ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ ಅಮೆರಿಕದಲ್ಲಿ ನೆರವೇರಿತು
ಮೈಸೂರು: ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಮೈಸೂರು ಯುವಕ ಅಭಿಷೇಕ್ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅಮೆರಿಕದ ಬಾಬಿಟ್ ಮೆಮೋರಿಯಲ್ ಚಾಪೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಜರುಗಿದೆ. ಅಸ್ತಿ ಸಂಚಯ ಹಾಗೂ ಧಾರ್ಮಿಕ ಕ್ರಿಯೆಗಳು ಅಮೆರಿಕದ ಫೀನಿಕ್ಸ್ನಲ್ಲಿರುವ ಪುತ್ತಿಗೆ ಮಠದಲ್ಲಿ ನಡೆಯಲಿದೆ. ನ. 28 ರಂದು ಅಮೆರಿಕದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಅಭಿಷೇಕ್(25) ಬಲಿಯಾಗಿದ್ದ. ಮೈಸೂರಿನ ಕುವೆಂಪು ನಗರದ ಯೋಗ ಶಿಕ್ಷಕ ಸುದೇಶ್ ಎಂಬುವವರ ಪುತ್ರ ಅಭಿಷೇಕ್. ಒಂದೂವರೆ ವರ್ಷದ ಹಿಂದೆ ಓದಲು ವಿದೇಶಕ್ಕೆ ತೆರಳಿದ್ದ. ಕ್ಯಾಲಿಫೋರ್ನಿಯಾ […]
ಮೈಸೂರು: ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಮೈಸೂರು ಯುವಕ ಅಭಿಷೇಕ್ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅಮೆರಿಕದ ಬಾಬಿಟ್ ಮೆಮೋರಿಯಲ್ ಚಾಪೆಲ್ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಜರುಗಿದೆ. ಅಸ್ತಿ ಸಂಚಯ ಹಾಗೂ ಧಾರ್ಮಿಕ ಕ್ರಿಯೆಗಳು ಅಮೆರಿಕದ ಫೀನಿಕ್ಸ್ನಲ್ಲಿರುವ ಪುತ್ತಿಗೆ ಮಠದಲ್ಲಿ ನಡೆಯಲಿದೆ.
ನ. 28 ರಂದು ಅಮೆರಿಕದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಅಭಿಷೇಕ್(25) ಬಲಿಯಾಗಿದ್ದ. ಮೈಸೂರಿನ ಕುವೆಂಪು ನಗರದ ಯೋಗ ಶಿಕ್ಷಕ ಸುದೇಶ್ ಎಂಬುವವರ ಪುತ್ರ ಅಭಿಷೇಕ್. ಒಂದೂವರೆ ವರ್ಷದ ಹಿಂದೆ ಓದಲು ವಿದೇಶಕ್ಕೆ ತೆರಳಿದ್ದ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ ಬಿಡುವಿನ ವೇಳೆ ಕ್ಯಾಲಿಫೋರ್ನಿಯಾ ಬಳಿಯ ಸನ್ ಬೆರ್ನಾರ್ಡಿನೋ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ.