AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಹ್ಯಾಕಾಶದಲ್ಲಿ ನಡೆದಿತ್ತು ಬೃಹತ್ ಸ್ಫೋಟ; ಭೂಮಿಯಲ್ಲೂ ಅನುಭವಕ್ಕೆ ಬಂದ ಆಘಾತ ತರಂಗ: ನಾಸಾ

ಯುರೇನಿಯಂ ಅಥವಾ ರೇಡಿಯಂನಂತಹ ವಿಕಿರಣಶೀಲ ಅಂಶಗಳಿಂದ ಹೊರಸೂಸಲ್ಪಟ್ಟ ಹೆಚ್ಚಿನ ಶಕ್ತಿಯ ವಿದ್ಯುತ್ಕಾಂತೀಯ ವಿಕಿರಣಗಳೇ ಗಾಮಾ ಕಿರಣಗಳು. ಸೌರ ಜ್ವಾಲೆಗಳ ಸಮಯದಲ್ಲಿ...

ಬಾಹ್ಯಾಕಾಶದಲ್ಲಿ ನಡೆದಿತ್ತು ಬೃಹತ್ ಸ್ಫೋಟ; ಭೂಮಿಯಲ್ಲೂ ಅನುಭವಕ್ಕೆ ಬಂದ ಆಘಾತ ತರಂಗ: ನಾಸಾ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Oct 18, 2022 | 7:56 PM

Share

ನಾಸಾದ ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶದಿಂದ ಬೃಹತ್ ಸ್ಫೋಟವನ್ನು ಪತ್ತೆ ಮಾಡಿದ್ದು ಇದು ಭೂಮಿಯಲ್ಲೂ ಅನುಭವಕ್ಕೆ ಬಂದಿದೆ ಎಂದು ನಾಸಾ (NASA) ಹೇಳಿದೆ. ಅಕ್ಟೋಬರ್ 9 ರಂದು, ಖಗೋಳಶಾಸ್ತ್ರಜ್ಞರು ಹೆಚ್ಚಿನ ಶಕ್ತಿಯ ವಿಕಿರಣದ ಅತ್ಯಂತ ತೀವ್ರವಾದ ಮತ್ತು ನಿರಂತರವಾದ ಸ್ಫೋಟ ಪತ್ತೆ ಮಾಡಿದ್ದು, ಅದು ಭೂಮಿಗೆ ಆಘಾತ ತರಂಗಗಳನ್ನು ಕಳುಹಿಸಿತು ಎಂದಿದ್ದಾರೆ.ನಾಸಾದ ಫೆರ್ಮಿ ಗಾಮಾ-ರೇ ಬಾಹ್ಯಾಕಾಶ ಟೆಲಿಸ್ಕೋಪ್, ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಮತ್ತು ವಿಂಡ್ ಬಾಹ್ಯಾಕಾಶ ನೌಕೆಗಳು ಡಿಟೆಕ್ಟರ್‌ಗಳನ್ನು ಇವು ಹಾದು ಹೋಗಿವೆ.ಆರ್ಬಿಟಿಂಗ್ ಹೈ-ಎನರ್ಜಿ ಮಾನಿಟರ್ ಅಲರ್ಟ್ ನೆಟ್‌ವರ್ಕ್ (OHMAN) ಮೂಲಕ ಸ್ಫೋಟವನ್ನು ಪತ್ತೆಹಚ್ಚಲಾಗಿದೆ. OHMAN ಎಂಬುದು ನಾಸಾದ NICER, ಎಕ್ಸ್-ರೇ ದೂರದರ್ಶಕ ಮತ್ತು ಜಪಾನ್ ಮೂಲದ MAXI (ಆಲ್-ಸ್ಕೈ ಎಕ್ಸ್-ರೇ ಇಮೇಜ್ ಮಾನಿಟರ್) ನಡುವಿನ ಜಂಟಿ ಸಂಘವಾಗಿದೆ.

ಸ್ಫೋಟಕ್ಕೆ ಕಾರಣವೇನು?

ಇದುವರೆಗೆ ಪತ್ತೆಯಾದ ಅತ್ಯಂತ ಶಕ್ತಿಶಾಲಿ ಸ್ಫೋಟ ಇದಾಗಿದೆ. ಸ್ಫೋಟವನ್ನು ಈಗ GRB 221009A ಎಂದು ಕರೆಯಲಾಗುತ್ತಿದೆ. GRB ಅಂದರೆ ಗಾಮಾ-ರೇ ಬರ್ಸ್ಟ್‌ನ ಸಂಕ್ಷಿಪ್ತ ರೂಪ. GRB 221009A ವಿಶ್ವದಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಶಕ್ತಿಶಾಲಿ ಗಾಮಾ-ಕಿರಣ ಸ್ಫೋಟವಾಗಿದೆ. ನಾಸಾ ಪ್ರಕಾರ ಗಾಮಾ-ರೇ ಬರ್ಸ್ಟ್ (GRB) ವಿಶ್ವದಲ್ಲಿ ಸ್ಫೋಟಗಳ ಅತ್ಯಂತ ಶಕ್ತಿಶಾಲಿ ವರ್ಗವಾಗಿದೆ ಮತ್ತು ಈವರೆಗಿನ ಅತ್ಯಂತ ಪ್ರಕಾಶಮಾನವಾದ ಘಟನೆಗಳಲ್ಲಿ ಒಂದಾಗಿದೆ.

ಸ್ಫೋಟವು ಉತ್ತರಭಾಗದ ಆಕಾಶದಲ್ಲಿ ನಕ್ಷತ್ರಪುಂಜವಾದ ಸಗಿತ್ತಾ ದಿಕ್ಕಿನಿಂದ ಬಂದಿದೆ (ಧನು ರಾಶಿ ಅಲ್ಲ ). ಇದು ಸುಮಾರು 1.9 ಶತಕೋಟಿ ವರ್ಷಗಳ ಅವಧಿಯಲ್ಲಿ ಭೂಮಿಗೆ ಪ್ರಯಾಣಿಸಿತು. ಖಗೋಳಶಾಸ್ತ್ರಜ್ಞರು ಸೂಪರ್ನೋವಾದಿಂದ ಕಪ್ಪು ಕುಳಿ ಉಂಟಾದಾಗ ಸ್ಫೋಟ ಸಂಭವಿಸಿದೆ ಎಂದು ನಂಬುತ್ತಾರೆ.

ಬೆಳೆಯುತ್ತಿರುವ ಕಪ್ಪು ಕುಳಿಯು ಬೆಳಕಿನಷ್ಟು ವೇಗವಾಗಿ ಕಣಗಳ ಪ್ರಬಲ ಜೆಟ್‌ಗಳನ್ನು ಉತ್ಪಾದಿಸುತ್ತದೆ. ಆ ಜೆಟ್‌ಗಳು ಬಾಹ್ಯಾಕಾಶಕ್ಕೆ ಹಾರಿ ನಕ್ಷತ್ರದ ಮೂಲಕ ಚುಚ್ಚಿದಾಗ , ಅವು ಕ್ಷ-ಕಿರಣಗಳು ಮತ್ತು ಗಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತವೆ.

ಗಾಮಾ ಕಿರಣಗಳು ಅಂದರೆ?

ಯುರೇನಿಯಂ ಅಥವಾ ರೇಡಿಯಂನಂತಹ ವಿಕಿರಣಶೀಲ ಅಂಶಗಳಿಂದ ಹೊರಸೂಸಲ್ಪಟ್ಟ ಹೆಚ್ಚಿನ ಶಕ್ತಿಯ ವಿದ್ಯುತ್ಕಾಂತೀಯ ವಿಕಿರಣಗಳೇ ಗಾಮಾ ಕಿರಣಗಳು. ಸೌರ ಜ್ವಾಲೆಗಳ ಸಮಯದಲ್ಲಿ ಸೂರ್ಯನಂತಹ ಅತ್ಯಂತ ಬಿಸಿಯಾದ ಮತ್ತು ಶಕ್ತಿಯುತವಾದ ಕಾಸ್ಮಿಕ್ ಘಟಕಗಳಿಂದ ಅವು ನೈಸರ್ಗಿಕವಾಗಿ ಹೊರಸೂಸಲ್ಪಡುತ್ತವೆ. ಅವು ವಿದ್ಯುತ್ಕಾಂತೀಯ ವರ್ಣಪಟಲದ ಭಾಗವಾಗಿದೆ ಮತ್ತು ಎಕ್ಸ್ ರೇಯನ್ನು ಹೋಲುತ್ತವೆ. ಆದಾಗ್ಯೂ, ಅವುಗಳ ನಡುವಿನ ವ್ಯತ್ಯಾಸವೆಂದರೆ ಅವು ಹೆಚ್ಚಿನ ಫ್ರೀಕ್ವೆನ್ಸಿ ಹೊಂದಿದ್ದು ಕಡಿಮೆ ತರಂಗಾಂತರ ಹೊಂದಿದೆ. ಗಾಮಾ ಕಿರಣಗಳನ್ನು ವೈದ್ಯಕೀಯ ಚಿತ್ರಣ, ಪರಮಾಣು ಭೌತಶಾಸ್ತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಸಿಂಟಿಲೇಟರ್ ಎಂಬ ವಿಶೇಷ ಕ್ಯಾಮೆರಾ ಬಳಸಿ ಅವುಗಳನ್ನು ಪತ್ತೆ ಮಾಡಬಹುದು.

GRB ಭೂಮಿಗೆ ತುಂಬಾನೇ ಹತ್ತಿರ ಆಗಿದ್ದು ಅದರ ಸಾಮೀಪ್ಯದಿಂದಾಗಿ, ಇದು 10 ಗಂಟೆಗಳ ಕಾಲ ನಡೆಯಿತು ಮತ್ತು ಗ್ರಹಕ್ಕೆ  ಆಘಾತ ತರಂಗ ಕಳುಹಿಸಿತು. ಅದೃಷ್ಟವಶಾತ್, ಅತ್ಯಂತ ಶಕ್ತಿಯುತವಾದ ಗಾಮಾ-ಕಿರಣ ಸ್ಫೋಟವು ಸಾಕಷ್ಟು ದೂರದಲ್ಲಿದೆ ಆದ್ದರಿಂದ ಅದು ಗ್ರಹಕ್ಕೆ ಹಾನಿಯಾಗಲಿಲ್ಲ. ಸ್ಫೋಟವು ಗ್ರಹಕ್ಕೆ ಹತ್ತಿರದಲ್ಲಿ ಸಂಭವಿಸಿದ್ದರೆ, ಅದು ಭೂಮಿಯ ಮೇಲಿನ ಜೀವಕ್ಕೆ ಅಪಾಯಕಾರಿ ಎಂದು ಸಾಬೀತಾಗಿದೆ. ವಿಜ್ಞಾನಿಗಳ ಪ್ರಕಾರ, ಈ ರೀತಿಯ ಸ್ಫೋಟವು ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಅಲ್ಟ್ರಾ ವೈಲೆಟ್ (UV) ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರಕ್ಕೆ ಹಾನಿಯುಂಟು ಮಾಡುತ್ತದೆ.

Published On - 7:54 pm, Tue, 18 October 22

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್