New Zealand PM: ಅವಧಿ ಪೂರ್ಣಕ್ಕೂ ಮುನ್ನ ರಾಜೀನಾಮೆ ನೀಡುವುದಾಗಿ ಘೋಷಿಸಿದ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್

ಅವಧಿ ಪೂರ್ಣಕ್ಕೂ ಮುನ್ನವೇ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಅಕ್ಟೋಬರ್ 14 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದರು.

New Zealand PM: ಅವಧಿ ಪೂರ್ಣಕ್ಕೂ ಮುನ್ನ ರಾಜೀನಾಮೆ ನೀಡುವುದಾಗಿ ಘೋಷಿಸಿದ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್
ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್
Follow us
| Updated By: Rakesh Nayak Manchi

Updated on:Jan 19, 2023 | 7:56 AM

ಸಿಡ್ನಿ: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ (New Zealand PM Jacinda Ardern) ಅವರು ಮುಂದಿನ ತಿಂಗಳು ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ರಾಜೀನಾಮೆ ನೀಡಲು ನನಗೆ ಇದು ಸೂಕ್ತ ಸಮಯವಾಗಿದೆ ಎಂದು ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನ್ಯೂಜಿಲೆಂಡ್ ಲೇಬರ್ ಪಾರ್ಟಿ ಗೆಲ್ಲುತ್ತದೆ ಎಂದು ತಾನು ನಂಬಿದ್ದೇನೆ ಮತ್ತು ಮುಂದಿನ ಲೇಬರ್ ನಾಯಕನನ್ನು ಆಯ್ಕೆ ಮಾಡಲು ಭಾನುವಾರ ಮತದಾನ ನಡೆಯಲಿದೆ ಎಂದು ಅರ್ಡೆರ್ನ್ ಹೇಳಿದರು. ಇದೇ ವೇಳೆ ಅಕ್ಟೋಬರ್ 14 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಹೇಳಿದರು.

“ರಾಜೀನಾಮೆ ನಿರ್ಧಾರವು ನನ್ನದೇ ಆಗಿದೆ ಎಂದು ಹೇಳಿದ ಅರ್ಡೆರ್ನ್, “ದೇಶವನ್ನು ಮುನ್ನಡೆಸುವುದು ಅತ್ಯಂತ ವಿಶೇಷವಾದ ಕೆಲಸವಾಗಿದೆ. ಆದರೆ ಅತ್ಯಂತ ಸವಾಲಿನ ಕೆಲಸವಾಗಿದೆ. ಅನಿರೀಕ್ಷಿತ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಇರಬೇಕಾಗುತ್ತದೆ. ನಾನು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ಫೆಬ್ರವರಿ 7ರ ಒಳಗೆ ನನ್ನ ಅವಧಿಯು ಕೊನೆಗೊಳ್ಳಲಿದೆ. ಹೊಸ ಲೇಬರ್ ಪಕ್ಷದ ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದರು.

ಇದನ್ನೂ ಓದಿ: World Economic Forum: ಭಾರತ ಬಲೂನ್​ನಂತೆ ಬಡ್ಡಿ ದರ ಹೆಚ್ಚಿಸಿಲ್ಲ, ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ; ಅಶ್ವಿನಿ ವೈಷ್ಣವ್

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಅರ್ಡೆರ್ನ್ ಅವರನ್ನು ಶ್ಲಾಘಿಸಿದರು. ಅವರು ಬುದ್ಧಿವಂತಿಕೆ ಮತ್ತು ಶಕ್ತಿಯೊಂದಿಗೆ ಹೇಗೆ ಮುನ್ನಡೆಸಬೇಕು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ ಮತ್ತು ನನಗೆ ಅವರು ಉತ್ತಮ ಸ್ನೇಹಿತ್ನೆ ಎಂದು ಹೇಳಿಕೊಂಡಿದ್ದಾರೆ.

2017ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾದ ಅರ್ಡೆರ್ನ್, ನಂತರ ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಸಮಗ್ರ ಗೆಲುವಿನತ್ತ ಮುನ್ನಡೆಸಿದರು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಪಕ್ಷ ಮತ್ತು ವೈಯಕ್ತಿಕ ಜನಪ್ರಿಯತೆ ಕುಸಿದಿದೆ.

ಅರ್ಡೆರ್ನ್ 2017 ರಲ್ಲಿ 37 ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾದಾಗ ಅವರು ನ್ಯೂಜಿಲೆಂಡ್‌ನ ಮೂರನೇ ಮಹಿಳಾ ನಾಯಕಿ ಮತ್ತು ವಿಶ್ವದ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು 2020 ರಲ್ಲಿ ಎರಡನೇ ಅವಧಿಗೆ ಮರು-ಚುನಾಯಿಸಲ್ಪಟ್ಟರು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 am, Thu, 19 January 23

ತಾಜಾ ಸುದ್ದಿ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಮಂತ್ರಿಯಾಗುವ ಯೋಗ! ಸಿದ್ದರಾಮಯ್ಯ
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಬೆಳಗಿನ ಕಾಮೆಂಟ್​ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿ, ಸಿಎಂ ಸಭೆಗೆ ಹಾಜರು!
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!