವರು ಕೂಡ ತಮ್ಮ ಪ್ರವಾಸ ರದ್ದುಗೊಳಿಸಿ ಲಕ್ಷದ್ವೀಪಕ್ಕೆ ತೆರಳಿದ್ದರು.

ಇಷ್ಟು ವರ್ಷ ಮಾಲ್ಡೀವ್ಸ್​ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರತದವರೇ ಹೆಚ್ಚು, ಮಾಲ್ಡೀವ್ಸ್ ಪ್ರವಾಸೋದ್ಯಮವನ್ನೇ ನಂಬಿಕೊಂಡಿದೆ. ಹಾಗಾಗಿ ಪ್ರವಾಸಿಗರಿಲ್ಲದೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಭಾರತೀಯರನ್ನು ಸೆಳೆಯಲು ಮುಂದಾಗಿದೆ.

ಮಾಲ್ಡೀವ್ಸ್​ ಅಸೋಸಿಯೇಷನ್ ಆಫ್​ ಟ್ರಾವೆಲ್​ ಏಜೆಂಟ್ಸ್​ ಆ್ಯಂಡ್ ಟೂರ್ ಆಪರೇಟರ್ಸ್​, ಪ್ರಮುಖ ಪ್ರವಾಸೋದ್ಯಮ ಸಂಸ್ಥೆಯು ಈ ಘೋಷಣೆ ಮಾಡಿದೆ. ಆದರೆ ಯಾವ ಯಾವ ನಗರಗಳಲ್ಲಿ ಮತ್ತು ಯಾವಾಗ ರೋಡ್​ ಶೋ ನಡೆಯಲಿದೆ ಎನ್ನುವ ಮಾಹಿತಿ ನೀಡಿಲ್ಲ.

ಮತ್ತಷ್ಟು ಓದಿ: ಭಾರತದ ಧ್ವಜಕ್ಕೆ ಅಗೌರವ, ಕೊನೆಗೂ ಕ್ಷಮೆಯಾಚಿಸಿದ ಅಮಾನತುಗೊಂಡ ಮಾಲ್ಡೀವ್ಸ್​ ಸಚಿವೆ ಮರಿಯಮ್

ಭಾರತೀಯ ಪ್ರವಾಸಿಗರ ಕೊರತೆಯ ನಡುವೆ, ಎರಡು ದೇಶಗಳ ನಡುವಿನ ಪ್ರಯಾಣ ಮತ್ತು ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸುವ ಕುರಿತು ಭಾರತದ ಹೈಕಮಿಷನ್ ಮುನು ಮಹಾವರ್ ಅವರೊಂದಿಗೆ ಮಾಟಾಟೊ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಜನವರಿ 3 ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಜನವರಿ 6ರಂದು ಅಲ್ಲಿನ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರಕೃತಿ ಸೌಂದರ್ಯದ ಜತೆಗೆ ಲಕ್ಷದ್ವೀಪದ ಶಾಂತಿಯೂ ಮೈಮರೆತಿದೆ ಎಂದಿದ್ದಾರೆ.

ಇದರ ನಂತರ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್​ ನಡುವೆ ಹೋಲಿಕೆ ಪ್ರಾರಂಭವಾಯಿತು, ಈ ಕುರಿತು ಮಾಲ್ಡೀವ್ಸ್​ನ ಕೆಲವು ಸಚಿವರು ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ