AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರ್​​ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್

ಮಸೂದ್ ಅಜರ್ ಕುಟುಂಬವನ್ನು ತುಂಡುಗಳಾಗಿ ಮಾಡಲಾಯಿತು. ಪಾಕಿಸ್ತಾನದ ವಿರುದ್ಧ ಭಾರತದ 'ಆಪ್ ಸಿಂಧೂರ್' ಸಮಯದಲ್ಲಿ ಆದ ನಷ್ಟವನ್ನು ಜೈಶ್ ಸಂಘಟನೆ ಒಪ್ಪಿಕೊಂಡಿದೆ. ಭಾರತವು ಬಹ್ವಾಲ್ಪುರದಲ್ಲಿರುವ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ ನಂತರ ಮಸೂದ್ ಅಜರ್ ಕುಟುಂಬದ ಬಗ್ಗೆ ಜೈಶ್-ಎ-ಮೊಹಮ್ಮದ್ ಸಂಘಟನೆಯಿಂದ ಬಂದ ಮೊದಲ ಸಾರ್ವಜನಿಕ ದೃಢೀಕರಣ ಇದು.

ಆಪರೇಷನ್ ಸಿಂಧೂರ್​​ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್
Masood Azhar
ಸುಷ್ಮಾ ಚಕ್ರೆ
|

Updated on: Sep 16, 2025 | 3:35 PM

Share

ಇಸ್ಲಾಮಾಬಾದ್, ಸೆಪ್ಟೆಂಬರ್ 16: ಪಾಕಿಸ್ತಾನದ ಬಹಾವಲ್ಪುರದಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ದೃಢಪಡಿಸಿದ್ದಾರೆ. ಭಾರೀ ಶಸ್ತ್ರಸಜ್ಜಿತ ಪಾಕಿಸ್ತಾನಿ ಸೇನಾ ಸಿಬ್ಬಂದಿಯಿಂದ ಸುತ್ತುವರೆದಿರುವ ಮಸೂದ್ ಇಲ್ಯಾಸ್ ಕಾಶ್ಮೀರಿ ವೀರಾವೇಶದಿಂದ ಭಾರತದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಮೇ 7ರಂದು ನಡೆದ ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ಅಜರ್ ಅವರ ಕುಟುಂಬವನ್ನು “ತುಂಡುಗಳಾಗಿ ಪೀಸ್ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಭಯೋತ್ಪಾದನಾ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆ ಮೊದಲ ಬಾರಿಗೆ ತನ್ನ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ ಸದಸ್ಯರು ಭಾರತದ ಆಪರೇಷನ್ ಸಿಂಧೂರ್‌ನ ಭಾಗವಾಗಿ ಬಹವಾಲ್ಪುರದಲ್ಲಿ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿದೆ. “ಎಲ್ಲವನ್ನೂ ತ್ಯಾಗ ಮಾಡಿದ ನಂತರ ಮೇ 7ರಂದು ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಮೌಲಾನಾ ಮಸೂದ್ ಅಜರ್ ಅವರ ಕುಟುಂಬವನ್ನು ಛಿದ್ರಗೊಳಿಸಿದವು” ಎಂದು ಕಾಶ್ಮೀರಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ; ಆಪರೇಷನ್ ಸಿಂಧೂರ್ ಬಗ್ಗೆ ಸೇನಾ ಮುಖ್ಯಸ್ಥ ಮಹತ್ವದ ಹೇಳಿಕೆ

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ 25 ಪ್ರವಾಸಿಗರು ಸಾವನ್ನಪ್ಪಿದರು, ಓರ್ವ ಸ್ಥಳೀಯ ಕೂಡ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ 9 ಭಯೋತ್ಪಾದಕ ಶಿಬಿರಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿತು. ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾದ ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಅಜರ್‌ನ 10 ಸಂಬಂಧಿಕರನ್ನು ಕೂಡ ಕೊಲ್ಲಲಾಯಿತು. ಇದರಲ್ಲಿ ಅವನ ಸಹೋದರಿ, ಆಕೆಯ ಪತಿ, ಅವನ ಸೋದರಳಿಯ, ಅವನ ಸೊಸೆ ಮತ್ತು ಇತರೆ ಕುಟುಂಬಸ್ಥರು ಕೂಡ ಸೇರಿದ್ದಾರೆ. ಬೆಳಗಿನ ಜಾವದ ದಾಳಿಯಲ್ಲಿ ಅಜರ್‌ನ ನಾಲ್ವರು ಸಹಾಯಕರು ಸಹ ಸಾವನ್ನಪ್ಪಿದ್ದರು.

ಇದನ್ನೂ ಓದಿ: ನೇಪಾಳದ ಮೂಲಕ ಭಾರತದ ಮೇಲೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್, ಜೈಶ್ ದಾಳಿ ಸಾಧ್ಯತೆ

ಮಸೂದ್ ಅಜರ್ ಎಲ್ಲಿ?:

ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಅಜರ್, 2016ರ ಪಠಾಣ್‌ಕೋಟ್ ದಾಳಿ ಮತ್ತು 44 ಸೈನಿಕರನ್ನು ಬಲಿತೆಗೆದುಕೊಂಡ 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದಾನೆ. ಅಜರ್ ಕೊನೆಯ ಬಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಅವನ ಬಹಾವಲ್ಪುರ್ ಭದ್ರಕೋಟೆಯಿಂದ 1,000 ಕಿ.ಮೀ ದೂರದಲ್ಲಿ ಕಾಣಿಸಿಕೊಂಡಿದ್ದಾನೆ. ಜನಪ್ರಿಯ ಪ್ರವಾಸಿ ಕೇಂದ್ರವಾದ ಸ್ಕಾರ್ಡುವಿನಲ್ಲಿ ಅವನು ಕಾಣಿಸಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ