ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್

ನೇಪಾಳ ಏರ್​ಲೈನ್ಸ್ ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸಿದೆ. ಈ ವಿಷಯ ವಿವಾದಕ್ಕೀಡಾದ ನಂತರ ಭಾರತೀಯರ ಕ್ಷಮೆಯಾಚಿಸಿದೆ. ಸರ್ಕಾರಿ ಸ್ವಾಮ್ಯದ ನೇಪಾಳ ಏರ್​ಲೈನ್ಸ್ ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸುವ ಇತ್ತೀಚಿನ ಪೋಸ್ಟ್‌ಗಾಗಿ ಟೀಕೆಗೆ ಗುರಿಯಾಗಿದೆ. ವಿಮಾನಯಾನ ಸಂಸ್ಥೆ ಇದಾಗಿ 24 ಗಂಟೆಗಳ ಒಳಗೆ ಭಾರತದ ತಪ್ಪಾದ ನಕ್ಷೆಗೆ ಕ್ಷಮೆಯಾಚಿಸಿದೆ.

ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್
Nepal Airlines
Image Credit source: x

Updated on: Apr 30, 2026 | 5:37 PM

ನವದೆಹಲಿ, ಏಪ್ರಿಲ್ 30: ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ಪಾಕಿಸ್ತಾನದ (Pakistan) ಭಾಗವೆಂದು ತೋರಿಸಿದ ನಂತರ ನೇಪಾಳ ಏರ್​ಲೈನ್ಸ್ ಟೀಕೆಗೆ ಗುರಿಯಾಗಿದೆ. ಬುಧವಾರ ಏರ್​ಲೈನ್ಸ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳನ್ನು ಪಾಕಿಸ್ತಾನದ ಪ್ರದೇಶದ ಭಾಗವಾಗಿ ತೋರಿಸಿರುವ ನಕ್ಷೆಯನ್ನು ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತು.

ಈ ಫೋಟೋ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಇದು ಭಾರತೀಯ ಬಳಕೆದಾರರಿಂದ ಟೀಕೆಗೆ ಗುರಿಯಾಯಿತು. ಈ ವಿಷಯ ವೈರಲ್ ಆದ ಕೂಡಲೆ ಸೋಷಿಯಲ್ ಮೀಡಿಯಾದಲ್ಲಿ #BoycottNepalAirlines ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬರಲು ಪ್ರಾರಂಭಿಸಿತು.


ಸೋಷಿಯಲ್ ಮೀಡಿಯಾ ಬಳಕೆದಾರರು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ವಿಮಾನಯಾನ ಸಚಿವಾಲಯವನ್ನು ನೇಪಾಳದೊಂದಿಗೆ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸುವಂತೆ ಒತ್ತಾಯಿಸಿದರು. ಭಾರತ ಹಲವು ದಶಕಗಳಿಂದ ಲಕ್ಷಾಂತರ ನೇಪಾಳಿಗಳಿಗೆ ಉದ್ಯೋಗ ನೀಡುವ ಮೂಲಕ, ವ್ಯಾಪಾರ ಪ್ರವೇಶವನ್ನು ನೀಡುವ ಮೂಲಕ, ಇಂಧನ ನೀಡುವ ಮೂಲಕ, ವಿದ್ಯುತ್ ಯೋಜನೆಗಳಿಗೆ ಹಣಕಾಸು ಒದಗಿಸುವ ಮೂಲಕ ಮತ್ತು ವಿಪತ್ತು ಪರಿಹಾರವನ್ನು ಒದಗಿಸುವ ಮೂಲಕ ನೇಪಾಳದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಹಲವಾರು ಬಳಕೆದಾರರು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು! ವಿಡಿಯೋ ನೋಡಿ

ವಿಮಾನಯಾನ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ ಹಲವಾರು ಭಾರತೀಯ ಬಳಕೆದಾರರಲ್ಲಿ ಭೋಜ್‌ಪುರಿ ನಟ-ಗಾಯಕ ಖೇಸರಿಲಾಲ್ ಯಾದವ್ ಕೂಡ ಇದ್ದರು. ಅವರು ಇದು ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಉದ್ದೇಶಿಸಲಾದ ಕೃತ್ಯವಾಗಿರಬಹುದು ಎಂದು ಆರೋಪ ಮಾಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನೇಪಾಳ ಏರ್​ಲೈನ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿತು. ಅದು ನೇಪಾಳ ಅಥವಾ ಏರ್​ಲೈನ್ಸ್​​ನ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Thu, 30 April 26

Follow Us