ನೈಜೀರಿಯಾದ ಕ್ಯಾಥೋಲಿಕ್ ಚರ್ಚ್​ನಲ್ಲಿ ಭೀಕರ ಹತ್ಯಾಕಾಂಡ; ಬಂದೂಕುಧಾರಿಗಳ ದಾಳಿಯಿಂದ 50 ಜನ ಸಾವು

| Updated By: ಸುಷ್ಮಾ ಚಕ್ರೆ

Updated on: Jun 06, 2022 | 9:35 AM

Nigeria Church Attack: ಓವೊ ಪಟ್ಟಣದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಭಕ್ತರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಸ್ಫೋಟಕಗಳನ್ನು ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 50 ಜನ ಸಾವನ್ನಪ್ಪಿದ್ದಾರೆ.

ನೈಜೀರಿಯಾದ ಕ್ಯಾಥೋಲಿಕ್ ಚರ್ಚ್​ನಲ್ಲಿ ಭೀಕರ ಹತ್ಯಾಕಾಂಡ; ಬಂದೂಕುಧಾರಿಗಳ ದಾಳಿಯಿಂದ 50 ಜನ ಸಾವು
ನೈಜೀರಿಯಾ ಚರ್ಚ್​​ನಲ್ಲಿ ಗುಂಡಿನ ದಾಳಿ
Image Credit source: Reuters
Follow us on

ಲಾಗೋಸ್: ನೈಋತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನ ಮೇಲೆ ಭಾನುವಾರ ಸಾಮೂಹಿಕ ದಾಳಿ ನಡೆಸಿದ ಬಂದೂಕುಧಾರಿಗಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 50 ಜನರನ್ನು ಕೊಂದಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯರು ಮತ್ತು ಮಾಧ್ಯಮ ವರದಿಗಳು ಮಾಹಿತಿ ನೀಡಿದ್ದು, ಬಂದೂಕುಧಾರಿಗಳು ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗಿನ ಜನರ ಮೇಲೆ ಗುಂಡು ಹಾರಿಸಿದರು. ಚರ್ಚ್​​ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಗುಂಡು ಹಾರಿಸಿ, ಕೊಲೆ ಮಾಡಿದ್ದಾರೆ ಎಂದು ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ ಹೇಳಿದ್ದಾರೆ.

ಓವೊ ಪಟ್ಟಣದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅವರು ಹೇಳಲಿಲ್ಲ. ಆದರೆ ಪೊಲೀಸರು ದಾಳಿಯ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. ದಾಳಿಯ ಘಟನಾ ಸ್ಥಳಕ್ಕೆ ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಭೇಟಿ ನೀಡಿದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವಾರೊಟಿಮಿ ಅಕೆರೆಡೊಲು ಅವರು ಭಾನುವಾರದ ಘಟನೆಯನ್ನು “ಮಹಾನ್ ಹತ್ಯಾಕಾಂಡ” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ
ಪ್ರವಾದಿ ಬಗ್ಗೆ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆಗೆ ಕತಾರ್ ಕಿಡಿ; ಭಾರತೀಯ ರಾಯಭಾರಿಗೆ ಸಮನ್ಸ್
ಬಾಂಗ್ಲಾದೇಶ: ಶಿಪ್ಪಿಂಗ್ ಕಂಟೇನರ್ ಡಿಪೋದಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ 49ಕ್ಕೆ ಏರಿಕೆ
ಬಾಂಗ್ಲಾದೇಶ: ಹೊತ್ತಿ ಉರಿದ ಕಂಟೈನರ್ ಡಿಪೋ, 16 ಮಂದಿ ಸಾವು, 450 ಮಂದಿಗೆ ಗಂಭೀರ ಗಾಯ

ಇದನ್ನೂ ಓದಿ: ಅಮೆರಿಕದ ಒಕ್ಲಾಹಾಮಾದಲ್ಲಿ ಜನರ ಮೇಲೆ ಮತ್ತೆ ಗುಂಡಿನ ದಾಳಿ: ಗುಂಡು ಹಾರಿಸಿದ ದುಷ್ಕರ್ಮಿ ಸೇರಿ ನಾಲ್ವರ ಸಾವು

ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ. “ಚರ್ಚ್​​ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಅಪರಿಚಿತ ಬಂದೂಕುಧಾರಿಗಳು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ಮಾಡಿದರು. ಈ ವೇಳೆ ಅನೇಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಪ್ಯಾರಿಷ್‌ನ ಬಿಷಪ್ ಮತ್ತು ಪಾದ್ರಿಗಳು ದಾಳಿಯಿಂದ ಹಾನಿಗೊಳಗಾಗದೆ ಬದುಕುಳಿದಿದ್ದಾರೆ” ಎಂದು ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಹೇಳಿದ್ದಾರೆ.

ಓವೊ ಪಟ್ಟಣದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಭಕ್ತರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಸ್ಫೋಟಕಗಳನ್ನು ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 50 ಜನ ಸಾವನ್ನಪ್ಪಿದ್ದಾರೆ ಎಂದು ಹಲವಾರು ನೈಜೀರಿಯಾದ ಸುದ್ದಿವಾಹಿನಿಗಳು ಹೇಳಿವೆ. ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Mon, 6 June 22