Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

Video: ಪಕ್ಷಾಂತರಿ ಎಂದು ಟೀಕಿಸಿದ ವೃದ್ಧನಿಗೆ ಹೊಡೆದ ರಾಜಕೀಯ ನಾಯಕ; ಹೋಟೆಲ್​ನಲ್ಲಿ 2 ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿ
ಪಾಕಿಸ್ತಾನದಲ್ಲಿ ಗಲಾಟೆ
Follow us
TV9 Web
| Updated By: Lakshmi Hegde

Updated on:Apr 13, 2022 | 6:07 PM

ಪಾಕಿಸ್ತಾನ ತೆಹ್ರೀಕ್​-ಇ ಇನ್ಸಾಫ್​ (ಪಿಟಿಐ) ಪಕ್ಷದವರೇ ಆಗಿದ್ದರೂ ಅದರೊಂದಿಗೆ ಭಿನ್ನಮತ ಹೊಂದಿರುವ, ಸದಾ ಪಿಟಿಐನ್ನು ಟೀಕಿಸುವ ನಾಯಕ ನೂರ್ ಅಲಾಮ್ ಖಾನ್​, ನಿನ್ನೆ (ಮಂಗಳವಾರ) ಇಸ್ಲಮಾಬಾದ್​ನ ಖಾಸಗಿ ಹೋಟೆಲ್​ವೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಜತೆ ಜಗಳವಾಡಿದ್ದಾರೆ. ಹೋಟೆಲ್​ನಲ್ಲಿ ವೃದ್ಧ ನಾಗರಿಕ, ಅಲಾಮ್​ ಖಾನ್​ರನ್ನು ಪಕ್ಷಾಂತರಿ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಿರಂತರವಾಗಿ ಅವರ ವಿರುದ್ಧ ದೋಷಾರಾಪ ಮಾಡುತ್ತಲೇ ಇದ್ದರು. ಇದರಿಂದ ಕಿರಿಕಿರಿಗೊಂಡ ನೂರ್ ಅಲಾಮ್ ಖಾನ್ ಹಿರಿಯ ನಾಗರಿಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ.  ಜಿಯೋ ನ್ಯೂಸ್​​ನ ವರದಿಗಾರರೊಬ್ಬರು ಈ ವಿಡಿಯೋವನ್ನೂ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲಾಮ್ ಖಾನ್​ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್​, ನದೀಮ್​ ಅಫ್ಜಲ್​ ಚಾನ್​ ಮತ್ತು ಫೈಸಲ್​ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್​ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಈ ಹಿರಿಯ ನಾಗರಿಕ ಕೂಡ ಬಂದಿದ್ದರು. ಇವರು ಪಿಟಿಐ ಪಕ್ಷದ ಕಾರ್ಯಕರ್ತ. ಪಿಪಿಪಿ ಮುಖಂಡರೊಂದಿಗೆ ಅಲಾಮ್​ ಖಾನ್​ರನ್ನು ನೋಡಿದ ಆ ವೃದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಖಾನ್​ ಮತ್ತು ಖೋಖರ್​ಗೆ ಬಾಟಲಿಗಳನ್ನೂ ಎಸೆದಿದ್ದಾರೆ. ಆಗ ಇವರಿಬ್ಬರೂ ಬಂದು ಆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅದಾದ ಮೇಲೆ ಹೋಟೆಲ್​​ನಲ್ಲಿದ್ದ ಪಿಪಿಪಿ ಮತ್ತು ಪಿಟಿಐ ಬೆಂಬಲಿಗರು ಹೊಡೆ

ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವದ ಪರಿಸ್ಥಿತಿ ಇದೆ. ಅಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್​ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಪ್ರತಿಪಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್​ ಮುಖ್ಯಸ್ಥ ಶಹಬಾಜ್ ಷರೀಫ್​ ಅವರನ್ನು ಪ್ರಧಾನಮಂತ್ರಿ ಮಾಡಿದಾಗಿನಿಂದಲ ದೇಶದಲ್ಲಿ ವಿವಿಧೆಡೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಿಪಿಪಿ ಮತ್ತು ಇತರ ಪಕ್ಷಗಳ ನಾಯಕರು, ಇಮ್ರಾನ್ ಖಾನ್ ಕೆಳಗಿಳಿದಿದ್ದಕ್ಕೆ ಸಂಭ್ರಮದ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆಗಾಗ ಈ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತನಿಖೆ ಕೈಗೆತ್ತಿಕೊಂಡ ಆ್ಯಂಟಿ ಟೆರರಿಸಂ ಸೆಲ್

Published On - 6:07 pm, Wed, 13 April 22