Tibet Avalanche: ಟಿಬೆಟ್ ಹಿಮಪಾತದಲ್ಲಿ 8 ಜನ ಸಾವು; ರಕ್ಷಣಾ ತಂಡವನ್ನು ಕಳುಹಿಸಿದ ಚೀನಾ

ಈ ಭೀಕರ ಹಿಮಪಾತದಲ್ಲಿ ಮೃತಪಟ್ಟವರ ದೇಹಗಳನ್ನು ಪತ್ತೆ ಮಾಡಲು ಹಾಗೂ ಇನ್ನೂ ಕಾಣೆಯಾಗಿರುವ ಜನರನ್ನು ಹುಡುಕಲು ಸಹಾಯ ಮಾಡಲು ಚೀನಾ ಸರ್ಕಾರ ರಕ್ಷಣಾ ತಂಡವನ್ನು ಕಳುಹಿಸಿದೆ.

Tibet Avalanche: ಟಿಬೆಟ್ ಹಿಮಪಾತದಲ್ಲಿ 8 ಜನ ಸಾವು; ರಕ್ಷಣಾ ತಂಡವನ್ನು ಕಳುಹಿಸಿದ ಚೀನಾ
ಟಿಬೆಟ್ ಹಿಮಪಾತ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 19, 2023 | 11:30 AM

ಬೀಜಿಂಗ್: ಟಿಬೆಟ್‌ನ ನೈಋತ್ಯ ಪ್ರದೇಶದ ನೈಂಗ್‌ಚಿ (Nyingchi) ನಗರದಲ್ಲಿ ಸಂಭವಿಸಿದ ಹಿಮಪಾತದಲ್ಲಿ (Avalanche) 8 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಹಿಮಪಾತದಲ್ಲಿ ಮೃತಪಟ್ಟವರ ದೇಹಗಳನ್ನು ಪತ್ತೆ ಮಾಡಲು ಹಾಗೂ ಇನ್ನೂ ಕಾಣೆಯಾಗಿರುವ ಜನರನ್ನು ಹುಡುಕಲು ಸಹಾಯ ಮಾಡಲು ಚೀನಾ ಸರ್ಕಾರ (China Government) ರಕ್ಷಣಾ ತಂಡವನ್ನು ಕಳುಹಿಸಿದೆ.

  1. ಮೈನ್ಲಿಂಗ್ ಕೌಂಟಿಯ ಪೈ ಗ್ರಾಮದ ನಡುವಿನ ರಸ್ತೆಯ ಒಂದು ವಿಭಾಗದಲ್ಲಿ ಮತ್ತು ಮೆಡಾಗ್ ಕೌಂಟಿಯ ಡೊಕ್ಸಾಂಗ್ ಲಾ ಸುರಂಗದ ದ್ವಾರದಲ್ಲಿ ಹಿಮಕುಸಿತ ಸಂಭವಿಸಿದೆ.
  2. ಮಂಗಳವಾರ ರಾತ್ರಿ 8 ಗಂಟೆಗೆ ಈ ಹಿಮಪಾತ ಸಂಭವಿಸಿದೆ. ಜನರು ಮತ್ತು ವಾಹನಗಳು ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿವೆ.
  3. ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾದವರ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.
  4. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ 131 ಜನರನ್ನು ಮತ್ತು 28 ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
  5. ಚೀನಾದ ತುರ್ತು ನಿರ್ವಹಣಾ ಸಚಿವಾಲಯವು ಹಿಮಕುಸಿತದ ನಂತರ ನೈಋತ್ಯ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ರಕ್ಷಣಾ ತಂಡವನ್ನು ಕಳುಹಿಸಿದೆ.
  6. ತುರ್ತು ರಕ್ಷಣಾ ಪ್ರಧಾನ ಕಚೇರಿಯು 246 ರಕ್ಷಣಾ ಸಿಬ್ಬಂದಿ, 70ಕ್ಕೂ ಹೆಚ್ಚು ವಾಹನಗಳು, 10 ದೊಡ್ಡ ಪ್ರಮಾಣದ ಉಪಕರಣಗಳು ಮತ್ತು 994 ಶೋಧ ಸಾಧನಗಳನ್ನು ಸ್ಥಳಕ್ಕೆ ಕಳುಹಿಸಿದೆ.
  7. ನೈಂಗ್ಚಿಯು ಸರಾಸರಿ ಸುಮಾರು 9,300 ಅಡಿ ಎತ್ತರದಲ್ಲಿದೆ. ಈ ಸ್ಥಳವನ್ನು ಟಿಬೆಟ್‌ನ ಸ್ವಿಟ್ಜರ್ಲೆಂಡ್ ಎಂದೂ ಕರೆಯುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ