ನ್ಯೂಯಾರ್ಕ್​ ಮೆಟ್ರೊ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ಶಂಕಿತನ ಚಿತ್ರ ಬಿಡುಗಡೆ: ಈವರೆಗಿನ 10 ಬೆಳವಣಿಗೆಗಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 13, 2022 | 10:38 AM

ಈ ಹಂತದಲ್ಲಿ ಇದೊಂದು ಭಯೋತ್ಪಾದನಾ ಕೃತ್ಯ ಎಂದು ಹೇಳಲು ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಆದರೆ ನಾವು ಕೊಡುತ್ತಿರುವ ಮಾಹಿತಿಯ ಕೆಲವು ಅಂಶಗಳು ಯಾವುದೇ ಕ್ಷಣದಲ್ಲಿ ಬದಲಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್​ ಮೆಟ್ರೊ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ಶಂಕಿತನ ಚಿತ್ರ ಬಿಡುಗಡೆ: ಈವರೆಗಿನ 10 ಬೆಳವಣಿಗೆಗಳಿವು
ನ್ಯೂಯಾರ್ಕ್​ ಸಬ್​ವೇ ಎದುರು ಪೊಲೀಸರು
Follow us on

ನ್ಯೂಯಾರ್ಕ್​ನ ಬ್ರೂಕ್ಲಿನ್​ನಲ್ಲಿ ನಡೆದ ಗುಂಡಿನ ದಾಳಿಯ (New York shooting) ಶಂಕಿತನೆಂಬ ಸಾಧ್ಯತೆಯಿರುವ ಅರೋಪಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದಾಳಿಗೆ ಇವನೇ ಹೊಣೆ ಎಂದು ಹೇಳಲು ಆಗುವುದಿಲ್ಲ ಎಂದು ಪೊಲೀಸಲು ಸ್ಪಷ್ಟಪಡಿಸಿದ್ದಾರೆ. ಇದು ಭಯೋತ್ಪಾದನಾ ಕೃತ್ಯ ಎನ್ನುವುದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ‘ಈ ಹಂತದಲ್ಲಿ ಇದೊಂದು ಭಯೋತ್ಪಾದನಾ ಕೃತ್ಯ ಎಂದು ಹೇಳಲು ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಆದರೆ ನಾವು ಕೊಡುತ್ತಿರುವ ಮಾಹಿತಿಯ ಕೆಲವು ಅಂಶಗಳು ಯಾವುದೇ ಕ್ಷಣದಲ್ಲಿ ಬದಲಾಗಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ 20 ಜನರು ಗಾಯಗೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು…

  1. ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫ್ರಾಂಕ್ ಆರ್ ಜೇಮ್ಸ್ ಅವರನ್ನು ಶಂಕಿತ ಇರಬಹುದು ಎಂದು ಘೋಷಿಸಿದ್ದಾರೆ. 62ರ ಹರೆಯದ ಫ್ರಾಂಕ್ ಅವರನ್ನು ಪರ್ಸನ್ ಆಫ್ ಇಂಟರೆಸ್ಟ್ ಎಂದು ಹೇಳಲಾಗಿದೆ. ಬಾಡಿಗೆ ವ್ಯಾನ್​ನಲ್ಲಿ ಸಂಚರಿಸುತ್ತಿದ್ದ ಈ ವ್ಯಕ್ತಿ ಹೊಳೆಯುವ ಕಿತ್ತಳೆ ಬಣ್ಣದ ಮೇಲುಡುಗೆ ಮತ್ತು ಬೂದುಬಣ್ಣದ ಸ್ವೆಟರ್ ಧರಿಸಿದ್ದ. ವ್ಯಾನ್​ನ ಕೀಗಳು ದಾಳಿ ನಡೆದ ಸಬ್​ವೇ ಸ್ಟೇಷನ್​ನಲ್ಲಿ ಪತ್ತೆಯಾಗಿತ್ತು.
  2. ಸಬ್​ವೇ ರೈಲಿನ ಬೋಗಿಯಲ್ಲಿ ಗ್ಯಾಸ್​ ಬಾಂಬ್ ಸ್ಫೋಟಿಸುವ ಮೊದಲು ಗ್ಯಾಸ್ ಮಾಸ್ಕ್ ಹಾಕಿಕೊಂಡಿದ್ದಾನೆ. ರೈಲು ಸ್ಟೇಷನ್​ಗೆ ಬಂದಾಗ ಹಲವು ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. 10 ನ್ಯೂಯಾರ್ಕ್​ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಘಟನಾ ಸ್ಥಳದಲ್ಲಿ ಗ್ಲೋಕ್ 9 ಎಂಎಂ ಸೆಮಿ ಆಟೊಮೆಟಿಕ್ ಹ್ಯಾಂಡ್​ಗನ್​ನ ಮೂರು ಸಜೀವ ಗುಂಡುಗಳು ಪತ್ತೆಯಾಗಿವೆ.
  3. ಘಟನೆಯಲ್ಲಿ 10 ಮಂದಿಗೆ ಗುಂಡು ತಗುಲಿದೆ. 13 ಜನರು ಹೊಸೆ ಸೇವಿಸಿ ಅಸ್ವಸ್ಥರಾಗಿದ್ದಾರೆ.
  4. ಘಟನೆಯ ನಂತರ ತನಿಖಾಧಿಕಾರಿಗಳು ಪರಿಶೀಲಿಸಿದಾಗ ಗ್ಲೋಕ್ ಹ್ಯಾಂಡ್​ಗನ್, ಮೂರು ಮ್ಯಾಗಜೀನ್ (ಗುಂಡು ತುಂಬುವ ಚೀಲ), ಎರಡು ಸಜೀವ ಸ್ಮೋಕ್ ಗ್ರೆನೇಡ್​ಗಳು, ಎರಡು ಬಳಕೆಯಾದ ಸ್ಮೋಕ್ ಗ್ರೆನೇಡ್​ಗಳು ಮತ್ತು ಒಂದು ಒಂದು ಕೊಡಲಿ ಪತ್ತೆಯಾಗಿದೆ.
  5. ಬ್ರೂಕ್ಲಿನ್​ ಪ್ರಕರಣವನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸುವುದಿಲ್ಲ. ಆ ಆಯಾಮದಲ್ಲಿ ತನಿಖೆಯನ್ನೂ ಆರಂಭಿಸುವುದಿಲ್ಲ. ಅಂಥ ಯಾವುದೇ ಉದ್ದೇ ಈವರೆಗೂ ಪತ್ತೆಯಾಗಿಲ್ಲ. ಯಾವುದೇ ಗಾಯಗಳ ಪ್ರಾಣಾಪಾಯ ತಂದೊಡ್ಡುವಷ್ಟು ತೀವ್ರವಾಗಿಲ್ಲ ಎಂದು ನ್ಯೂಯಾರ್ಕ್ ಪೊಲೀಸರು ಹೇಳಿದ್ದಾರೆ.
  6. ರೈಲು 36 ಸ್ಟ್ರೀಟ್ ಸ್ಟೇಷನ್ ಪ್ರವೇಶಿಸುವಾಗಲೇ ಅದರಲ್ಲಿ ಹೊಗೆ ತುಂಬಿಕೊಂಡಿದ್ದು ಹಾಗೂ ಪ್ರಯಾಣಿಕರು ಅದರಿಂದ ಕೆಳಗೆ ಇಳಿಯಲು ಹಾತೊರೆಯುತ್ತಿದ್ದ ಸಂಗತಿ ವಿಡಿಯೊ ಫೂಟೇಜ್​ನಲ್ಲಿ ಪತ್ತೆಯಾಗಿದೆ.
  7. ಸಹ ಪ್ರಯಾಣಿಕರ ನೆರವಿಗೆ ಧಾವಿಸಿದವರನ್ನು ಅಧ್ಯಕ್ಷ ಜೋ ಬೈಡೆನ್ ಅಭಿನಂದಿಸಿದ್ದಾರೆ. ಅಧ್ಯಕ್ಷರ ಕಚೇರಿ ತಂಡವು ನ್ಯೂಯಾರ್ಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
  8. ಅಧ್ಯಕ್ಷ ಜೋ ಬೈಡೆನ್ ಅವರು ಅಮೆರಿಕದಲ್ಲಿ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದ ಕೇವಲ ಒಂದೇ ದಿನದ ನಂತರ ಈ ಘಟನೆ ನಡೆದಿದೆ. ಅಮೆರಿಕದಲ್ಲಿ ಪತ್ತೆ ಮಾಡಲು ಸಾಧ್ಯವಾಗದ, ಮನೆಗಳಲ್ಲಿಯೂ ಸುಲಭವಾಗಿ ಜೋಡಿಸಿಕೊಳ್ಳಬಲ್ಲ ‘ನಿಗೂಢ ಬಂದೂಕು’ಗಳ (Ghost Guns) ಹಾವಳಿ ಹೆಚ್ಚಾಗಿದೆ.
  9. ಅಮೆರಿಕದಲ್ಲಿ ಗುಂಡು ಹಾರಾಟದಿಂದ ಮೃತಪಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಸರಾಸರಿ 40,000 ಜನರು ಬಂದೂಕು ಸಂಬಂಧಿತ ಪ್ರಕರಣಗಳಿಂದ ಸಾವನ್ನಪ್ಪುತ್ತಿದ್ದಾರೆ. ಆತ್ಮಹತ್ಯೆಗೂ ಬಂದೂಕು ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.
  10. ನ್ಯೂಯಾರ್ಕ್ ನಗರದಲ್ಲಿಯೂ ಬಂದೂಕು ಬಳಕೆಯಾಗುವ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನವರಿಯಿಂದ ಏಪ್ರಿಲ್ ನಡುವಣ ಅವಧಿಯಲ್ಲಿ 296 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ನ್ಯೂಯಾರ್ಕ್​​ನ ಸಬ್​ವೇ ಸ್ಟೇಷನ್​​ಗಳಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ; 5 ಮಂದಿ ಸಾವು, 13 ಜನರಿಗೆ ಗಾಯ

ಇದನ್ನೂ ಓದಿ: Sacramento shooting ಕ್ಯಾಲಿಫೋರ್ನಿಯಾ ಸ್ಯಾಕ್ರಮೆಂಟೊದಲ್ಲಿ ಗುಂಡಿನ ದಾಳಿ: 6 ಮಂದಿ ಸಾವು, 10 ಮಂದಿಗೆ ಗಾಯ

Published On - 8:24 am, Wed, 13 April 22