Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷರು ದೋಚಿಕೊಂಡು ಹೋದ ವಜ್ರ, ಮುತ್ತು-ರತ್ನಗಳನ್ನು ಆಯಾ ದೇಶಗಳಿಗೆ ಹಿಂತಿರುಗಿಸಬೇಕೆಂದು ಅಭಿಯಾನಗಳು ಶುರುವಾಗಿವೆ!

ಸಿಎನ್ ಎನ್ ಮಾಧ್ಯಮ ವರದಿ ಮಾಡಿರುವ ಹಾಗೆ, ‘ಕಲ್ಲಿನನ್ ವಜ್ರವನ್ನು ಈ ಕೂಡಲೇ ದಕ್ಷಿಣ ಆಫ್ರಿಕಾಗೆ ಹಿಂತಿರುಗಿಸಬೇಕೆಂದು,’ ಸಾಮಾಜಿಕ ಹೋರಾಟಗಾರ ಥಂಡುಕ್ಸೋಲೊ ಸ್ಯಾಬೆಲೊ ಆಗ್ರಹಿಸಿದ್ದಾರೆ.

ಬ್ರಿಟಿಷರು ದೋಚಿಕೊಂಡು ಹೋದ ವಜ್ರ, ಮುತ್ತು-ರತ್ನಗಳನ್ನು ಆಯಾ ದೇಶಗಳಿಗೆ ಹಿಂತಿರುಗಿಸಬೇಕೆಂದು ಅಭಿಯಾನಗಳು ಶುರುವಾಗಿವೆ!
ವಜ್ರಖಚಿತ ಕಿರೀಟ ಮತ್ತು ರಾಜದಂಡ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 20, 2022 | 8:08 AM

ಬ್ರಿಟಿಷ್ ರಾಣಿ (Britain Queen) ತೊಡುತ್ತಿದ್ದ ಮತ್ತು ಇನ್ನು ಮೇಲೆ ಅಲ್ಲಿನ ದೊರೆ ಚಾರ್ಲ್ಸ್ ತೊಡುವ ಕಿರೀಟದಲ್ಲಿ ಅಲಂಕೃತಗೊಂಡು ಅದರ ಅಂದವನ್ನು ಇಮ್ಮಡಿಗೊಳಿಸಿರುವ ವಜ್ರಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ ಅಸಲು ಸಂಗತಿಯೇನು ಗೊತ್ತಾ? ಆ ಅಮೂಲ್ಯ ವಜ್ರಗಳನ್ನು ಬ್ರಿಟಿಷರು ತಾವಾಳಿದ ದೇಶಗಳಿಂದ ದೋಚಿಕೊಂಡು ಹೋಗಿರುವಂಥವು. ಭಾರತದಿಂದ ಕೊಹೀನೂರ್ (Kohinoor) ಸೇರಿದಂತೆ ದಕ್ಷಿಣ ಆಫ್ರಿಕದಿಂದಲೂ ಆಂಗ್ಲರು ಮುತ್ತು, ರತ್ನ ಮತ್ತು ವಜ್ರಗಳನ್ನು ಎತ್ತಿಕೊಂಡು ಹೋಗಿದ್ದಾರೆ. ರಾಣಿ ಎಲಿಜಬೆತ್ ಮರಣದ ನಂತರ, ವಜ್ರಗಳನ್ನು ಕಳೆದುಕೊಂಡಿರುವ ದೇಶಗಳು ಅವುಗಳನ್ನು ಹಿಂತಿರುಗಿಸಬೇಕೆಂದು ಆಗ್ರಹಿಸುತ್ತಿವೆ. ಈ ದೇಶಗಳ ಪಟ್ಟಿಗೆ ದಕ್ಷಿಣ ಆಫ್ರಿಕಾ ಕೂಡ ಸೇರಿದ್ದು ತನ್ನ ಭಾರಿ ಗಾತ್ರದ ಫಳಫಳ ಮಿನುಗುವ ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ (The Great Star of Africa) ಹೆಸರಿನ ವಜ್ರವನ್ನು ವಾಪಸ್ಸು ನೀಡುವಂತೆ ಬ್ರಿಟನ್ ಅರಸೊತ್ತಿಗೆಗೆ ಮನವಿ ಮಾಡಿದೆ.

ಸಿಎನ್ಎನ್ ವರದಿಯೊಂದರ ಪ್ರಕಾರ ಸದರಿ ವಜ್ರವನ್ನು 1905 ರಲ್ಲಿ ದಕ್ಷಿಣ ಆಫ್ರಿಕ ಗಣಿ ಪ್ರದೇಶದಲ್ಲಿ ದೊರೆತ ದೊಡ್ಡಗಾತ್ರದ ರತ್ನವೊಂದರಿಂದ ಕಟೆಯಲಾಗಿದೆ. ಕಲ್ಲಿನನ್ ಅಂತಲೂ ಕರೆಯಲ್ಪಡುವ ದಿ ಗ್ರೇಟ್ ಸ್ಟಾರ್ ವಜ್ರವನ್ನು ಬ್ರಿಟಿಷರ ಅಧೀನದಲ್ಲಿದ್ದ ಪ್ರಾಂತ್ಯಗಳ ದೇಖರೇಖಿ ನಡೆಸುತ್ತಿದ್ದ ಜನ ಕಲ್ಲಿನನ್ ವಜ್ರವನ್ನು ಬ್ರಿಟಿಷ್ ರಾಜ ಮನೆತನಕ್ಕೆ ಹಸ್ತಾಂತರಿಸಿದ್ದರು. ಆ ವಜ್ರವನ್ನು ಮೊನ್ನೆ ಗತಿಸಿದ ರಾಣಿ ಎಲಿಜಬೆತ್ ಬಸುತ್ತಿದ್ದ ರಾಜಂಡದಲ್ಲಿ ಅಳವಡಿಸಲಾಗಿದೆ.

ಸಿಎನ್ ಎನ್ ಮಾಧ್ಯಮ ವರದಿ ಮಾಡಿರುವ ಹಾಗೆ, ‘ಕಲ್ಲಿನನ್ ವಜ್ರವನ್ನು ಈ ಕೂಡಲೇ ದಕ್ಷಿಣ ಆಫ್ರಿಕಾಗೆ ಹಿಂತಿರುಗಿಸಬೇಕೆಂದು,’ ಸಾಮಾಜಿಕ ಹೋರಾಟಗಾರ ಥಂಡುಕ್ಸೋಲೊ ಸ್ಯಾಬೆಲೊ ಆಗ್ರಹಿಸಿದ್ದಾರೆ. ‘ನಮ್ಮ ದೇಶ ಮತ್ತು ಇತರ ದೇಶಗಳ ಖನಿಜಗಳು ಅಸಲಿಗೆ ಆಯಾ ದೇಶಗಳ ಜನರ ಸಂಪತ್ತಾಗಿದ್ದರೂ ಅದರ ಪ್ರಯೋಜನವನ್ನು ಬ್ರಿಟಿಷ್ ಅರಸೊತ್ತಿಗೆ ಪಡೆದುಕೊಳ್ಳುತ್ತಿದೆ,’ ಸ್ಯಾಬೆಲೋ ಹೇಳಿದ್ದಾರೆ.

ಕಲ್ಲಿನನ್ ವಜ್ರವನ್ನು ದಕ್ಷಿಣ ಆಫ್ರಿಕಾಗೆ ವಾಪಸ್ಸು ನೀಡುವಂತೆ ಸ್ಯಾಬಿಲೊ ಒಂದು ಅನ್ಲೈನ್ ಅಭಿಯಾನ ಆರಂಭಿಸಿದ್ದು ಅದಕ್ಕೆ ಈಗಾಗಲೇ 6,000 ಹೆಚ್ಚು ಜನ ಸಹಿ ಹಾಕಿದ್ದಾರೆ.

ದಕ್ಷಿಣ ಆಫ್ರಿಕ ಸಂಸತ್ ಸದಸ್ಯ ವ್ಯುಯೋಲಾವೆತ್ತು ಜುಂಗುಲಾ ಅವರು ತಮ್ಮ ಟ್ವೀಟೊಂದರಲ್ಲಿ , ‘ನಮಗೆ ಮಾಡಿದ ಹಾನಿ ಮತ್ತು ನಷ್ಟವನ್ನು ಬ್ರಿಟಿಷರು ಭರಿಸಿಕೊಡಬೇಕು, ನಮ್ಮ ದೇಶದಿಂದ ದೋಚಿಕೊಂಡು ಹೋದ ಚಿನ್ನ, ವಜ್ರ, ವೈಢೂರ್ಯಗಳನ್ನು ಹಿಂತಿರುಗಿಸಬೇಕು,’ ಅಂತ ಹೇಳಿದ್ದಾರೆ.

530.2-ಕ್ಯಾರೆಟ್ ಡ್ರಾಪ್-ಆಕಾರದ ವಜ್ರವನ್ನು ಶಿಲುಬೆಯೊಂದಿಗೆ ರಾಜದಂಡಕ್ಕೆ ಅಳವಡಸಲಾಗಿದೆ ಎಂದು ಎಬಿಸಿ ನ್ಯೂಸ್ ವರದಿಯಲ್ಲಿ ತಿಳಿಸಿದೆ. ರಾಜದಂಡವು 1600 ರ ದಶಕಗಳಲ್ಲಿ ಪಟ್ಟಾಭಿಷೇಕದಂಥ ಸಮಾರಂಭಗಳಲ್ಲಿ ಬಳಸಲ್ಪಡುವುದರ ಜೊತೆಗೆ ಪವಿತ್ರ ವಸ್ತುವೆಂದು ಪರಿಗಣಿಸಲಾಗುತಿತ್ತು.

ಲಂಡನ್ ಟವರ್‌ನಲ್ಲಿರುವ ಜ್ಯುವೆಲ್ ಹೌಸ್‌ನಲ್ಲಿ ಕಲ್ಲಿನನ್ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಎಬಿಸಿ ನ್ಯೂಸ್ ತಿಳಿಸಿದೆ.

ವಜ್ರದ ನಿಖರವಾದ ಬೆಲೆ ಎಷ್ಟಿರಬಹದೆಂದು ಇನ್ನೂ ಅಂದಾಜಿಸಲಾಗಿಲ್ಲ, ಆದರೂ ಅದು ವಿರಳಾತಿ ವಿರಳ ವಜ್ರವಾಗಿರುವುದರಿಂದ ಬಹಳ ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರಿಟಿಷ್ ಕುಟುಂಬದ ವಶದಲ್ಲಿರುವ ಹಲವಾರು ವಜ್ರಗಳನ್ನು ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿಸಬೇಕೆಂದು ಒತ್ತಾಯಿಸುವ ಅಭಿಯಾನಗಳನ್ನು ಪ್ರಾರಂಭಿಸಿದ್ದಾರೆ.

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ