ಉಕ್ರೇನ್​ಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಆ ದೇಶದ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಇಷ್ಟರಲ್ಲೇ ಚರ್ಚಿಸಲಿದ್ದಾರೆ

ಪೋಪ್ ಫ್ರಾನ್ಸಿಸ್ ಅವರು ಪರೋಕ್ಷವಾಗಿ ಅನೇಕ ಸಲ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರಿದ ಕ್ರಮವನ್ನು ಖಂಡಿಸಿರುವರಾದರೂ ಒಮ್ಮೆಯೂ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಹಲವಾರು ಬಾರಿ ‘ಸಮರ್ಥನಿಯವಲ್ಲದ ಆಕ್ರಮಣ,’ ‘ಅತಿಕ್ರಮಣ’ ಮುಂತಾದ ಪದಗಳನ್ನು ಬಳಸಿದ್ದಾರೆ

ಉಕ್ರೇನ್​ಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಆ ದೇಶದ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಇಷ್ಟರಲ್ಲೇ ಚರ್ಚಿಸಲಿದ್ದಾರೆ
ಪೋಪ್ ಫ್ರಾನ್ಸಿಸ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 05, 2022 | 8:06 AM

Vatican City: ತಾವು ಉಕ್ರೇನ್ ಗೆ (Ukraine) ಭೇಟಿ ನೀಡುವ ಸಾಧ್ಯತೆ ಕುರಿತು ಆ ದೇಶದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಪೋಪ್ ಫ್ರಾನ್ಸಿಸ್ (Pope Francis) ಶನಿವಾರ ವ್ಯಾಟಿಕನ್ ಸಿಟಿಯಲ್ಲಿ (Vatican City) ಹೇಳಿದರು. ಇಲ್ಲಿನ ಮುಖ್ಯ ಪ್ರಾಂಗಣವೊಂದರಲ್ಲಿ ಮಕ್ಕಳೊಂದಿಗೆ ಶನಿವಾರ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೋಪ್ ಅವರು ಈ ಸಂಗತಿಯನ್ನು ಬಹಿರಂಗಪಡಿಸಿದರು. ಸಾಚರ್ ಹೆಸರಿನ ಉಕ್ರೇನ್ ದೇಶದ ಒಬ್ಬ ಬಾಲಕ ಪೋಪ್ ಅವರಿಗೆ, ‘ನೀವು ಉಕ್ರೇನ್ ಗೆ ಬಂದು ಅಲ್ಲಿ ಭಯಂಕರ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳನ್ನು ರಕ್ಷಿಸುವಿರಾ?’ ಅಂತ ಪ್ರಶ್ನಿಸಿದ.

ಮೊಣಕಾಲಿನ ಸಮಸ್ಯೆಯ ಕಾರಣ ಓಡಾಡಲು ವ್ಹೀಲ್ ಚೇರ್ ಬಳಸುತ್ತಿರುವ 85-ವರ್ಷ-ವಯಸ್ಸಿನ ಪೋಪ್, ಉಕ್ರೇನ್ ಮಕ್ಕಳ ಬಗ್ಗೆ ತಾವು ಪದೇಪದೆ ಯೋಚಿಸುತ್ತಿರುವುದಾಗಿ ಹೇಳಿ ಅಲ್ಲಿಗೆ ಹೋಗುವ ಇಚ್ಛೆಯಿದ್ದು ಸೂಕ್ತ ಸಮಯಕ್ಕಾಗಿ ಎದುರು ನೋಡುತ್ತಿರುವುನೆಂದು ಬಾಲಕನಿಗೆ ಹೇಳಿದರು.

‘ವಿಶ್ವದ ಉಳಿದ ಭಾಗಕ್ಕೆ ಒಳಿತಿಗಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದಾದ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಬಹಳ ಸೂಕ್ತವಾದ ಸಮಯದಲ್ಲ್ಲಿ ಅತ್ಯಂತ ಸಮರ್ಪಕವಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ,’ ಎಂದು ಪೋಪ್ ಹೇಳಿದರು. ವ್ಯಾಟಿಕನ್ ಸಿಟಿಯಿಂದ ಲಭ್ಯವಾಗಿರುವ ವರದಿಯ ಪ್ರಕಾರ ಅವರು ಸದರಿ ವಿಷಯದ ಬಗ್ಗೆ ವಿಶದವಾಗಿ ಮಾತಾಡಲಿಲ್ಲ.

‘ಉಕ್ರೇನ್ ಸರ್ಕಾರದ ಪ್ರತಿನಿಧಿಗಳ ನಿಯೋಗವೊಂದು ನನ್ನೊಂದಿಗೆ ಮಾತುಕತೆ ನಡೆಸಲು ಇಲ್ಲಿಗೆ ಮುಂದಿನ ವಾರ ಬರಲಿದೆ. ನಾನು ಅಲ್ಲಿಗೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆಯೂ ಆಗ ಚರ್ಚಿಸಲಾಗುವುದು. ಮಾತುಕತೆಯಲ್ಲಿ ಏನಾಗುತ್ತೋ ನೋಡೋಣ,’ ಎಂದು ಪೋಪ್ ಹೇಳಿದರು. ಆದರೆ ಯಾವುದೇ ವಿವರಣೆ ಅವರು ನೀಡಲಿಲ್ಲ.

ಉಕ್ರೇನಲ್ಲಿ ಜಾರಿಯಲ್ಲಿರುವ ಯುದ್ಧದ ಹಿನ್ನೆಲೆಯಲ್ಲಿ ವ್ಯಾಟಿಕನ್ ಬಹಳ ಸೂಕ್ಷ್ಮವಾಗಿ ರಾಜತಾಂತ್ರಿಕ ಸಮತೋಲನದ ನಡೆಯನ್ನು ಜಾರಿಯಲ್ಲಿಡಬೇಕಾಗಿದೆ. ಯುದ್ಧವನ್ನು ಕೊನೆಗಾಣಿಸಲು ಅದು ಹಲವಾರು ಬಾರಿ ಮಧ್ಯವರ್ತಿಯಾಗಿ ನೆರವಾಗುವ ಪ್ರಸ್ತಾಪ ಮಾಡಿದೆ.

ಪೋಪ್ ಫ್ರಾನ್ಸಿಸ್ ಅವರು ಪರೋಕ್ಷವಾಗಿ ಅನೇಕ ಸಲ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರಿದ ಕ್ರಮವನ್ನು ಖಂಡಿಸಿರುವರಾದರೂ ಒಮ್ಮೆಯೂ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಹಲವಾರು ಬಾರಿ ‘ಸಮರ್ಥನಿಯವಲ್ಲದ ಆಕ್ರಮಣ,’ ‘ಅತಿಕ್ರಮಣ’ ಮುಂತಾದ ಪದಗಳನ್ನು ಬಳಸಿದ್ದಾರೆ ಮತ್ತು ನಾಗರಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ, ಕೀವ್ ಪಟ್ಟಣದ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ಉಕ್ರೇನ್‌ನ ಬೈಜಾಂಟೈನ್-ರೀಟ್ ಕ್ಯಾಥೋಲಿಕ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಸ್ವಿಯಾಟೊಸ್ಲಾವ್ ಶೆವ್‌ಚುಕ್ ಮತ್ತು ವ್ಯಾಟಿಕನ್‌ಗೆ ಉಕ್ರೇನ್ ರಾಯಭಾರಿ ಆಂಡ್ರಿ ಯುರಾಶ್ ಮೊದಲಾದವರು ಪೋಪ್ ಫ್ರಾನ್ಸಿಸ್ ಅವರನ್ನು ಉಕ್ರೇನ್ ಗೆ ಆಹ್ವಾನಿಸಿದ್ದಾರೆ.

ಪೋಪ್ ಉಲ್ಲೇಖಿಸಿರುವ ಮೀಟಿಂಗ್ ಬಗ್ಗೆ ತನ್ನಲ್ಲಿ ಯಾವದೇ ವಿವರ ಇಲ್ಲವೆಂದು ಯುರಾಶ್ ಶನಿವಾರದಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್