Maldives: ಮಾಲ್ಡೀವ್ಸ್ನಲ್ಲಿ ಭಾರೀ ಅಗ್ನಿ ದುರಂತ, 9 ಭಾರತೀಯರು ಸೇರಿ 10 ಜನ ಸಾವು
ಮಾಲ್ಡೀವ್ಸ್ ರಾಜಧಾನಿ ಮಾಲೆಯ ಇಕ್ಕಟ್ಟಾದ ವಸತಿಗೃಹದಲ್ಲಿ ಭಾರೀ ಅಗ್ನಿ ದುರಂತ. ಬೇರೆ ಬೇರೆ ದೇಶದಿಂದ ಇಲ್ಲಿ ಕೆಲಸ ಬಂದಿದ್ದು, ಒಂದೇ ಕಟ್ಟದಲ್ಲಿ ವಾಸವಾಗಿದ್ದರು. ಇದೀಗ ಈ ಅಗ್ನಿ ದುರಂತದಲ್ಲಿ 10 ಜನ ಸಾವನ್ನಪಿದ್ದಾರೆ.
ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯ ಇಕ್ಕಟ್ಟಾದ ವಸತಿಗೃಹದಲ್ಲಿ ಭಾರೀ ಅಗ್ನಿ ದುರಂತ ನಡೆದಿದೆ. ಬೇರೆ ಬೇರೆ ದೇಶದಿಂದ ಇಲ್ಲಿ ಕೆಲಸ ಬಂದಿದ್ದಾರೆ. ಒಂದೇ ಕಟ್ಟದಲ್ಲಿ ವಾಸವಾಗಿದ್ದರು. ಇದೀಗ ಈ ಅಗ್ನಿ ದುರಂತದಲ್ಲಿ 10 ಜನ ಸಾವನ್ನಪಿದ್ದಾರೆ ಎಂದು ಹೇಳಿಲಾಗಿದೆ. ಇದರಲ್ಲಿ 9 ಜನ ಭಾರತೀಯರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅನೇಕರಿಗೆ ಗಾಯಲಾಗಿದ್ದು, ಅಗ್ನಿಶಾಮಕ ದಳ ಈಗಾಗಲೇ ಸ್ಥಳಕ್ಕೆ ಬಂದಿದ್ದು ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದೆ. ಇಕ್ಕಟ್ಟಾದ ವಸತಿಗೃಹಗಳಲ್ಲಿ ಬೆಂಕಿ ಆವರಿಸಿದ್ದರಿಂದ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವೆ ತಿಳಿಸಿದೆ. ಬೆಂಕಿಯಲ್ಲಿ ಧ್ವಂಸಗೊಂಡ ಕಟ್ಟಡದ ಮೇಲಿನ ಮಹಡಿಯಿಂದ ಅಧಿಕಾರಿಗಳು 10 ಮೃತದೇಹಗಳನ್ನು ಹೊರತೆಗೆದಿದ್ದಾರೆ.
BREAKING NEWSރޭ ދަންވަރު މާލޭގައި ހިނގި އަލިފާނުގެ ހާދިސާގައި މިހާތަނަށް 10 މީހަކު ވަނީ މަރުވެފައި
ތަފްސީލް: https://t.co/apR9yGOL7E
Video Credits: Najah Masood pic.twitter.com/qZV3mLWr8w
— Mihaaru (@Mihaarunews) November 10, 2022
ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ನಾವು 10 ಶವಗಳನ್ನು ಪತ್ತೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ. ಬೆಂಕಿಯಲ್ಲಿ ಸಾವನ್ನಪ್ಪಿದ ಇನ್ನೊಬ್ಬ ವ್ಯಕ್ತಿ ಬಾಂಗ್ಲಾದೇಶದ ಪ್ರಜೆ ಎಂದು ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
We are deeply saddened by the tragic fire incident in Malé which has caused loss of lives, including reportedly of Indian nationals.
We are in close contact with the Maldivian authorities.
For any assistance, HCI can be reached on following numbers: +9607361452 ; +9607790701
— India in Maldives (@HCIMaldives) November 10, 2022
ಬೇರೆ ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದ ಮತ್ತು ಮಾಲ್ಡೀವ್ಸ್ನಲ್ಲಿ ವಾಸವಾಗಿದ್ದ ಉದ್ಯೋಗಿಗಳು ಈ ಕಟ್ಟದಲ್ಲಿ ಅರ್ಧದಷ್ಟು ಜನ ಇದ್ದರು ಮತ್ತು ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಹೇಳಲಾಗುತ್ತದೆ. ಯಾವುದೇ ಸಹಾಯಕ್ಕಾಗಿ, HCI ಅನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ ಎಂದು +9607361452 ; +9607790701 ಮಾಲ್ಡೀವ್ಸ್ ಟ್ವಿಟ್ ಮಾಡಿದೆ.
Published On - 12:10 pm, Thu, 10 November 22