ಉಕ್ರೇನ್ನ ಕಾರ್ಖೀವ್ನಲ್ಲಿ (Kharkiv) ಇಂದು ಬೆಳಗ್ಗೆಯಿಂದ ರಷ್ಯಾ ದಾಳಿ ತೀವ್ರಗೊಂಡಿದೆ. ಇದೇ ಕಾರ್ಖೀವ್ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದು, ಇಲ್ಲಿ ಅವರ ಕುಟುಂಬದ ಗೋಳಾಟ ಮುಗಿಲುಮುಟ್ಟಿದೆ. ಹಾಗೇ ಕಾರ್ಖೀವ್ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ, ಶೆಲ್ ದಾಳಿಯ ವಿಡಿಯೋಗಳೂ ಕೂಡ ವೈರಲ್ ಆಗಿದೆ. ಅದರಲ್ಲೂ ಕಾರ್ಖೀವ್ನ ಪ್ರಾದೇಶಿಕ ಆಡಳಿತದ ಕಚೇರಿ ಕಟ್ಟಡದ ಮೇಲೆ ನಡೆದ ಕ್ಷಿಪಣಿ ದಾಳಿ ಮೈನಡುಗಿಸುವಂತಿದೆ.
Missile attack on the Kharkiv regional administration, Sumska 64. Grad shelling at residential areas. Putin now in total war with Ukraine. pic.twitter.com/eXyfA4E4YI
— Maria Avdeeva (@maria_avdv) March 1, 2022
ಅದಕ್ಕೂ ಮೊದಲು ಸೋಮವಾರ ಕಾರ್ಖೀವ್ನ ವಸತಿ ಪ್ರದೇಶದ ಮೇಲೆಯೂ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 17 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆಡಳಿತ ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿ ಆಗಲೇ ಆರು ದಿನ ಕಳೆದಿದ್ದು, ಎಲ್ಲಿ ನೋಡಿದರೂ ಗುಂಡು, ಬಾಂಬ್, ಕ್ಷಿಪಣಿ, ಸ್ಫೋಟದ ಸದ್ದು ಕೇಳುತ್ತಿದೆ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಫೋಟೋಗಳೂ ವೈರಲ್ ಆಗುತ್ತಿವೆ.
The center of #Kharkiv after the air strike. The occupants hit civilian infrastructure and passing cars. pic.twitter.com/rPaCiZr5Du
— NEXTA (@nexta_tv) March 1, 2022
ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೇ ಏಕೆ ಹೋಗುತ್ತಾರೆ?
Published On - 4:33 pm, Tue, 1 March 22