ಬ್ರಿಟನ್‌ನ ಏರ್ ಟ್ರಾಫಿಕ್‌ ಸಿಸ್ಟಮ್‌ ಫೇಲ್‌; ವಾಯು ಸಂಚಾರ ಸೇವೆ ಸ್ಥಗಿತ

|

Updated on: Aug 28, 2023 | 6:48 PM

ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಂಚಾರ ನಿರ್ಬಂಧಿಸಲಾಗಿದೆ. ಎಂಜಿನಿಯರ್‌ಗಳು ದೋಷವನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ಶ್ರಮಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ."ತಾಂತ್ರಿಕ ಸಮಸ್ಯೆ" ಹಲವಾರು ವಿಮಾನ ವಿಳಂಬಗಳಿಗೆ ಕಾರಣವಾಯಿತು. ಯುರೋಪ್‌ನಲ್ಲಿನ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ತಮ್ಮ ವಿಮಾನಗಳ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಲು ಪ್ರಯಾಣಿಕರಲ್ಲಿ ಹೇಳಲಾಗಿದೆ.

ಬ್ರಿಟನ್‌ನ ಏರ್ ಟ್ರಾಫಿಕ್‌ ಸಿಸ್ಟಮ್‌ ಫೇಲ್‌; ವಾಯು ಸಂಚಾರ ಸೇವೆ ಸ್ಥಗಿತ
ಬ್ರಿಟಿಷ್ ಏರ್​​ವೇಸ್
Follow us on

ಬ್ರಿಟನ್ ಆಗಸ್ಟ್ 28: ಬ್ರಿಟನ್​​ನ ಏರ್ ಟ್ರಾಫಿಕ್ ಕಂಟ್ರೋಲ್ (UK air traffic control) ಕಂಪ್ಯೂಟರ್ ಸಿಸ್ಟಮ್‌ ವಿಫಲವಾಗಿದೆ ಎಂದು ಸ್ಕಾಟಿಷ್ ಏರ್‌ಲೈನ್ ಲೋಗನೇರ್ (Loganair) ಸೋಮವಾರ ಹೇಳಿದ್ದು ಅಂತರರಾಷ್ಟ್ರೀಯ ವಿಮಾನಗಳು ವಿಳಂಬವಾಗಲಿದೆ ಎಂದಿದೆ. ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದು ವಿಮಾನಗಳ ಹಾರಾಟ ನಿರ್ಬಂಧಿಸಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ವಾಯು ಸಂಚಾರ ಸೇವೆ (NATS) ವಕ್ತಾರರು ಹೇಳಿದ್ದಾರೆ.

ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಂಚಾರ ನಿರ್ಬಂಧಿಸಲಾಗಿದೆ. ಎಂಜಿನಿಯರ್‌ಗಳು ದೋಷವನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ಶ್ರಮಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.”ತಾಂತ್ರಿಕ ಸಮಸ್ಯೆ” ಹಲವಾರು ವಿಮಾನ ವಿಳಂಬಗಳಿಗೆ ಕಾರಣವಾಯಿತು. ಯುರೋಪ್‌ನಲ್ಲಿನ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ತಮ್ಮ ವಿಮಾನಗಳ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಲು ಪ್ರಯಾಣಿಕರಲ್ಲಿ ಹೇಳಲಾಗಿದೆ.

ಸಿಸ್ಟಂ ವೈಫಲ್ಯದ ಪರಿಣಾಮ,ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲು ಬೇಕಾದ ಕಾರ್ಯಗಳಿಗಾಗಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಲಂಡನ್ ಲುಟನ್ ವಿಮಾನ ನಿಲ್ದಾಣ ಹೇಳಿದೆ.ಏತನ್ಮಧ್. ಡಬ್ಲಿನ್ ವಿಮಾನ ನಿಲ್ದಾಣವು ಏರ್ ಟ್ರಾಫಿಕ್ ಕಂಟ್ರೋಲ್ ಸಮಸ್ಯೆಗಳಿಂದಾಗಿ ಐರಿಶ್ ರಾಜಧಾನಿಯ ಒಳಗೆ ಮತ್ತು ಹೊರಗೆ ಕೆಲವು ವಿಮಾನಗಳಿಗೆ ವಿಳಂಬ ಮತ್ತು ರದ್ದತಿಗೆ ಕಾರಣವಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ

“ನೆಟ್‌ವರ್ಕ್ ವೈಫಲ್ಯದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು NATS ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ರಿಟಿಷ್ ಏರ್‌ವೇಸ್ ಹೇಳಿದೆ.

ಸಮಸ್ಯೆಯನ್ನು ಸರಿಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಅಥವಾ ಅದಕ್ಕೆ ಕಾರಣವೇನು ಎಂಬುದರ ಅಂದಾಜನ್ನು NATS ನೀಡಿಲ್ಲ.

ವರದಿಗಳ ಪ್ರಕಾರ, ಹಲವು ವಿಮಾನಗಳು ಕನಿಷ್ಠ 12 ಗಂಟೆಗಳ ಕಾಲ ವಿಳಂಬವಾಗುವ ಸಾಧ್ಯತೆಯಿದೆ. ಸೋಮವಾರ UK ಯ ಸಾರ್ವಜನಿಕ ರಜೆಯ ಕಾರಣ ಬಿಡುವಿಲ್ಲದ ಪ್ರಯಾಣದ ದಿನದಂದು ಟೇಕ್ ಆಫ್ ಮಾಡಲು ಕಾಯುತ್ತಿರುವ ಹಲವಾರು ಪ್ರಯಾಣಿಕರು  ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ಬಳಸಿದರು.

ಎಲ್ಲಾ ಯುಕೆ ವಾಯುಪ್ರದೇಶವನ್ನು ಮುಚ್ಚಲು ಕಾರಣವಾದ ವ್ಯಾಪಕವಾದ ಕಂಪ್ಯೂಟರ್ ಸ್ಥಗಿತದ ಬಗ್ಗೆ ಪೈಲಟ್ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.  ಪ್ರಯಾಣಿಕರು 8 ರಿಂದ 12 ಗಂಟೆಗಳ ವಿಳಂಬವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಸಮನ್ವಯದ ಆಧಾರದ ಮೇಲೆ ಹೆಚ್ಚಿನ ಸ್ಕಾಟ್ಲೆಂಡ್ ವಿಮಾನಗಳನ್ನು ನಿರ್ವಹಿಸಲು ನಾವು ಭರವಸೆ ಹೊಂದಿದ್ದರೂ ಮತ್ತು ಕನಿಷ್ಠ ಅಡ್ಡಿಯೊಂದಿಗೆ, ಉತ್ತರ-ದಕ್ಷಿಣ ಮತ್ತು ಅಂತರಾಷ್ಟ್ರೀಯ ವಿಮಾನಗಳು ವಿಳಂಬಕ್ಕೆ ಒಳಗಾಗಬಹುದು ಎಂದು ಲೋಗನೇರ್ ಹೇಳಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Mon, 28 August 23