ಸೂಡಾನ್​ನಲ್ಲಿ ಮಿಲಿಟರಿ ಕ್ಷಿಪ್ರ ಕ್ರಾಂತಿ: ಸೆರೆಮನೆಗೆ ಪ್ರಧಾನಿ, ಸಚಿವರು

ಸೇನೆಯ ಪರವಾಗಿ ಹೇಳಿಕೆ ನೀಡಲು ನಿರಾಕರಿಸಿದ ಪ್ರಧಾನಿ ಅಬ್ದಲ್ಲಾ ಹಮ್​ಡೊಕ್ ಅವರನ್ನು ಬಂಧಿಸಿ ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಸೂಡಾನ್​ನಲ್ಲಿ ಮಿಲಿಟರಿ ಕ್ಷಿಪ್ರ ಕ್ರಾಂತಿ: ಸೆರೆಮನೆಗೆ ಪ್ರಧಾನಿ, ಸಚಿವರು
ಕ್ಷಿಪ್ರಕ್ರಾಂತಿ ವಿರೋಧಿಸಿ ಸೂಡಾನ್​ನಲ್ಲಿ ಪ್ರತಿಭಟನೆಗಳು ಗರಿಗೆದರಿವೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 25, 2021 | 3:44 PM

ಖರ್​ಟೌಮ್: ಸೂಡಾನ್​ ಪ್ರಧಾನಿ, ಸಚಿವರು ಮತ್ತು ಸರ್ಕಾರದ ಪರ ಇರುವ ಹಲವು ನಾಯಕರನ್ನು ಸೂಡಾನ್ ಸೇನೆಯು ಸೋಮವಾರ ಬಂಧಿಸಿ ಸೆರೆಮನೆಗೆ ಕಳುಹಿಸಿದೆ. ಪ್ರಜಾಪ್ರಭುತ್ವ ಸ್ಥಾಪನೆಯ ಸಾಧ್ಯತೆಗಳು ಈ ಕ್ಷಿಪ್ರಕ್ರಾಂತಿಯೊಂದಿಗೆ ಮರೀಚಿಕೆಯಾಗಿದೆ. ಸೇನೆಯ ಪರವಾಗಿ ಹೇಳಿಕೆ ನೀಡಲು ನಿರಾಕರಿಸಿದ ಪ್ರಧಾನಿ ಅಬ್ದಲ್ಲಾ ಹಮ್​ಡೊಕ್ ಅವರನ್ನು ಬಂಧಿಸಿ ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಹಮ್​ಡೊಕ್ ಅವರನ್ನು ಗೃಹ ಬಂಧನದಲ್ಲಿ ಇರಿಸಿರುವ ಸೇನೆ ಬೆಂಬಲ ಸೂಚಿಸಿ ಹೇಳಿಕೆ ನೀಡಲು ಒತ್ತಾಯಿಸುತ್ತಿದೆ. ಕ್ಷಿಪ್ರಕ್ರಾಂತಿಯ ಕುರಿತು ಸೇನೆಯಿಂದ ಈವರೆಗೆ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.

ಕಳೆದ ತಿಂಗಳು ಸಹ ಸೂಡಾನ್​ನಲ್ಲಿ ಕ್ಷಿಪ್ರಕ್ರಾಂತಿಗೆ ವಿಫಲ ಪ್ರಯತ್ನ ನಡೆದಿತ್ತು. 2019ರಲ್ಲಿ ದೇಶವನ್ನು ಆಳುತ್ತಿದ್ದ ಒಮರ್-ಅಲ್-ಬಷೀರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಸೇನೆ ಮತ್ತು ನಾಗರಿಕ ಗುಂಪುಗಳ ನಡುವೆ ಅಧಿಕಾರ ಹಂಚಿಕೆಗಾಗಿ ಸಂಘರ್ಷಗಳು ನಡೆಯುತ್ತಲೇ ಇವೆ. ಹಲವು ತಿಂಗಳುಗಳ ಕಾಲ ನಡೆದ ಪ್ರತಿಭಟನೆಗಳ ನಂತರ ಬಷೀರ್ ಅಧಿಕಾರ ಕಳೆದುಕೊಂಡಿದ್ದರು. ಮೂರು ದಶಕಗಳ ಅವಧಿಗೆ ಸೂಡಾನ್ ದೇಶವನ್ನು ಬಿಗಿ ಮುಷ್ಟಿಯಲ್ಲಿಟ್ಟುಕೊಂಡಿದ್ದ ಬಷೀರ್ ಪದಚ್ಯುತಿಯ ನಂತರದ ರಾಜಕೀಯ ಸ್ಥಿತ್ಯಂತರದ ಕಾಲಘಟ್ಟವು ಹಲವು ಹಿಂಸಾಚಾರಗಳಿಗೂ ಸಾಕ್ಷಿಯಾಗಿತ್ತು. 2023ರ ಅಂತ್ಯದ ಹೊತ್ತಿಗೆ ಸೂಡಾನ್​ನಲ್ಲಿ ಚುನಾವಣೆ ನಡೆಯಬೇಕಿತ್ತು.

ಪೂರ್ವ ಸೂಡಾನ್​ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿರುವ ಸೇನೆಯು ಹಮ್​ಡೊಕ್ ಸರ್ಕಾರದ ವಿರುದ್ಧ ಸೇನಾಕ್ಷಿಪ್ರ ಕ್ರಾಂತಿ ನಡೆಸಿದೆ ಎಂದು ಪ್ರಧಾನಿ ಕಚೇರಿಯ ವಕ್ತಾರರು ಅಲ್​ ಅರೇಬಿಯಾ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ಅಮೆರಿಕ ಸಮಕ್ಷಮದಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಫತಾಹ್ ಅಲ್ ಬುರ್ಹಾನ್ ಅವರೊಂದಿಗೆ ಪ್ರಧಾನಿ ಹಮ್​ಡೊಕ್ ಒಪ್ಪಂದವೊಂದನ್ನು ಮಾಡಿಕೊಂಡಿದ್ದರೂ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಈ ಸಂಬಂಧ ಸೂಡಾನ್​ನಲ್ಲಿ ಆಡಳಿತದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬುರ್ಹಾನ್ ಶೀಘ್ರ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸರ್ಕಾರಿ ಟಿವಿ ವಾಹಿನಿ ತಿಳಿಸಿದೆ.

ಸೇನಾ ಕ್ಷಿಪ್ರಕ್ರಾಂತಿಯನ್ನು ಸೂಡಾನ್​ನ ಜನರು ಬೆಂಬಲಿಸಿಲ್ಲ. ರಾಜಧಾನಿ ಖರ್​ಟೌಮ್​ನಲ್ಲಿರುವ ಸೇನಾ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿರುವ ಜನರು ಪ್ರಜಾಪ್ರಭುತ್ವ ಸ್ಥಾಪನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಶಸ್ತ್ರ ಸೈನಿಕರ ಎದುರೇ ಧೈರ್ಯವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇದನ್ನೂ ಓದಿ: ಸಿರಿಯಾದಲ್ಲಿ ಯುಎಸ್​ ಸೇನೆಯಿಂದ ಡ್ರೋಣ್​ ದಾಳಿ; ಅಲ್​ ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಹತ್ಯೆ ಇದನ್ನೂ ಓದಿ: ಟ್ಯಾಂಕ್​ ನಾಶಕ ಕ್ಷಿಪಣಿ ಪ್ರಯೋಗ ಯಶಸ್ವಿ: ಭೂಸೇನೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ

Published On - 3:44 pm, Mon, 25 October 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ