ಕೊರೊನಾದಿಂದ ಬೆಂದು ಹೋಗಿದ್ದ ಜಗತ್ತಿಗೆ ಈಗ ಮತ್ತೊಂದು ಸಾಂಕ್ರಾಮಿಕ ರೋಗ ವಕ್ಕರಿಸುವ ಭೀತಿ ಎದುರಾಗಿದೆ. ಅದು ಮಂಕಿಪಾಕ್ಸ್ (Monkeypox) . ಈ ರೋಗದ ಲಕ್ಷಣಗಳು ಕೆಲವು ದೇಶಗಳಲ್ಲಿ ಮಾತ್ರ ಕಂಡು ಬಂದಿದೆ. ಈ ರೋಗ ಸದ್ಯ ಆಫ್ರಿಕಾದ (Africa) ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ವೈದ್ಯರಿಗೆ ಇದು ತೆಲೆನೋವಾಗಿ ಸಂಭವಿಸಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ (Europe) ಮತ್ತು ಅಮೇರಿಕನ್ (America) ದೇಶಗಳ ಜನರು ತುತ್ತಾಗಿದ್ದಾರೆ. ಆದರೆ ಆಫ್ರಿಕಾದಷ್ಟು ವ್ಯಾಪಕವಾಗಿ ಹಬ್ಬಿಲ್ಲ.
ಆಫ್ರಿಕಾದ ಸಾಕಷ್ಟು ಜನರು ಈ ರೋಗಕ್ಕೆ ತುತ್ತಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಪ್ರಕರಣಗಳ ಪ್ರಗತಿಯ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲದೇ ಆಫ್ರಿಕಾಕ್ಕೆ ಪ್ರಯಾಣ ಬೆಳಸಿದವರಲ್ಲೂ ಈ ರೋಗ ಕಂಡು ಬಂದಿದೆ. ಈ ರೋಗ ಹೆಚ್ಚಾಗಿ ಯುವಕರಲ್ಲಿ ಕಂಡು ಬಂದಿದ್ದು, ಇದರಿಂದ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ದಂಶಕಗಳು ಮತ್ತು ಪ್ರೈಮೇಟ್‌ಗಳಂತಹ ಕಾಡು ಪ್ರಾಣಿಗಳಿಂದ ಹಬ್ಬುತ್ತದೆ ಎಂದು ವರದಿಯಾಗಿದೆ. ಈ ರೋಗದ ಹೆಚ್ಚಿನ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ.
ಮಂಕಿಪಾಕ್ಸ್ ನಂತಹ ರೋಗ ಮೊದಲು 1958 ರಲ್ಲಿ ಮಂಗಗಳಲ್ಲಿ ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ, ಮಂಕಿಪಾಕ್ಸ್ ಎಂದು ಹೆಸರು ಬಂತು. ಮೊದಲ ಮಾನವ ಸೋಂಕು 1970 ರಲ್ಲಿ – ಆಸ್ಟ್ರೇಲಿಯಾದ ಒಂದು ಊರಿನಲ್ಲಿ ಒಂಬತ್ತು ವರ್ಷದ ಹುಡುಗನಲ್ಲಿ ಕಂಡು ಬಂದಿತ್ತು. ಅಪರೂಪದ ಕಾಯಿಲೆಯು ಸಾಮಾನ್ಯವಾಗಿ ಜ್ವರ, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಬಳಲಿಕೆ ಮತ್ತು ಕೈ ಮತ್ತು ಮುಖದ ಮೇಲೆ ದದ್ದುಗಳಂತ ಲಕ್ಷಣಗಳು ಕಂಡು ಬರುತ್ತವೆ .