ಸೂರ್ಯನ ಮೇಲಿರುವ ಬೆಂಕಿಯ ಕಂದರ ಸ್ಫೋಟಗೊಳ್ಳುತ್ತದೆ: ನಾಳೆ ಭೂಮಿಗೆ ಅಪ್ಪಳಿಸಲಿದೆ ಭೂಕಾಂತೀಯ ಬಿರುಗಾಳಿ

ಸೂರ್ಯನ ಮೇಲಿರುವ ಬೆಂಕಿಯ ಕಂದರ ಸ್ಫೋಟಗೊಳ್ಳುತ್ತದೆ: ನಾಳೆ ಭೂಮಿಗೆ ಅಪ್ಪಳಿಸಲಿದೆ ಭೂಕಾಂತೀಯ ಬಿರುಗಾಳಿ
ಪ್ರಾತಿನಿಧಿಕ ಚಿತ್ರ

ಭೂಕಾಂತೀಯ ಬಿರುಗಾಳಿಗಳು ಭೂಮಿಯ ಮ್ಯಾಗ್ನೆಟೋಸ್ಪಿಯರ್‌ನ ಪ್ರಮುಖ ಅಡಚಣೆಯಾಗಿದ್ದು, ಸೌರ ಮಾರುತದಿಂದ ಭೂಮಿಯ ಸುತ್ತಲಿನ ಬಾಹ್ಯಾಕಾಶ ಪರಿಸರಕ್ಕೆ ಶಕ್ತಿಯ ಅತ್ಯಂತ ಪರಿಣಾಮಕಾರಿ ವಿನಿಮಯ ಆದಾಗ ಸಂಭವಿಸುತ್ತದೆ.

TV9kannada Web Team

| Edited By: Rashmi Kallakatta

Apr 06, 2022 | 9:46 PM

ಸೌರ ಚಕ್ರವು ಹೆಚ್ಚಾಗುವುದರೊಂದಿಗೆ ಮತ್ತು ಸೂರ್ಯನು ಬಾಹ್ಯಾಕಾಶದ ನಿರ್ವಾತದಲ್ಲಿ ಪ್ಲಾಸ್ಮಾವನ್ನು ಹೊರ ಹಾಕುವುದರಿಂದ ಭೂಮಿಯು ಸ್ಪ್ಲ್ಯಾಶ್ ಜೋನ್ ನಲ್ಲಿದೆ. ಅಂದರೆ ಉಬ್ಬರವಿಳಿತ ಸಂಭವಿಸುವ ಪ್ರದೇಶ. ನ್ಯಾಶನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (Noaa) ಅಧೀನದಲ್ಲಿರುವ ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರವು ಬುಧವಾರ ಮತ್ತು ಗುರುವಾರದಂದು ಸೌರ ವಿಕಿರಣ ಬಿರುಗಾಳಿಯನ್ನು (solar radiation storm) ಊಹಿಸಿದೆ. ಏಕೆಂದರೆ ಭಾನುವಾರ ಮೇಲ್ಮೈಯಲ್ಲಿ ತೆರೆದುಕೊಂಡ ಕಣಿವೆಯಿಂದ ಸೂರ್ಯನು ಪ್ಲಾಸ್ಮಾದ ಫಿಲಮೆಂಟ್ ಗಳನ್ನು ಹೊರಹಾಕುತ್ತಾನೆ. ಅಮೆರಿಕದ  ಬಾಹ್ಯಾಕಾಶ ವೀಕ್ಷಕರು ಸೂರ್ಯನ ಮೇಲೆ S22W30 ಬಳಿ ಕೇಂದ್ರೀಕೃತವಾಗಿರುವ ಫಿಲಮೆಂಟ್ ಸ್ಫೋಟದಿಂದ ಕರೋನಲ್ ಮಾಸ್ ಎಜೆಕ್ಷನ್‌ನ ನಿರೀಕ್ಷಿತ ಆಗಮನಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಭೂಕಾಂತೀಯ ಬಿರುಗಾಳಿಯ ಎಚ್ಚರಿಕೆಯನ್ನು ನೀಡಿದರು. S1 (ಮೈನರ್) ಮಿತಿಯನ್ನು ಮೀರಿದ ಪ್ರೋಟಾನ್ ಮಟ್ಟಗಳೊಂದಿಗೆ ಭೂಮಿಯ ಮೇಲೆ ಸೌರ ವಿಕಿರಣ ಬಿರುಗಾಳಿ  ಸಂಭವಿಸುವ ಸಾಧ್ಯತೆಯಿದೆ ಎಂದು ಸಂಸ್ಥೆ ಎಚ್ಚರಿಸಿದೆ.  ಭೂಕಾಂತೀಯ ಬಿರುಗಾಳಿಯು ಏಪ್ರಿಲ್ 7 ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಇದು ಪವರ್ ಗ್ರಿಡ್‌ಗಳಲ್ಲಿ ಏರಿಳಿತಗಳಿಗೆ ಕಾರಣವಾಗಬಹುದು. ಇತರ ಜತೆಗೆ ಕಡಿಮೆ ಭೂಮಿಯ ಕಕ್ಷೆಯಲ್ಲಿನ (Low Earth Orbit) ಉಪಗ್ರಹಗಳ ಮೇಲೆ ಸಣ್ಣ ಪರಿಣಾಮ ಮತ್ತು ಹೆಚ್ಚಿನ ಎತ್ತರದಲ್ಲಿ ಪೋಲಾರ್ ಲೈಟ್​​ಗಳಿಗೆ ಕಾರಣವಾಗಬಹುದು. ಭೂಕಾಂತೀಯ ಚಂಡಮಾರುತವು ಸಣ್ಣ ರೇಡಿಯೊ ಬ್ಲ್ಯಾಕೌಟ್‌ಗಳಿಗೆ ಕಾರಣವಾಗಬಹುದು.

ಭೂಕಾಂತೀಯ ಬಿರುಗಾಳಿಗಳು ಭೂಮಿಯ ಮ್ಯಾಗ್ನೆಟೋಸ್ಪಿಯರ್‌ನ ಪ್ರಮುಖ ಅಡಚಣೆಯಾಗಿದ್ದು, ಸೌರ ಮಾರುತದಿಂದ ಭೂಮಿಯ ಸುತ್ತಲಿನ ಬಾಹ್ಯಾಕಾಶ ಪರಿಸರಕ್ಕೆ ಶಕ್ತಿಯ ಅತ್ಯಂತ ಪರಿಣಾಮಕಾರಿ ವಿನಿಮಯ ಆದಾಗ ಸಂಭವಿಸುತ್ತದೆ.

ಬೆಂಕಿಯ ಕಣಿವೆಯ ತೆರೆಯುವಿಕೆ ಎಂದರೇನು? ಸ್ಫೋಟದ ಇತ್ತೀಚಿನ ಮೂಲವು ಬೆಂಕಿಯ ಕಣಿವೆ ಎಂದು ಕರೆಯಲ್ಪಡುವ ಸ್ಥಳವಾಗಿದೆ, ಇದು ಬಾಹ್ಯಾಕಾಶ ಹವಾಮಾನದ ಪ್ರಕಾರ  ಸೂರ್ಯನ ವಾತಾವರಣದಲ್ಲಿ ತೆರೆದುಕೊಂಡಿರುವ ಕಾಂತೀಯತೆಯ ಡಾರ್ಕ್ ಫಿಲಮೆಂಟ್ ಆಗಿದೆ. ಕಣಿವೆಯ ಗೋಡೆಗಳು ಕನಿಷ್ಠ 20,000 ಕಿಮೀ ಎತ್ತರ ಮತ್ತು 10 ಪಟ್ಟು ಉದ್ದವಾಗಿದೆ. ಕಾಂತೀಯ ತಂತುಗಳ ತುಣುಕುಗಳು ಸ್ಫೋಟದ ಸ್ಥಳದಿಂದ ಭೂಮಿಗೆ ಬರುವ ಸಿಎಂಇಗಳ (coronal mass ejection) ರೂಪದಲ್ಲಿ ಹೊರಹೊಮ್ಮಬಹುದು ಎಂದು ತಜ್ಞರು ಊಹಿಸುತ್ತಾರೆ.  ಸೋಲಾರ್ ಮತ್ತು ಹೀಲಿಯೋಸ್ಫೆರಿಕ್ ವೀಕ್ಷಣಾಲಯವು ಸ್ಫೋಟದ ಸ್ಥಳದಿಂದ ಹೊರಹೊಮ್ಮುವ ಅಸಮಪಾರ್ಶ್ವದ ಪೂರ್ಣ-ಹಾಲೋ ಸಿಎಂಇ ಅನ್ನು ಸೆರೆಹಿಡಿದಿದೆ. ಆದರೆ ಸಿಎಂಇಯ ಬಹುಪಾಲು ಭೂಮಿಯನ್ನು ತಾಕುವುದಿಲ್ಲ, ಅದರಲ್ಲಿ ಕೆಲವು ಹೊಡೆಯುತ್ತವೆ. “ಬಿರುಗಾಳಿಯ  ಮೋಡದ ಒಂದು ಭಾಗವು ಭೂಮಿಯತ್ತ ಸಾಗುತ್ತಿರುವಂತೆ ತೋರುತ್ತಿದೆ. ಏಪ್ರಿಲ್ 5 ಅಥವಾ 6 ರಂದು ಇವು ನಮ್ಮ ಗ್ರಹದ ಕಾಂತಕ್ಷೇತ್ರವನ್ನು ಹೊಡೆಯಬಹುದು. ಒಂದು ಸಣ್ಣ ಹೊಡೆತವು ಸಣ್ಣ G1-ವರ್ಗದ ಭೂಕಾಂತೀಯ ಬಿರುಗಾಳಿ ಉಂಟುಮಾಡಬಹುದು,” ಎಂದು ಸ್ಪೇಸ್‌ವೆದರ್ ತನ್ನ ವೀಕ್ಷಣೆಯಲ್ಲಿ ತಿಳಿಸಿದೆ.

ಸೋಮವಾರವೂ ಇದೇ ರೀತಿಯ ಸ್ಫೋಟ ಕಂಡುಬಂದಿದೆ. ಆದಾಗ್ಯೂ, ಸಿಎಂಇ ಭೂಮಿಗೆ ಅಪ್ಪಳಿಸುತ್ತದೆಯೇ ಅಥವಾ ಇಲ್ಲವೇ ಎಂದು ತಜ್ಞರು ಇನ್ನೂ ಖಚಿತವಾಗಿ ಹೇಳಿಲ್ಲ.

ಭೂಕಾಂತೀಯ ಬಿರುಗಾಳಿ ಭೂಮಿಗೆ ಅಪ್ಪಳಿಸುತ್ತಿರುವುದು ಇದೇ ಮೊದಲಲ್ಲ, ಸೂರ್ಯನು ಈಗ ತನ್ನ ಹೊಸ ಸೌರ ಚಕ್ರದ ಚಟುವಟಿಕೆಯನ್ನು ಹೆಚ್ಚಿಸುತ್ತಿರುವುದರಿಂದ ಬಾಹ್ಯಾಕಾಶ ಹವಾಮಾನ ಘಟನೆಗಳ ಆವರ್ತನವು ಹೆಚ್ಚಾಗಿದೆ. ಭೂಮಿಗೆ ಅಪ್ಪಳಿಸುವ ವೇಗವು ಕಡಿಮೆ ಆಗಿದ್ದರೂ, ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್ ಉಪಗ್ರಹಗಳು ಈ ವರ್ಷದ ಆರಂಭದಲ್ಲಿ ಭಾರಿ ಹೊಡೆತವನ್ನು ಎದುರಿಸಿದವು. ಸೂರ್ಯನಿಂದ ಬಂದ ಸಿಎಂಇ ಭೂಮಿಯ ಕಕ್ಷೆಗೆ ಅಪ್ಪಳಿಸಿದಾಗ 40 ಸ್ಟಾರ್‌ಲಿಂಕ್ ಉಪಗ್ರಹಗಳು ಬಾಹ್ಯಾಕಾಶದಲ್ಲಿ ನಾಶವಾದವು.

ಇದನ್ನೂ ಓದಿ: Viral Video: ಮುನ್ನಾರ್​ ರಸ್ತೆಯಲ್ಲಿ ಬಸ್​ ಎದುರು ಬಂದು ಗಾಜು ಒಡೆದ ಕಾಡಾನೆ; ಚಾಲಕ ಮಾಡಿದ್ದೇನು?

Follow us on

Most Read Stories

Click on your DTH Provider to Add TV9 Kannada