AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

News9 Global Summit 2025: ನವ ಭಾರತದ ಬಗ್ಗೆ ವಿದೇಶಿಯರಲ್ಲೂ ಇದೆ ಕುತೂಹಲ: ಬರುಣ್ ದಾಸ್

ಸ್ಟಟ್​ಗರ್ಟ್​, ಅಕ್ಟೋಬರ್ 09: ನವ ಭಾರತದ ಬಗ್ಗೆ ವಿದೇಶಿಯರಿಗೆ ಎಷ್ಟು ಕುತೂಹಲವಿದೆ ಎಂಬುದರ ಕುರಿತು ಟಿವಿ9 ನೆಟ್​ವರ್ಕ್​ ಸಿಇಒ, ಎಂಡಿ ಬರುಣ್​ ದಾಸ್  ಮಾತನಾಡಿದ್ದಾರೆ. ಟಿವಿ9 ನೆಟ್‌ವರ್ಕ್ ನ್ಯೂಸ್9 ಗ್ಲೋಬಲ್ ಶೃಂಗಸಭೆ(News9 Global Summit)ಯನ್ನು ಜರ್ಮನಿಯಲ್ಲಿ ಆಯೋಜಿಸಿದೆ. ಈ ಬಾರಿ ಸಮ್ಮೇಳನ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ನವ ಭಾರತದ ಬಗ್ಗೆ ಮಾತನಾಡಿರುವ ಬರುಣ್ ದಾಸ್, ನವ ಭಾರತದ ಬಗ್ಗೆ ಕುತೂಹಲ ಹೊಂದಿರುವ ವಿದೇಶಿಯರನ್ನು ನಾನು ಹೆಚ್ಚಾಗಿ ಭೇಟಿಯಾಗಿದ್ದೇನೆ. ಫ್ರಾಂಕ್‌ಫರ್ಟ್‌ಗೆ ವಿಮಾನದಲ್ಲಿ ಇತ್ತೀಚೆಗೆ ನಡೆದ ಒಂದು […]

News9 Global Summit 2025: ನವ ಭಾರತದ ಬಗ್ಗೆ ವಿದೇಶಿಯರಲ್ಲೂ ಇದೆ ಕುತೂಹಲ: ಬರುಣ್ ದಾಸ್
ಬರುಣ್ ದಾಸ್
ನಯನಾ ರಾಜೀವ್
|

Updated on: Oct 09, 2025 | 1:30 PM

Share

ಸ್ಟಟ್​ಗರ್ಟ್​, ಅಕ್ಟೋಬರ್ 09: ನವ ಭಾರತದ ಬಗ್ಗೆ ವಿದೇಶಿಯರಿಗೆ ಎಷ್ಟು ಕುತೂಹಲವಿದೆ ಎಂಬುದರ ಕುರಿತು ಟಿವಿ9 ನೆಟ್​ವರ್ಕ್​ ಸಿಇಒ, ಎಂಡಿ ಬರುಣ್​ ದಾಸ್  ಮಾತನಾಡಿದ್ದಾರೆ. ಟಿವಿ9 ನೆಟ್‌ವರ್ಕ್ ನ್ಯೂಸ್9 ಗ್ಲೋಬಲ್ ಶೃಂಗಸಭೆ(News9 Global Summit)ಯನ್ನು ಜರ್ಮನಿಯಲ್ಲಿ ಆಯೋಜಿಸಿದೆ. ಈ ಬಾರಿ ಸಮ್ಮೇಳನ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ನವ ಭಾರತದ ಬಗ್ಗೆ ಮಾತನಾಡಿರುವ ಬರುಣ್ ದಾಸ್, ನವ ಭಾರತದ ಬಗ್ಗೆ ಕುತೂಹಲ ಹೊಂದಿರುವ ವಿದೇಶಿಯರನ್ನು ನಾನು ಹೆಚ್ಚಾಗಿ ಭೇಟಿಯಾಗಿದ್ದೇನೆ. ಫ್ರಾಂಕ್‌ಫರ್ಟ್‌ಗೆ ವಿಮಾನದಲ್ಲಿ ಇತ್ತೀಚೆಗೆ ನಡೆದ ಒಂದು ಮಾತುಕತೆ ಸದಾ ನನ್ನ ನೆನಪಿನಲ್ಲಿ ಉಳಿಯುವಂಥದ್ದಾಗಿದೆ ಎಂದು ಹೇಳಿದ್ದಾರೆ. ‘‘ಒಬ್ಬ ಜರ್ಮನ್ ವ್ಯಕ್ತಿಯ ಪಕ್ಕದಲ್ಲಿ ನಾನು ಕುಳಿತಿದ್ದೆ, ಅವರು ನವ ಭಾರತದ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು.

ತಕ್ಷಣವೇ ಅವರು ನವ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿಯೇ ಬಿಟ್ಟರು. ಇದು ಹೆಚ್ಚು ಆಲೋಚನೆಗೆ ಒಳಪಡಿಸುವ ಪ್ರಶ್ನೆಯಾಗಿರದಿದ್ದರೂ, ಕೇಳಿದವರ ಬುದ್ಧಿವಂತಿಕೆ ಅದರಲ್ಲಿತ್ತು. ಒಂದು ಕ್ಷಣ ಯೋಚಿಸುವಂತೆ ಮಾಡಿತು. ಬಳಿಕ ನಾನು ಆ ವ್ಯಕ್ತಿಗೆ ಆಧುನಿಕತೆಗೆ ಬೇಗ ತೆರೆದುಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ. ಜತೆಗೆ ಭಾರತೀಯತೆಯು ಎಂಬುದು ಎಲ್ಲವನ್ನೂ ಒಳಗೊಳ್ಳುವುದು  ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದಾಗಿದೆ’’ ಎಂದು ಹೇಳಿದ್ದಾಗಿ ಬರುಣ್ ದಾಸ್ ಹೇಳಿದರು.

ಮತ್ತಷ್ಟು ಓದಿ: Duologue NXTನಲ್ಲಿ ಬರುಣ್ ದಾಸ್ ಜತೆಗೆ ಶಾಲಿನಿ ಪಾಸಿ ವಿಶೇಷ ಸಂದರ್ಶನ

ಇಡೀ ಜಗತ್ತು ಈಗ ಒಂದು ತತ್ವ, ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸುವ ಏಕೈಕ ಮಾರ್ಗದಲ್ಲಿ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿರಬೇಕು. ಆಧುನಿಕತೆಯತ್ತ ಭಾರತ ಹೇಗೆ ವಾಲುತ್ತಿದೆ ಎಂಬುದಕ್ಕೆ ವೈರ್‌ಲೆಸ್ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಯಲ್ಲೇ ನಾವು ಅರ್ಥ ಮಾಡಿಕೊಳ್ಳಬಹುದು.

Summit

ಆಗಸ್ಟ್ ತಿಂಗಳಲ್ಲಿ 20 ಶತಕೋಟಿಗೂ ಹೆಚ್ಚು ವಹಿವಾಟುಗಳು ನಡೆದಿವೆ, ಇವೆಲ್ಲವೂ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಅಥವಾ ಯುಪಿಐ ವ್ಯವಸ್ಥೆಯಲ್ಲಿ ನಡೆದಿವೆ. ಕಡು ಬಡವ ಕೂಡ ಭಾರತದಲ್ಲಿ ಸ್ಮಾರ್ಟ್​ಫೋನ್ ಹೊಂದಿದ್ದು ಅದರಲ್ಲಿ ಮಾಹಿತಿ ಮತ್ತು ಸೇವೆಗಳನ್ನು ಪಡೆಯುತ್ತಿದ್ದಾರೆ. ಅವರ ಜೀವನೋಪಾಯಕ್ಕೆ ಅತ್ಯಗತ್ಯ.

ಶತಕೋಟಿ ಡಾಲರ್ ಸರ್ಕಾರಿ ಸಬ್ಸಿಡಿಗಳನ್ನು ನೇರವಾಗಿ ಉದ್ದೇಶಿತ ಫಲಾನುಭವಿಗಳಿಗೆ ಯಾವುದೇ ಸೋರಿಕೆಯಿಲ್ಲದೆ ವರ್ಗಾಯಿಸಬಹುದು. ಆದ್ದರಿಂದ ಭಾರತದಲ್ಲಿ  ಸ್ಮಾರ್ಟ್​​ಫೋನ್​ಅನ್ನು ಆರ್ಥಿಕ ಸಮೃದ್ಧಿಯ ಪ್ರಬಲ ಸಾಧವನ್ನಾಗಿ ಪರಿವರ್ತಿಸಲಾಗಿದೆ ಎಂದು ಬರುಣ್ ದಾಸ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ