Russia-Ukraine War: ಉಕ್ರೇನ್ನ ರಾಜಧಾನಿ ಕೀವ್ನ ಕೆಲವೆಡೆ ಮತ್ತೆ ಬಾಂಬ್ ಸ್ಫೋಟ
ರಷ್ಯಾ ಹಾಗೂ ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಉಕ್ರೇನ್ನ ರಾಜಧಾನಿ ಕೀವ್ನ ಕೆಲವೆಡೆ ಮತ್ತೆ ಬಾಂಬ್ ಸ್ಪೋಟದ ಸದ್ದು ಕೇಳಿಬಂದಿದೆ. ಈ ಕುರಿತು ಮೇಯರ್ ವಿಟಾಲಿ ಕ್ಲಿಶ್ಚಿಕೋ ಮಾಹಿತಿ ನೀಡಿದ್ದು, ಡಾರ್ನಿಟ್ಸ್ಕಿ ಹಾಗೂ ಡ್ನಿಪ್ರೋವ್ಸ್ಕಿ ಜಿಲ್ಲೆಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ರಷ್ಯಾ (Russia) ಹಾಗೂ ಉಕ್ರೇನ್(Ukraine) ನಡುವೆ ಸಮರ ಮುಂದುವರೆದಿದ್ದು, ಉಕ್ರೇನ್ನ ರಾಜಧಾನಿ ಕೀವ್ನ ಕೆಲವೆಡೆ ಮತ್ತೆ ಬಾಂಬ್ ಸ್ಪೋಟದ ಸದ್ದು ಕೇಳಿಬಂದಿದೆ. ಈ ಕುರಿತು ಮೇಯರ್ ವಿಟಾಲಿ ಕ್ಲಿಶ್ಚಿಕೋ ಮಾಹಿತಿ ನೀಡಿದ್ದು, ಡಾರ್ನಿಟ್ಸ್ಕಿ ಹಾಗೂ ಡ್ನಿಪ್ರೋವ್ಸ್ಕಿ ಜಿಲ್ಲೆಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ರಾಯ್ಟರ್ಸ್ ವರದಿ ಮಾಡಿದ್ದು, ಸ್ಫೋಟದ ಬಳಿಕ ನಗರದ ತುಂಬಾ ಹೊಗೆ ತುಂಬಿಕೊಂಡಿರುವುದಾಗಿ ತಿಳಿಸಿದೆ.
ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಮತ್ತು ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಯುಎನ್ ಭದ್ರತಾ ಮಂಡಳಿಯಲ್ಲಿ ಮಾಡಲಾಗಿದೆ.
ಸಭೆಯಲ್ಲಿ ನಿರ್ಣಯದ ಪರವಾಗಿ 11 ಮತಗಳು ಬಂದಿದ್ದವು. ರಷ್ಯಾ ಮತ ಹಾಕದೇ ದೂರ ಉಳಿದರೆ, ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಟಸ್ಥವಾಗಿತ್ತು.
ಪರಿಸ್ಥಿತಿಯು ಚಿಂತಾಜನಕವಾಗಿದೆ. ಆಹಾರ, ಇಂಧನ, ಔಷಧಗಳ ಕೊರತೆ ಇದೆ, ನಮ್ಮ ಸೇನೆಯು ಜನರನ್ನು ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೇಯರ್ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಂದ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧದ ವಿರುದ್ಧ ಜಿನೀವಾದಲ್ಲಿನ ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ವಿದೇಶಿ ಸಹೋದ್ಯೋಗಿಗಳಿಗೆ ಕಟುವಾದ ಪತ್ರವನ್ನು ಕಳುಹಿಸುವ ಮೊದಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು.
ನನ್ನ ರಾಜತಾಂತ್ರಿಕ ವೃತ್ತಿಜೀವನದ ಇಪ್ಪತ್ತು ವರ್ಷಗಳ ಕಾಲ ನಾನು ನಮ್ಮ ವಿದೇಶಾಂಗ ನೀತಿಯ ವಿಭಿನ್ನ ತಿರುವುಗಳನ್ನು ನೋಡಿದ್ದೇನೆ, ಆದರೆ ಈ ಸಲದಂತೆ ನಾನು ಎಂದಿಗೂ ನನ್ನ ದೇಶದ ಬಗ್ಗೆ ನಾಚಿಕೆಪಡಲಿಲ್ಲ ಎಂದು ಅವರು ರಷ್ಯಾದ ಆಕ್ರಮಣದ ದಿನಾಂಕವನ್ನು ಉಲ್ಲೇಖಿಸಿದ್ದರು.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಪೇಜ್ ರೀಫ್ರೆಶ್ ಮಾಡಿ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sun, 5 June 22