ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ
ವಾಷಿಂಗ್ಟನ್: ಇಸ್ರೋದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ, ಅವಶೇಷಗಳನ್ನು ನಾಸಾ ಪತ್ತೆ ಹಚ್ಚಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಲ್ಯಾಂಡರ್ ಪತನವಾಗಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಲೂನಾರ್ ಆರ್ಬಿಟರ್ ಪತ್ತೆಹಚ್ಚಿದೆ. ಅಲ್ಲದೆ ವಿಕ್ರಮ್ ಲ್ಯಾಂಡಿಂಗ್ಗೂ ಮೊದಲು ಚಂದ್ರನ ಮೇಲ್ಮೈ ಹೇಗಿತ್ತು, ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸೆರೆ ಹಿಡಿದು ಬಿಡುಗಡೆ ಮಾಡಿದೆ. ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 […]
ವಾಷಿಂಗ್ಟನ್: ಇಸ್ರೋದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ, ಅವಶೇಷಗಳನ್ನು ನಾಸಾ ಪತ್ತೆ ಹಚ್ಚಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಲ್ಯಾಂಡರ್ ಪತನವಾಗಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಲೂನಾರ್ ಆರ್ಬಿಟರ್ ಪತ್ತೆಹಚ್ಚಿದೆ. ಅಲ್ಲದೆ ವಿಕ್ರಮ್ ಲ್ಯಾಂಡಿಂಗ್ಗೂ ಮೊದಲು ಚಂದ್ರನ ಮೇಲ್ಮೈ ಹೇಗಿತ್ತು, ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರ ಸೆರೆ ಹಿಡಿದು ಬಿಡುಗಡೆ ಮಾಡಿದೆ.
ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 ನಭಕ್ಕೆ ಜಿಗಿದಿತ್ತು. ಸುಮಾರು 47 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಚಂದ್ರನ ಕಡೆ ಹೊರಟಿದ್ದ ವಿಕ್ರಮ್, ಸೆಪ್ಟಂಬರ್ 7ರಂದು ಚಂದ್ರನ ಮೇಲೆ ಇಳಿಯಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ.
The #Chandrayaan2 Vikram lander has been found by our @NASAMoon mission, the Lunar Reconnaissance Orbiter. See the first mosaic of the impact site https://t.co/GA3JspCNuh pic.twitter.com/jaW5a63sAf
— NASA (@NASA) December 2, 2019
Published On - 7:14 am, Tue, 3 December 19