ಜೊಹಾನ್ನೆಸ್​ಬರ್ಗ್ ನಗರದ ಒಂದೇ ಮನೆಯಲ್ಲಿ ಕೊಳೆತು ನಾರುತ್ತಿದ್ದ 6 ಮಹಿಳೆಯರ ಶವಗಳು ಪತ್ತೆ, 21ರ ಪ್ರಾಯದ ಶಂಕಿತನ ಬಂಧನ!

ಸತ್ತ ಮಹಿಳೆಯೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬ್ರೆಂಡಾ ಮುರಿಡಿಲಿ ಹೇಳಿದ್ದಾರೆ.

ಜೊಹಾನ್ನೆಸ್​ಬರ್ಗ್ ನಗರದ ಒಂದೇ ಮನೆಯಲ್ಲಿ ಕೊಳೆತು ನಾರುತ್ತಿದ್ದ 6 ಮಹಿಳೆಯರ ಶವಗಳು ಪತ್ತೆ, 21ರ ಪ್ರಾಯದ ಶಂಕಿತನ ಬಂಧನ!
ಒಂದೇ ಮನೆಯಲ್ಲಿ 6 ಶವಗಳು ಪತ್ತೆ!
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 10, 2022 | 5:18 PM

ಜೊಹಾನ್ನೆಸ್​ಬರ್ಗ್: ನಗರದ ಮಧ್ಯಭಾಗದಲ್ಲಿರುವ ಮನೆಗಳ ಬ್ಲಾಕೊಂದರಲ್ಲಿ ಹೆಚ್ಚು ಕಡಿಮೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯರ ಆರು ಶವಗಳು ಪತ್ತೆಯಾದ ಬಳಿಕ 21-ವರ್ಷದ ವ್ಯಕ್ತಿಯೊಬ್ಬನ ವಿರುದ್ಧ 6 ಹತ್ಯೆಗಳನ್ನು ಮಾಡಿರುವ ಆರೋಪದಲ್ಲಿ ಬಂಧಿಸಲಾಗುವುದು ಎಂದ ದಕ್ಷಿಣ ಆಫ್ರಿಕ ಪೊಲೀಸ್ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅದರ ಅಕ್ಕಪಕ್ಕದ ಜನ ಪೊಲೀಸರಿಗೆ ಫೋನ್ ಮಾಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಆರಕ್ಷಕರಿಗೆ ಸದರಿ ಮನೆಯಿಂದ ಕೊಳೆತು ನಾರುತ್ತಿದ್ದ ಮಹಿಳೆಯ ದೇಹವೊಂದು ಕಂಡಿದೆ ಎಂದು ಪೊಲೀಸ್ ವಕ್ತಾರೆ ಬ್ರೆಂಡಾ ಮುರಿಡಿಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕಾಣೆಯಾದ ಮಹಿಳೆಯೊಬ್ಬಳ ಬಗ್ಗೆ ದೂರು ಸಲ್ಲಿಸಲಾಗಿತ್ತು ಮತ್ತು ಆಕೆ ಧರಿಸಿದ್ದ ಉಡುಪಿನ ಬಗ್ಗೆ ನೀಡಿರುವ ವಿವರಣೆ ಮತ್ತು ಶವದ ಮೇಲಿರುವ ಬಟ್ಟೆಗಳ ನಡುವೆ ಸಾಮ್ಯತೆ ಇದೆ ಎಂದು ಆಕೆ ಹೇಳಿದ್ದಾರೆ.

ಸತ್ತ ಮಹಿಳೆಯೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬ್ರೆಂಡಾ ಮುರಿಡಿಲಿ ಹೇಳಿದ್ದಾರೆ.

‘ಮಹಿಳೆಯ ಶವ ದೊರೆತ ಬಳಿಕ ಪೊಲೀಸರು ಆ ಕಟ್ಟಡಕ್ಕೆ ವಾಪಸ್ಸು ಹೋಗಿ ಅದರ ಹೊರಭಾಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ವರ್ಕ್ ಶಾಪ್ ಮತ್ತು ಕಸವನ್ನು ಕುಪ್ಪೆ ಹಾಕಿದ್ದ ಸ್ಥಳದಲ್ಲಿ ಇನ್ನೂ 5 ಶವಗಳನ್ನು ಪತ್ತೆ ಮಾಡಿದ್ದಾರೆ,’ ಎಂದು ಬ್ರೆಂಡಾ ಮುರಿಡಿಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎ ಎಫ್ ಪಿ ಸುದ್ದಿ ಸಂಸ್ಥೆಯೊಂದಿಗೂ ಮಾತಾಡಿರುವ ಮುರಿಡಿಲಿ, ಫೊರೆನ್ಸಿಕ್ ತಜ್ಞರು ದೇಹಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ, ಪೊಲೀಸರಿಗೆ ಹಲವು ಸುಳಿವುಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

ಆ ಪ್ರದೇಶದಲ್ಲಿರುವ ಕೆಲ ವೇಶ್ಯೆಯರು ಕೆಲದಿನಗಳಿಂದ ನಾಪತ್ತೆಯಾಗಿರುವರೆಂದು ಸ್ಥಳೀಯರು ಪೊಲೀಸರಿಗೆ ನೀಡಿರುವ ಸಾಕ್ಷ್ಯದಲ್ಲಿ ತಿಳಿಸಿದ್ದಾರೆ.

ಶಂಕಿತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Published On - 5:17 pm, Mon, 10 October 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು