Nobel Prize in Economics 2022: ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ಬೆನ್ ಬರ್ನಾಂಕೆ (Ben Bernanke) , ಡೌಗ್ಲಾಸ್ ಡೈಮಂಡ್ (Douglas Diamond)ಮತ್ತು ಫಿಲಿಪ್ ಡೈಬ್ವಿಗ್ (Philip Dybvig) ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (Nobel Prize in Economics) ಘೋಷಿಸಲಾಗಿದೆ. ಹಣಕಾಸಿನ ಬಿಕ್ಕಟ್ಟುಗಳ ಸಮಯದಲ್ಲಿ, ಹಣಕಾಸು ಮಾರುಕಟ್ಟೆಗಳನ್ನು ಹೇಗೆ ನಿಯಂತ್ರಿಸುವುದು ಸೇರಿದಂತೆ ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರದ ಬಗ್ಗೆ ನಮ್ಮ ಜ್ಞಾನವನ್ನು ಅವರು ಹೆಚ್ಚಿಸಿದ್ದಾರೆ. ಯುಎಸ್ ಮೂಲದ ವಿಜ್ಞಾನಿಗಳಿಗೆ “ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ” ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿ ಹೇಳಿದೆ. ಕಳೆದ ವರ್ಷ, ಡೇವಿಡ್ ಕಾರ್ಡ್ ಅವರು ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣವು ಕಾರ್ಮಿಕ ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಶೋಧನೆಗಾಗಿ ಮತ್ತು ಜೋಶುವಾ ಆಂಗ್ರಿಸ್ಟ್ ಮತ್ತು ಗೈಡೋ ಇಂಬೆನ್ಸ್- ಸಾಂಪ್ರದಾಯಿಕ ವೈಜ್ಞಾನಿಕ ವಿಧಾನಗಳಿಗೆ ಸುಲಭವಾಗಿ ಹೊಂದಿಕೊಳ್ಳದ ಸಮಸ್ಯೆಗಳನ್ನು ಹೇಗೆ ಅಧ್ಯಯನ ಮಾಡಬೇಕೆಂದು ಪ್ರಸ್ತಾಪಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. .
BREAKING NEWS: The Royal Swedish Academy of Sciences has decided to award the 2022 Sveriges Riksbank Prize in Economic Sciences in Memory of Alfred Nobel to Ben S. Bernanke, Douglas W. Diamond and Philip H. Dybvig “for research on banks and financial crises.”#NobelPrize pic.twitter.com/cW0sLFh2sj
— The Nobel Prize (@NobelPrize) October 10, 2022
ಇತರ ಬಹುಮಾನಗಳಿಗಿಂತ ಭಿನ್ನವಾಗಿ, ಅರ್ಥಶಾಸ್ತ್ರ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ 1895 ರ ಉಯಿಲಿನಲ್ಲಿ ಸ್ಥಾಪಿಸಲಾಗಿಲ್ಲ ಆದರೆ ಅವರ ನೆನಪಿಗಾಗಿ ಸ್ವೀಡಿಷ್ ಕೇಂದ್ರ ಬ್ಯಾಂಕ್ ಸ್ಥಾಪಿಸಿತು. ಮೊದಲ ವಿಜೇತರನ್ನು 1969 ರಲ್ಲಿ ಆಯ್ಕೆ ಮಾಡಲಾಯಿತು.
ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಮುಖ ಒಳನೋಟಗಳನ್ನು ಒದಗಿಸಿದ ನಿಯಾಂಡರ್ತಲ್ ಡಿಎನ್ಎ ರಹಸ್ಯಗಳನ್ನು ಅನ್ಲಾಕ್ ಮಾಡಿದ್ದಕ್ಕಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ವೈದ್ಯಕೀಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವುದರೊಂದಿಗೆ ಒಂದು ವಾರದ ನೊಬೆಲ್ ಪ್ರಶಸ್ತಿ ಘೋಷಣೆಗಳು ಅಕ್ಟೋಬರ್ 3 ರಂದು ಪ್ರಾರಂಭವಾದವು.
ಮಂಗಳವಾರ ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳು ಜಂಟಿಯಾಗಿ ಪ್ರಶಸ್ತಿ ಗೆದ್ದಿದ್ದಾರೆ. ಫ್ರೆಂಚ್‌ನ ಅಲೈನ್ ಆಸ್ಪೆಕ್ಟ್, ಅಮೇರಿಕನ್ ಜಾನ್ ಎಫ್ ಕ್ಲೌಸರ್ ಮತ್ತು ಆಸ್ಟ್ರಿಯನ್ ಆಂಟನ್ ಝೈಲಿಂಗರ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಅಮೆರಿಕನ್ನರಾದ ಕ್ಯಾರೊಲಿನ್ ಆರ್ ಬರ್ಟೊಝಿ ಮತ್ತು ಕೆ ಬ್ಯಾರಿ ಶಾರ್ಪ್‌ಲೆಸ್ ಮತ್ತು ಡ್ಯಾನಿಶ್ ವಿಜ್ಞಾನಿ ಮಾರ್ಟೆನ್ ಮೆಲ್ಡಾಲ್ ಅವರಿಗೆ ನೀಡಲಾಯಿತು.
ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಗುರುವಾರ ಸಾಹಿತ್ಯದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿ ಪಡೆದರು. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗಿದ್ದು ಜೈಲಿನಲ್ಲಿರುವ ಬೆಲಾರಸ್ ಮಾನವ ಹಕ್ಕುಗಳ ಕಾರ್ಯಕರ್ತ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಮೆಮೋರಿಯಲ್ ಮತ್ತು ಉಕ್ರೇನಿಯನ್ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಗೆ ನೀಡಲಾಗಿದೆ.
Published On - 3:31 pm, Mon, 10 October 22