ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ, ಕೈವ್‌ನಲ್ಲಿ ಸರಣಿ ಸ್ಫೋಟಕ್ಕೆ 8 ಬಲಿ
ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲಿನ ಸ್ಫೋಟಕ್ಕೆ ಉಕ್ರೇನ್‌ಗೆ ಮಾಸ್ಕೋ ದೂಷಿಸಿದ ಒಂದು ದಿನದ ನಂತರ ಸ್ಫೋಟಗಳು ಸಂಭವಿಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.
ಕೈವ್: ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ ಮಾಸ್ಕೋ, ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ (Ukraine) ರಾಜಧಾನಿ ಕೈವ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಉಕ್ರೇನ್‌ನ ಹಲವು ನಗರಗಳ ಮೇಲೆ ಸೋಮವಾರ ದಾಳಿ ನಡೆದಿವೆ ಎಂದು ಉಕ್ರೇನ್ ತಿಳಿಸಿದೆ. ಉಕ್ರೇನ್ ಕ್ಷಿಪಣಿ (Missile Attack) ದಾಳಿಗೆ ಒಳಗಾಗಿದೆ. ನಮ್ಮ ದೇಶದ ಹಲವು ನಗರಗಳಲ್ಲಿ ದಾಳಿ ಬಗ್ಗೆ ಮಾಹಿತಿ ಇದೆ ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅದೇ ವೇಳೆ ಜನರು ದಾಳಿಯಿಂದ ರಕ್ಷಣೆ ಪಡೆಯಲು ಆಶ್ರಯತಾಣದಲ್ಲೇ ಇರಿ ಎಂದು ಜನರಿಗೆ ಕರೆ ನೀಡಿದ್ದಾರೆ. ಸ್ಫೋಟಗಳು ಸ್ಥಳೀಯ ಸಮಯ (0515 GMT) 8:15 ರ ಸುಮಾರಿಗೆ ಕೈವ್‌ಗೆ ಅಪ್ಪಳಿಸಿತು. ಸ್ಫೋಟದ ಸ್ಥಳದ ಕಡೆಗೆ ಹಲವಾರು ಆಂಬ್ಯುಲೆನ್ಸ್‌ಗಳು ಹೋಗಿರುವುದಾಗಿ ಎಎಫ್ ಪಿ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಹೇಳಿದ್ದಾರೆ. ಕೈವ್ ನಲ್ಲಿ ಸೋಮವಾರ ಬೆಳಿಗ್ಗೆ ಕನಿಷ್ಠ ಐದು ಸ್ಫೋಟ ಸಂಭವಿಸಿದೆ. ರಾಜಧಾನಿಯ ಮಧ್ಯಭಾಗದಲ್ಲಿರುವ ಶೆವ್ಚೆಂಕಿವ್ಸ್ಕಿ ಜಿಲ್ಲೆಯಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊಗಳು ನಗರದ ಹಲವಾರು ಪ್ರದೇಶಗಳಲ್ಲಿ ಕಪ್ಪು ಹೊಗೆ ಏರುತ್ತಿರುವುದನ್ನು ತೋರಿಸಿದೆ. ಕೈವ್ ಮೇಲೆ ರಷ್ಯಾದ ಕೊನೆಯ ದಾಳಿ ಜೂನ್ 26 ರಂದು ನಡೆಯಿತು. ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲಿನ ಸ್ಫೋಟಕ್ಕೆ ಉಕ್ರೇನ್‌ಗೆ ಮಾಸ್ಕೋ ದೂಷಿಸಿದ ಒಂದು ದಿನದ ನಂತರ ಸ್ಫೋಟಗಳು ಸಂಭವಿಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.
#WATCH | Aftermath of multiple strikes in Ukraine’s Kyiv today
President Volodymyr Zelenskyy says many people killed and injured in multiple strikes across the country today
(Video source: Reuters) pic.twitter.com/J1Bc1JEFRM
— ANI (@ANI) October 10, 2022
“ಲೇಖಕರು, ಅಪರಾಧಿಗಳು ಮತ್ತು ಪ್ರಾಯೋಜಕರು ಉಕ್ರೇನಿಯನ್ ರಹಸ್ಯ ಸೇವೆಗಳು” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರದ ಕ್ರೈಮಿಯಾ ಸೇತುವೆಯ ಬಾಂಬ್ ಸ್ಫೋಟದ ಬಗ್ಗೆ ಹೇಳಿದರು, ಇದನ್ನು ಅವರು “ಭಯೋತ್ಪಾದಕ ಕೃತ್ಯ” ಎಂದು ಬಣ್ಣಿಸಿದರು.
ವ್ಲಾಡಿಮಿರ್ ಪುಟಿನ್ ಅವರು ಬಾಂಬ್ ಸ್ಫೋಟದ ಬಗ್ಗೆ ಪರಿಶೀಲಿಸಲು ಸ್ಥಾಪಿಸಿದ ತನಿಖಾ ಸಮಿತಿಯ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಮಾತನಾಡುತ್ತಿದ್ದರು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ರಷ್ಯಾದ ನಾಯಕ ಸೋಮವಾರದ ನಂತರ ತನ್ನ ಭದ್ರತಾ ಮಂಡಳಿಯೊಂದಿಗೆ ಸಭೆಗೆ ಸಜ್ಜಾಗುತ್ತಿದ್ದಾರೆ ಎಂದು ಕ್ರೆಮ್ಲಿನ್ ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದೆ. “ನಾಳೆ ಅಧ್ಯಕ್ಷರು ಭದ್ರತಾ ಮಂಡಳಿಯ ಖಾಯಂ ಸದಸ್ಯರೊಂದಿಗೆ ಯೋಜಿತ ಸಭೆಯನ್ನು ಹೊಂದಿದ್ದಾರೆ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದರು. ಸೇತುವೆ ಮೇಲೆ ಸ್ಫೋಟ ಸಂಭವಿಸಿದಾಗ ಉಕ್ರೇನಿಯನ್ನರು ಮತ್ತು ಇತರರಿಂದ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
ಆದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಶನಿವಾರದಂದು ತಮ್ಮ ರಾತ್ರಿಯ ಭಾಷಣದಲ್ಲಿ ನೇರವಾಗಿ ಘಟನೆಯನ್ನು ಉಲ್ಲೇಖಿಸಲಿಲ್ಲ. ಕೈವ್‌ನಲ್ಲಿರುವ ಅಧಿಕಾರಿಗಳು ಕೂಡಾ ಯಾವುದೇ ನೇರ ಹೊಣೆಗಾರಿಕೆಯನ್ನು ಹೊರಲಿಲ್ಲ.
ಕ್ರೆಮ್ಲಿನ್ 2014 ರಲ್ಲಿ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ಸಂಕೇತವಾದ ಆಯಕಟ್ಟಿನ ಸಂಪರ್ಕದ ಮೂಲಕ ಕೆಲವು ರಸ್ತೆ ಮತ್ತು ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಶನಿವಾರ ರಷ್ಯಾ ಹೇಳಿದೆ. 19-ಕಿಲೋಮೀಟರ್ (12-ಮೈಲಿ) ಸೇತುವೆಯು ರಷ್ಯಾ ಮತ್ತು ಸ್ವಾಧೀನಪಡಿಸಿಕೊಂಡ ಕ್ರಿಮಿಯನ್ ಪರ್ಯಾಯ ದ್ವೀಪದ ನಡುವಿನ ಪ್ರಮುಖ ಪೂರೈಕೆ ಕೊಂಡಿಯಾಗಿದೆ.
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೋಮವಾರ ಉಕ್ರೇನ್‌ನಾದ್ಯಂತ ನಗರಗಳ ಮೇಲೆ ಅನೇಕ ದಾಳಿಗಳ ನಡೆದಿದ್ದು ಇದರಲ್ಲಿ ಹಲವರು ಸಾವಿಗೀಡಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಹೇಳಿದರು, “ಉಕ್ರೇನ್ ಸುತ್ತಲೂ ವಾಯುದಾಳಿ ಸೈರನ್‌ಗಳು ಕಡಿಮೆಯಾಗುತ್ತಿಲ್ಲ. ದುರದೃಷ್ಟವಶಾತ್ ಕೆಲವರು ಸಾವಿಗೀಡಾಗಿದ್ದಾರೆ,ಇನ್ನೂ ಕೆಲವರು ಗಾಯಗೊಂಡಿದ್ದಾರೆ. ದಯವಿಟ್ಟು ಆಶ್ರಯವನ್ನು ಬಿಡಬೇಡಿ” ಎಂದು ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು, ರಷ್ಯಾವು ಭೂಮಿಯಿಂದಲೇ ನಮ್ಮನ್ನು ಅಳಿಸಿಹಾಕಲು” ಬಯಸುತ್ತಿದೆ ಎಂದು ಅವರು ಆರೋಪಿಸಿದರು.
Published On - 1:55 pm, Mon, 10 October 22