AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗೆ ಹಣ ಟ್ರಾನ್​ಫರ್ ಮಾಡಿ ಅತಂಕ ಮೂಡಿಸುವ ಸಂದೇಶ ಕಳಿಸಿದ್ದ ಅಮೆರಿಕನ್ ಮಹಿಳೆ ಪ್ರಪಾತವೊಂದರಲ್ಲಿ ಶವವಾಗಿ ಪತ್ತೆಯಾದಳು!

ಸೆಪ್ಟೆಂಬರ್ 11 ರಂದು ಆಕೆ ಬಾಡಿಗೆಯ ಎಸ್ ಯು ವಿಯೊಂದರಲ್ಲಿ ಮನೆಯಿಂದ ಹೊರಟ ನಂತರ ದೇಹ ಪತ್ತೆಯಾಗಿದೆ. ಆಕೆ ತನ್ನ ಕಾರನ್ನು ರಿಪೇರಿಗೆಂದು ಗ್ಯಾರೇಜೊಂದಲ್ಲಿ ಬಿಟ್ಟಿದ್ದಳು ಎಂದು ಡೆಬ್ಬೀಯ ಮಗಳು ಹೇಳಿದ್ದಾಳೆ.

ಮಗಳಿಗೆ ಹಣ ಟ್ರಾನ್​ಫರ್ ಮಾಡಿ ಅತಂಕ ಮೂಡಿಸುವ ಸಂದೇಶ ಕಳಿಸಿದ್ದ ಅಮೆರಿಕನ್ ಮಹಿಳೆ ಪ್ರಪಾತವೊಂದರಲ್ಲಿ ಶವವಾಗಿ ಪತ್ತೆಯಾದಳು!
ಡೆಬ್ಬೀ ಮತ್ತು ಆಕೆಯ ಮಗಳು, ಅಮಂಡಾ
TV9 Web
| Edited By: |

Updated on: Sep 20, 2022 | 4:20 PM

Share

ತನ್ನ ಮಗಳಿಗೆ ಹಣ ಟ್ರಾನ್ಸ್ಫರ್ ಮಾಡಿ ಭೀತಿ ಹುಟ್ಟಿಸುವ ಸಂದೇಶವೊಂದನ್ನು ಕಳಿಸಿದ ಬಳಿಕ ಮಹಿಳೆಯೊಬ್ಬಳ ದೇಹ ಪ್ರಪಾತವೊಂದರಲ್ಲಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. 59-ವರ್ಷ-ವಯಸ್ಸಿನ ಡೆಬ್ಬೀ ಕೋಲಿಯರ್ ಎಂದು ಗುರುತಿಸಲಾಗಿರುವ ಜಾರ್ಜಿಯಾದ ಮೃತ ಮಹಿಳೆಯು ತನ್ನ ಮಗಳಿಗೆ ಸುಮಾರು ಎರಡು ಲಕ್ಷ ರೂ. ಗಳನ್ನು ಕಳಿಸಿದ ಬಳಿಕ ಸಂದೇಶದಲ್ಲಿ, ಇವರು ನನ್ನನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ, ಲವ್ ಯೂ, ಅಂತ ಮೆಸೇಜ್ ಕಳಿಸಿದ್ದಾಳೆ.

ಸೆಪ್ಟೆಂಬರ್ 11 ರಂದು ಆಕೆ ಬಾಡಿಗೆಯ ಎಸ್ ಯು ವಿಯೊಂದರಲ್ಲಿ ಮನೆಯಿಂದ ಹೊರಟ ನಂತರ ದೇಹ ಪತ್ತೆಯಾಗಿದೆ. ಆಕೆ ತನ್ನ ಕಾರನ್ನು ರಿಪೇರಿಗೆಂದು ಗ್ಯಾರೇಜೊಂದಲ್ಲಿ ಬಿಟ್ಟಿದ್ದಳು ಎಂದು ಡೆಬ್ಬೀಯ ಮಗಳು ಹೇಳಿದ್ದಾಳೆ.

ಮಮ್ಮೀ ಮನೆಯಿಂದ ಹೊರಡುವಾಗ ತನ್ನೊಂದಿಗೆ ಡೆಬಿಟ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು ಹೋಗಿದ್ದಳು ಎಂದು ಡೆಬ್ಬೀ ಮಗಳು 36-ವರ್ಷ-ವಯಸ್ಸಿನ ಅಮಂಡಾ ಬೀಯರ್ಡನ್ ಪೊಲೀಸರಿಗೆ ತಿಳಿಸಿದ್ದಾಳೆ.

ಹೇಬರ್ ಶಾಮ್ ಕೌಂಟಿ ಪೊಲೀಸ್ ಕಚೇರಿಯಿಂದ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಎಸ್ ಯು ವಿ ಸ್ಯಾಟೆಲೈಟ್ ರೇಡಿಯೋ ಮೂಲಕ ಡೆಬ್ಬೀಯ ಮನೆಯಿಂದ ಸುಮಾರು 60 ಮೈಲಿ ದೂರದಲ್ಲಿ ಪತ್ತೆಯಾಗಿದೆ.

ತನ್ನ ಮಮ್ಮೀ ನಾಪತ್ತೆಯಾಗಿದ್ದಾಳೆಂದು ಅಮಂಡಾ ದೂರನ್ನು ದಾಖಲಿಸಿದ ನಂತರ ಹುಡುಕಾಟ ಅರಂಭಿಸಿದ ಪೊಲೀಸರಿಗೆ ಅವಳ ದೇಹ ಪ್ರಪಾತವೊಂದರಲ್ಲಿ ಸಿಕ್ಕಿದೆ. ವರದಿಗಳ ಪ್ರಕಾರ ಪೊಲೀಸರು ಡೆಬ್ಬೀಯ ಸಾವನ್ನು ಕೊಲೆಯೆಂದು ಪರಿಗಣಿಸಿದ್ದಾರೆ. ಆಕೆಯನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ಅವರು ಶಂಕಿಸುತ್ತಿದ್ದಾರೆ.

ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅಮಂಡಾ, ಅನಿರೀಕ್ಷಿತವಾಗಿ ಮಮ್ಮಿ ಬ್ಯಾಂಕ್ ಌಪ್ ಮೂಲಕ ದುಡ್ಡು ವರ್ಗಾಯಿಸಿದ್ದಾಳೆ ಮತ್ತು ಅದರೊಂದಿಗೆ, ಇವರು ನನ್ನನ್ನು ಬಿಡುವ ಲಕ್ಷಣಗಳು ಕಾಣಿತ್ತಿಲ್ಲ, ಲವ್ ಯೂ, ಎಂಬ ಭೀತಿ ಹುಟ್ಟಿಸುವ ಸಂದೇಶ ಕಳಿಸಿದ್ದಾಳೆ ಅಂತ ತಿಳಿಸಿದ್ದಾಳೆ.

ಅಥನ್ಸ್ ಕ್ಲಾರ್ಕ್ ಕೌಂಟಿಗೆ ಪೊಲೀಸಗೆ ನೀಡಿರುವ ಹೇಳಿಕೆಯಲ್ಲಿ ಅಮಂಡಾ, ಅಮ್ಮನಿಗೆ ತಾನು ಹಣ ಕೇಳಿರಲಿಲ್ಲ, ಇದ್ದಕ್ಕಿದ್ದಂತೆ ನನ್ನ ಖಾತೆಗೆ ಹಣ ಜಮಾ ಆಗಿತ್ತು. ಆದರೆ ಅಮ್ಮ ಕಳಿಸಿದ ಸಂದೇಶ ಮತ್ತು ಆಕೆ ಕಾಣೆಯಾಗಿದ್ದು, ತನ್ನಲ್ಲಿ ವಿಪರೀತ ಹೆದರಿಕೆ, ಭೀತಿ ಮತ್ತು ಆತಂಕ ಮೂಡಿಸಿದವು ಅಂತ ಹೇಳಿದ್ದಾಳೆ.

ತನ್ನ ಈಗಿನ ಪತಿಯನ್ನು ಡೆಬ್ಬೀ 2013ರಲ್ಲಿ ಮದುವೆಯಾಗಿದ್ದಳು ಮತ್ತು ಅವರಿಬ್ಬರು ಹೆಚ್ಚಿನ ಸಮಯವನ್ನು ಪ್ರವಾಸದಲ್ಲಿ ಕಳೆಯುತ್ತಿದ್ದರು.

ಡೆಬ್ಬೀ ಕಾಣೆಯಾಗಲು ಸಾಧ್ಯವಾಗಿರಬಹುದಾದ ಕಾರಣಗಳ ಬಗ್ಗೆ ಅಕೆಯ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಇನ್ನೂ ಪೊಲೀಸರೊಂದಿಗೆ ಮಾತಾಡಿಲ್ಲ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು