ಎಂಟು ಹೆಂಡಿರನ್ನು ಹೊಂದಿರುವ ಈ ಬ್ರೆಜಿಲ್ ಮಾಡೆಲ್ ಗೆ ಇನ್ನೂ ಇಬ್ಬರನ್ನು ಮದುವೆಯಾಗುವ ಆಸೆಯಂತೆ!

ತಮ್ಮನ್ನು ಸ್ಪಾರ್ನ್​ಸೆಕ್ಸುವಲ್ ಅಂತ ಕರೆದುಕೊಳ್ಳುವ ಜನರಿಗೆ ತಮ್ಮ ದೇಹ ಮತ್ತು ಲುಕ್ಸ್ ಮೇಲೆ ಹೆಚ್ಚು ಏಕಾಗ್ರತೆ ಮತ್ತು ಫೋಕಸ್ ಇರುತ್ತದೆ. ಕೆಲವು ಸಲ ಅವರು ತಲೆ ಮೇಲಿನ ಕೂದಲು ಬಿಟ್ಟು ದೇಹದ ಮೇಲಿರುವ ಕೂದಲನ್ನೆಲ್ಲ ಬೋಳಿಸಿಕೊಳ್ಳುತ್ತಾರೆ!

ಎಂಟು ಹೆಂಡಿರನ್ನು ಹೊಂದಿರುವ ಈ ಬ್ರೆಜಿಲ್ ಮಾಡೆಲ್ ಗೆ ಇನ್ನೂ ಇಬ್ಬರನ್ನು ಮದುವೆಯಾಗುವ ಆಸೆಯಂತೆ!
8 ಪತ್ನಿಯರ ಪೈಕಿ 6 ಜನರೊಂದಿಗೆ ಆರ್ಥರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 21, 2022 | 7:57 AM

ತನ್ನನ್ನು ತಾನು ಸ್ಪಾರ್ನ್​ಸೆಕ್ಸುವಲ್ (Spornsexual) ಎಂದು ಕರೆದುಕೊಳ್ಳುವ ಎಂಟು ಹೆಂಡಿರ ಮುದ್ದಿನ ಗಂಡನಿಗೆ ಪತ್ನಿಯರ ಪೈಕಿ ಹೆಚ್ಚಿನವರು ಒಂದು ನಿರ್ದಿಷ್ಟವಾದ ಬೇಡಿಕೆಯನ್ನು ಅವನ ಮುಂದಿಟ್ಟಿದ್ದಾರಂತೆ ಮಾರಾಯ್ರೇ. ಅಂದಹಾಗೆ, ಬಹುಪತ್ನಿಯರ ಪತಿಯಾಗಿರುವ ಆರ್ಥರ್ ಒ ಅರ್ಸೋ (Arthur O Urso) ಕಳೆದ ಕೆಲ ದಿನಗಳಿಂದ ತನ್ನ ದೇಹವನ್ನು ಸಾಮು (body shape) ಮಾಡಿಕೊಳ್ಳಲು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾನೆ.

ತಮ್ಮನ್ನು ಸ್ಪಾರ್ನ್​ಸೆಕ್ಸುವಲ್ ಅಂತ ಕರೆದುಕೊಳ್ಳುವ ಜನರಿಗೆ ತಮ್ಮ ದೇಹ ಮತ್ತು ಲುಕ್ಸ್ ಮೇಲೆ ಹೆಚ್ಚು ಏಕಾಗ್ರತೆ ಮತ್ತು ಫೋಕಸ್ ಇರುತ್ತದೆ. ಕೆಲವು ಸಲ ಅವರು ತಲೆ ಮೇಲಿನ ಕೂದಲು ಬಿಟ್ಟು ದೇಹದ ಮೇಲಿರುವ ಕೂದಲನ್ನೆಲ್ಲ ಬೋಳಿಸಿಕೊಳ್ಳುತ್ತಾರೆ! ಬ್ರೆಜಿಲ್ನಲ್ಲಿ ಕೆಲ ಉತ್ಪಾದನೆಗಳಿಗೆ (ಬ್ರ್ಯಾಂಡ್ ಗಳಿಗೆ) ಮಾಡೆಲ್ ಆಗಿ ಕೆಲಸ ಮಾಡುವ ಆರ್ಥರ್, ತಾನು ಸಿಕ್ಸ್ ಪ್ಯಾಕ್ ಹೊಂದಬೇಕೆಂದು ಪತ್ನಿಯರಲ್ಲಿ ಹೆಚ್ಚಿನವರು ಆಪೇಕ್ಷೆ ಹೊಂದಿರುವರೆಂದು ಹೇಳಿದ್ದಾನೆ.

ಎಂಟು ಹೆಂಡತಿಯರ ಪತಿಯಾಗಿರುವ ಅವನು, ‘ಅವರು (ಪತ್ನಿಯರು) ಪ್ರತಿ ವಾರ ನನ್ನ ಒಳ ಉಡುಪುಗಳನ್ನು ಸಹ ಪರಿಶೀಲಿಸುತ್ತಾರೆ,’ ಎಂದು ಹೇಳಿದ್ದಾನೆ.

ಆರ್ಥರ್ ತನ್ನ ದೇಹದಾದ್ಯಂತ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡಿದ್ದು ದೇಹವನ್ನು ಸಾಮು ಮಾಡಿಕೊಳ್ಳಲು ತನ್ನನ್ನು ತಾನು ಜಿಮ್‌ಗೆ ಸಮರ್ಪಿಸಿಕೊಂಡಿದ್ದಾನೆ. ಆದರೆ ಈ ಕಲ್ಪನೆಯು ಪತ್ನಿಯರಲ್ಲಿ ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಅವನು ಹೇಳಿದ್ದಾನೆ.

‘ಪತ್ನಿಯರಲ್ಲಿ ಕೆಲವರಿಗೆ ನಾನು ದೇಹದ ಬಗ್ಗೆ ಅಷ್ಟೊಂದು ಕಾಳಜಿವಹಿಸುವುದು ಇಷ್ವವಾಗುತ್ತಿಲ್ಲ, ಇನ್ನೂ ಕೆಲವರಿಗೆ ಅಸೂಯೆ ಉಂಟಾಗುತ್ತಿದೆ,’ ಎಂದು ಆರ್ಥರ್ ಹೇಳಿದ್ದಾನೆ.

ಆರ್ಥರ್ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಂಪೂರ್ಣ ಕಾಳಜಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದು ತನ್ನ ಧೋರಣೆ ಮನೆಯಲ್ಲಿರುವವರನ್ನು ಸಂತೃಪ್ತರನ್ನಾಗಿ ಇಡಲು ನೆರವಾಗುತ್ತಿದೆ ಎಂದಿದ್ದಾನೆ.

‘ನಾನು ಗ್ಲುಟನ್, ಲ್ಯಾಕ್ಟೋಸ್, ಬ್ರೆಡ್ ಮತ್ತು ಪಾಸ್ಟಾ ಮೊದಲಾದವುಗಳನ್ನು ತಿನ್ನುವುದಿಲ್ಲ,’ ಎಂದು ಅವನು ಹೇಳಿದ್ದಾನೆ.

ಒಲಿಂಪಿಕ್ ಅಥ್ಲೀಟ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಕಸರತ್ತಿನ ವಿಧಾನವನ್ನು ಆರ್ಥರ್ ಅನುಸರಿಸುತ್ತಾನೆ-ಇದರಲ್ಲಿ ಮ್ಯಾರಥಾನ್, ಕ್ರಾಸ್ ಫಿಟ್, ಮೂರು ಗಂಟೆಗಳ ಕಾಲ ಭಾರ ಎತ್ತುವುದು ಮತ್ತು ಪ್ರತಿನಿತ್ಯ ಓಟ ಮೊದಲಾದವೆಲ್ಲ ಅವನ ವ್ಯಾಯಾಮದ ರೆಜೀಮ್ ನಲ್ಲಿ ಒಳಗೊಂಡಿವೆ.

ಆರ್ಥರ್ ದೇಹ ಮತ್ತು ಕೂದಲಿನ ಹೈಡ್ರೇಶನ್ ಕ್ರೀಮ್‌ಗಳನ್ನು ಒಳಗೊಂಡಿರುವ ಕಟ್ಟುನಿಟ್ಟಾದ ಆರೈಕೆಯ ದಿನಚರಿಯನ್ನು ಸಹ ಅನುಸರಿಸುತ್ತಾನೆ.

ನೀವು ಹೇಗಿರಬೇಕೆಂದು ಪತ್ನಿಯರು ಬಯಸುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಅವನು, ‘ನಾನು ದೈಹಿಕವಾಗಿ ಫಿಟ್ ಆಗಿರುವುದನ್ನು ಅವರು ಬಯಸುತ್ತಾರೆ, ಫಿಟ್ ಆಗಿರದಿದ್ದರೆ ನನ್ನನ್ನು ಹೀಯಾಳಿಸುತ್ತಾರೆ ಮತ್ತು ತಿರಸ್ಕರಿಸುತ್ತಾರೆ,’ ಅಂತ ಹೇಳಿದ್ದಾನೆ.

ಮೊದಲು ಆರ್ಥರ್ ಗೆ ಒಂಭತ್ತು ಪತ್ನಿಯರಿದ್ದರು ಮತ್ತು ಮಕ್ಕಳನ್ನು ಹುಟ್ಟಿಸಿ ಕುಟುಂಬವನ್ನು ವಿಸ್ತರಿಸುವ ಯೋಚನೆ ಅವನಿಗಿತ್ತು. ಪತ್ನಿಯರಲ್ಲಿ ಅವನು ಎಲ್ಲರಿಗಿಂತ ಮೊದಲು ಮದುವೆಯಾದ ಮಹಿಳೆಗೆ ತನ್ನ ಮಗುವಿನ ತಾಯಿಯಾಗುವ ಅವಕಾಶ ನೀಡಬೇಕು ಅಂತ ಅವನು ನಿರ್ಧರಿಸಿದ್ದನಾದರೂ ಒಂದು ಪಕ್ಷ ಅವಳೇನಾದರೂ ತನ್ನನ್ನು ಬಿಟ್ಟು ಹೋದರೆ ಮಗುವಿನ ತಾಯಿ ಯಾರಾಗುತ್ತಾರೆ ಎಂಬ ಯೋಚನೆ ಅವನಲ್ಲಿ ಹುಟ್ಟಿಕೊಂಡಿತ್ತು.

ತನ್ನ ಎಲ್ಲ ಪತ್ನಿಯರೊಂದಿಗೆ ನಿಯಮಿತವಾಗಿ ಮತ್ತು ಪಾಳಿಯಂತೆ ಲೈಂಗಿಕ ಕ್ರಿಯೆ ನಡೆಸುತ್ತಾ ಎಲ್ಲರನ್ನು ಸಂತೃಪ್ತರನ್ನಾಗಿ ಇಟ್ಟಿರುವುದಾಗಿ ಹೇಳಿದ್ದ ಆರ್ಥರ್ ಕಳೆದ ತಿಂಗಳು ಇನ್ನಿಬ್ಬರನ್ನು ಮದುವೆಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದ. ಒಂಭತ್ತು ಪತ್ನಿಯರ ಪೈಕಿ ಒಬ್ಬಳು ಬಿಟ್ಟು ಹೋದ ಮೇಲೆ ಆರ್ಥರ್ ಕುಟುಂಬವನ್ನು ವಿಸ್ತರಿಸುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದ.

ಆರ್ಥರ್ ಮತ್ತು ಅವನ ಮೊದಲ ಪತ್ನಿ ಲುವಾನಾ ಕಾಜಾಕಿ ಸ್ವಿಂಗರ್ ಗಳಾಗಿದ್ದಾರೆ (ಸಾಮೂಹಿಕ ಸೆಕ್ಸ್ ಆನಂದಿಸುವವರು). ಸಾವೋ ಪಾಲೋನಲ್ಲಿರುವ ಕೆಥೋಲಿಕ್ ಚರ್ಚ್ ಒಂದರಲ್ಲಿ ಲುವಾನಾ ಉಳಿದ ಮಹಿಳೆಯರೊಂದಿಗೆ ತನ್ನ ಗಂಡನ (ಆರ್ಥರ್) ಮದುವೆ ಮಾಡಿಸಿದ್ದಾಳೆ.